ಕಾಗಿನೆಲೆ ಕನಕ ಗುರುಪೀಠದ ಶಾಖಾಮಠದಲ್ಲಿ ಕಳಸಾರೋಹಣ
ಹೂವಿನಹಡಗಲಿ 04:ತಾಲೂಕಿನ ಐತಿಹಾಸಿಕ ಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ಸ್ವಾಮಿಯ ಜಾತೋತ್ಸವದ ಅಂಗವಾಗಿ ಕಾಗಿನಲೆ ಕನಕ ಗುರುಪೀಠದ ಶಾಖಾಮಠವಾದ ಮೈಲಾರಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರ ಮತ್ತು ಮಂಗಳವಾರ ಜರುಗಿದವು.ಸೋಮವಾರದಂದು ಗಣೇಶ ಪೂಜೆಯೊಂದಿಗೆ ವಿವಿಧ ಹೋಮಗಳು ಜರುಗಿದವು.
ಮಂಗಳವಾರ ಬೆಳಗಿನ ಜಾವದಿಂದಲೇ ಸ್ವಾಮಿಗೆ ವಿಶೇಷ ಪೂಜೆಗಳು ಜರುಗುವ ಮೂಲಕ ಕಲಾಸಾನಿಧ್ಯಹೋಮ, ಶ್ರೀಮಠ ಸೋಮಸಿದ್ದೇಶ್ವರ ಸ್ವಾಮಿಗೆ ರುದಾಭಿಷೇಕ ನಂತರ ಕಳಸಾರೋಹಣ ಹಾಗೂ ಕುಂಬಾಭಿಷೇಕ ಜರುಗಿದವು.ಹೋಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ. ಮೈಲಾರಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ಪ್ರಮೋದ್ಭಟ್. ಶಾಸಕ ಕೃಷ್ಣನಾಯ್ಕ. ಮಾಜಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ. ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬೀರ್ಪ, ಕುರುಬ ಸಮಾಜದ ಮುಖಂಡರಾದ. ಕೆ.ಪ್ರಕಾಶ, ರಾಮಸ್ವಾಮಿ ವೆಂಕಣ್ಣ, ಹನುಮಂತಪ್ಪ, ಪರಮೇಶಪ್ಪ, ಗುರುವಿನ ರಾಜು. ಈಟಿ.ಲಿಂಗರಾಜ, ಈಟಿ.ಮಾಲತೇಶ, ಮಲ್ಲಿಕಾರ್ಜುನ ಹಾಗೂ ಇತರರು ಭಾಗವಹಿಸಿದ್ದರು.