ಲೋಕದರ್ಶನ ವರದಿ
ಕಂಪ್ಲಿ 22: ರಾಮಸಾಗರ ಭಾಗದ ಕೆಲ ರೈತರು ಅಣೆಕಟ್ಟಿನಿಂದ ಬರುವ ನೀರು ಕಾಲುವೆಗಳಲ್ಲಿ ನೀರು ಸೊರುತ್ತವೆ ಮಾಗಣಿ ಗದ್ದೆಗಳಿಗೆ ನೀರು ಹೊಗುತ್ತಿಲ್ಲ. ಕಾಲುವೆ ಹೊಳು. ಜಂಗಲ್ ಬೆಳೆದಿದೆಂದು ಅಧಿಕಾರಿಗಳ ಗಮನಕ್ಕೆ ತಂದರು ಯಾವ ಕೆಲಸಗಳು ಮಾಡಿಲ್ಲ ಎಂದು ದೊರಿದರು ರಾಮಸಾಗರದ ರೈತರು ನೀರಾವರಿ ಅಧಿಕಾರಿಗಳಿಗೆ ತರಾಟೆ ತಗೆದುಕೊಂಡರು
ಶಾಸಕ ಜೆ.ಎನ್.ಗಣೇಶ್. ರೈತರಿಗೆ ಪದೇ ಪದೇ ತೊಂದರೆಯಾಗಲಾರದೆ ತಾತ್ಕಾಲಿಕವಾಗಿ ರಿಂಗ್ ಬಂಡ್ ಹೆಡ್ ಸ್ಲೋವ್ ಹಾಕಿ ಕಾಲುವೆಗಳಿಗೆ ನೀರು ಬರುವ ವ್ಯವಸ್ಥೆಮಾಡಬೇಕು. ಕಂಪ್ಲಿ.ರಾಮಸಾಗರ. ಬೆಳಗೋಡ ಕಾಲುವೆಗಳಿಗೆ ಆಧುನೀಕರಣಕ್ಕೆ ಸರಕಾರ 72ಕೋಟಿ ಅನುದಾನ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಗಾರಿಗೆ ಭೂಮಿ ಮಾಡಲಾಗುವುದು ಆರಂಭಿಸಲಾಗುವುದರು ರಾಮಸಾಗರದ ರೈತರ ನಾನು ಸದಾ ರೈತರಪರವಾಗಿ ಇರುತ್ತವೆ ಎಂದು ಶಾಸಕ ಗಣೇಶರವರು ಹೇಳಿದರು.
ಸಮೀಪದ ರಾಮಸಾಗರದ ನಗರೇಶ್ವರ ದೇಗುಲದ ಆವರಣದಲ್ಲಿ ವಿಜಯನಗರ ಕಾಲುವೆ(ಹಳೆ ಮಾಗಾಣಿ) ರೈತರ ಬೇಸಾಯದ ನೀರಿನ ಸಮಸ್ಯೆ ಕುರಿತು ನಡೆದ ಅಧಿಕಾರಿಗಳು ಮತ್ತು ರೈತರ ನಡುವೆ ನಡೆದ ಸಮಾಲೋಚನೆ ಸಭೆಯಲ್ಲಿ ಬುಧವಾರ ಮಾತನಾಡಿ ವಿಜಯನಗರ ಕಾಲುವೆಗಳಾದ ಕಂಪ್ಲಿ ಕಾಲುವೆಗೆ 29.ಕೋಟಿ 92ಲಕ್ಷ ರಾಮಸಾಗರ ಕಾಲುವೆಗೆ 30.17ಕೋಟಿ17ಲಕ್ಷ ಬೆಳಗೋಡು ಹಾಳ್ ಕಾಲುವೆಗೆ 12 ಕೋಟಿ. 97ಲಕ್ಷ ಬಿಡುಗಡೆಯಾಗಿದೆ ಎಂದರು.
ತಾ.ಪಂ.ಇಒ ಟಿ.ವೆಂಕೋಬಪ್ಪ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳು ವಿಜಯನಗರ ಕಾಲುವೆ ಹೂಳು ಮತ್ತು ಜಂಗಲ್ ತೆಗೆಸಲು ಅಂದಾಜು ಪಟ್ಟಿ ತಯಾರಿಸಿ ಕೊಡಬೇಕೆಂದರು. ಉದ್ಯೋಗ ಖಾತ್ರಿ ಯೋಜನೆಡಿಯಲ್ಲಿ ಹೂಳು ತೆಗೆಸಲಾಗುವುದು ಎಂದರು.
ಕಮಲಾಪುರ ಬೃಹತ್ ನೀರಾವರಿ ಇಲಾಖೆ ವಿಜಯನಗರ ಕಾಲುವೆ ಉಪ ವಿಭಾಗದ ಎಇಇ ಡಿ.ತಿಮ್ಮಪ್ಪ ಮಾತನಾಡಿ, ವಿಜಯನಗರ ಕಾಲುವೆಗಳ ಆಧುನೀಕರಣಕ್ಕೆ ಸರಕಾರದಿಂದ 72ಕೋಟಿ ಅನುದಾನ ಬಿಡುಗಡೆ ಯಾಗಿದೆ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಎಂದರು.
ನೀರಾವರಿ ಇಲಾಖೆಯ ಎಇಗಳಾದ ಯಲ್ಲಪ್ಪ, ಪುರುಷೋತ್ತಮ, ಜೆಇ ವೀರಭದ್ರಯ್ಯ, ಜಿ.ಪಂ.ಸದಸ್ಯ ಕೆ.ಶ್ರೀನಿವಾಸರಾವ್, ತಾ.ಪಂ.ಸದಸ್ಯ ಎಚ್.ಜಗದೀಶಗೌಡ, ಪಿಡಿಒ ಹನುಮಂತಪ್ಪ, ರೈತ ಮುಖಂಡರಾದ ಬಿ.ನಾರಾಯಣಪ್ಪ, ಎಚ್.ಲಿಂಗನಗೌಡ, ಎಚ್.ಡಿ.ಲಿಂಗನಗೌಡ, ಎಂ.ನಾಗರಾಜರಾವ್, ಚಲ್ಲಾ ವೆಂಕಟನಾಯುಡು, ಇಟಗಿ ಬಸವರಾಜಗೌಡ, ರವಿ, ಉಜ್ಜನಿ ಮಲ್ಲಯ್ಯ, ಹಾದಿಮನೆ ಕಾಳಿಂಗವರ್ಧನ, ಕಲ್ಯಾಣಿ ಚಂದ್ರಪ್ಪ, ಮಿಷನಿ ಕೃಷ್ಣಪ್ಪ, ಬೋವೇರು ಮಂಜುನಾಥ, ಆರ್.ಎಂ.ರಾಮಯ್ಯಸೇರಿ ಅನೇಕ ರೈತರಿದ್ದರು