ಧಾರವಾಡ 06: ವರ್ಗ, ವರ್ಣ, ಲಿಂಗಬೇಧ, ಆಶ್ರಮ ಬೇಧ ಮತ್ತು ಸಾಂಸ್ಥೀಕರಣ ಹೊರತುಪಡಿಸಿದ "ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ" ಎಂಬ ಸುಂದರ ಸೂತ್ರದೊಂದಿಗೆ ಕಾಯಕ ದಾಸೋಹ ಸಿದ್ಧಾಂತವನ್ನು ಜಗತ್ತಿಗೆ ನೀಡಿದ ಶ್ರೇಷ್ಠ ಧರ್ಮವೇ ಲಿಂಗಾಯತ ಧರ್ಮ. ಅದು ಶರಣ ಧರ್ಮ ಎಂದು ಸಂಶೋಧಕ ಡಾ.ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.
ರಾ.ಹ.ದೇಶಪಾಂಡೆ ಸಭಾಭವನದಲ್ಲಿಂದು ಬಸವಕೇಂದ್ರ ವತಿಯಿಂದ ಆಯೋಜಿಸಿದ ಅರಿವಿನ ಅಂಗಳ ಶರಣ ತತ್ವ ಚಿಂತನ ಮಾಲಿಕೆ ಕಾರ್ಯಕ್ರಮದಲ್ಲಿ ಚಿನ್ಮಯಜ್ಞಾನಿ ಚನ್ನಬಸವಣ್ಣ ಹಾಗೂ ಶರಣೆ ನೀಲಾಂಬಿಕೆ ಅವರ ಶರಣೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೇಶ, ಭಾಷೆ, ಸಂಸ್ಕೃತಿಯ ಜೊತೆಗೆ ರಾಷ್ಟ್ರಾಭಿಮಾನವನ್ನು ಮೈಗೂಡಿಸಿಕೊಳ್ಳುವಲ್ಲಿ ವಚನಕಾರರು, ಶರಣರು ಅಪಾರವಾದ ಕೊಡುಗೆ ನೀಡಿದ್ದಾರೆ. ಶರಣ ಸಿದ್ಧಾಂತವು ಸರ್ವಕಾಲಿಕ ಸಮಾನತೆ ಶಾಂತಿ ಪ್ರೀತಿ, ವಿಶ್ವಬಂಧುತ್ವವನ್ನು ಬೋಧಿಸುವ ಸರ್ವಶ್ರೇಷ್ಠ ಸಿದ್ಧಾಂತವಾಗಿದೆ. ಶರಣ ಚಳುವಳಿಯು ಶೋಷಿತರ, ಧಮನಿತರ, ಮೂಲ ನಿವಾಸಿಗಳ, ಮಹಿಳೆಯರ, ಶ್ರಮಿಕರ ಧ್ವನಿಯಾಗಿ ಉದಯಿಸಿ ಲಿಂಗಾಯತ ಧರ್ಮವಾಗಿದೆ ಎಂದರು.
ಬಸವತತ್ವ ಚಿಂತನ ಮಂಥನ ಕಾರ್ಯಕ್ರಮಗಳು ಇದೀಗ ನಾಡಿನೆಲ್ಲೆಡೆ ಭರದಿಂದ ಸಾಗಿದ್ದು ಇನ್ನೂ ಹೆಚ್ಚು ಪ್ರಚಾರ ಮಾಡಬೇಕಿದೆ. ಸದೃಢ ರಾಷ್ಟ್ರ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಶರಣರ ನಡೆನುಡಿಗಳನ್ನು ಕೇಳುವಂತಾಗಬೇಕು. ಬಸವಾದಿ ಶರಣರು ನಡೆದಾಡಿದ ಅಥವಾ ಅವರ ಐತಿಹಾಸಿಕ ಸ್ಥಳಗಳಲ್ಲಿ ನಾವು ಚಿಂಥನ ಗೋಷ್ಠಿ, ಉಪನ್ಯಾಸ, ವಚನ ವಿಶ್ಲೇಷಣೆ ಮಾಡುವ ಕಾರ್ಯಕ್ರಮ ಹಾಕಿಕೊಳ್ಳಬೇಕು. ಅಲ್ಲಿನ ಜನಮನಕ್ಕೆ ವಚನಗಳ ಬಗ್ಗೆ ಹಾಗೂ ಶರಣರ ವಿಚಾರಧಾರೆ ಕುರಿತು ವಿವಿಧ ತಿಳಿಸಿಕೊಡಬೇಕು. ಈ ನಿಟ್ಟಿನಲ್ಲಿ ಮುಂಬರುವ ದಿನದಲ್ಲಿ 770 ಅಮರಗಣಂಗಳವರ ಶರಣೋತ್ಸವ ಕಾರ್ಯಕ್ರಮವನ್ನು ಪ್ರತಿ ತಿಂಗಳು ಆಯೋಜನೆ ಮಾಡಿ ಜನರಲ್ಲಿ ವಚನಗಳ ಅರಿವನ್ನು ಮೂಡಿಸೋಣ ಎಂದರು.
ಸುನಿತಾ ಮೂರಶಿಳ್ಳಿ ಮಾತನಾಡಿ, ಆಧುನಿಕತೆ ಜೀವನದಲ್ಲಿ ಮನುಷ್ಯ ತನ್ನ ಮನುಷ್ಯತ್ವ ಕಳೆದುಕೊಳ್ಳುತ್ತಿದ್ದು ಮನಸ್ಸು ಮತ್ತಷ್ಟು ಕುಗ್ಗುತ್ತಿದೆ. ಇದರಿಂದ ಹೊರಬರಬೇಕಲ್ಲವೇ ಅಂತರಂಗದಲ್ಲಿ ಸಾಕಷ್ಟು ಜ್ಞಾನ ಉಂಟು ಮಾಡಿಕೊಳ್ಳುತ್ತಾನೆ ಮನಸ್ಸಿನಲ್ಲಿ ಬಹಳ ತಿಳಿದುಕೊಳ್ಳುತ್ತಾನೆ ಆದರೆ ಆ ಜ್ಞಾನವು ಬಹಿರಂಗದಲ್ಲಿ ಕ್ರೀಯಾರೂಪದಲ್ಲಿ ಉಪಯೋಗವಾಗವಾದರೆ ಮನಸ್ಸು ಕಲ್ಮಷಗೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿ ಕ್ರಿಯಾ ಮತ್ತು ಜ್ಞಾನಗಳ ಸಮನ್ವಯವಾಗಬೇಕು ನಡೆ ನುಡಿಗಳು ಒಂದಾಗಬೇಕು ಅಂದರೆ ಮಾತ್ರ ನಮ್ಮಿಂದ ಸತ್ಕಾರ್ಯ ಸಾಧ್ಯವಾಗುತ್ತದೆ. ಹೀಗಾಗಿ ಅರಿವಿನ ಅಂಗಳ ಕಾರ್ಯಕ್ರಮವನ್ನು ಬಸವ ಕೇಂದ್ರ ಆಯೋಜನೆ ಮಾಡಿರುವುದು ಸೂಕ್ತ ಎಂದರು.
ಬಸವಕೇಂದ್ರದ ಉಪಾಧ್ಯಕ್ಷ ಮಲ್ಲಿಕಾಜರ್ುನ ಚೌಧರಿ ಅಧ್ಯಕ್ಷತೆವಹಿಸಿ ಮಾತನಾಡಿದರು. ದತ್ತಿದಾನಿ ಶಿವಶರಣ ಕಲಬಶೆಟ್ಟರ ಭಕ್ತಿ ಸೇವೆಗೈದರು. ಲಕ್ಷ್ಮೀ ಮುನವಳ್ಳಿ, ರಾಜು ಮರಳಪ್ಪನವರ, ನಾಗರಾಜ ಪಟ್ಟಣಶೆಟ್ಟಿ, ಶಿವಣ್ಣ ಬೆಲ್ಲದ, ವಿದ್ಯಾ ಕುಂದರಗಿ, ಅನಸುಯಾ ಬಿರಾದಾರ, ಬಸಂತಿ ಹಪ್ಪಳದ, ವೀರಣ್ಣ ಒಡ್ಡಿನ ಉಪಸ್ಥಿತರಿದ್ದರು. ಬಸವರಾಜ ಮ್ಯಾಗೇರಿ ಪರಿಚಯಿಸಿದರು. ಮಲ್ಲಿಕಾಜರ್ುನ ಬಾಗೇವಾಡಿ ನಿರೂಪಿಸಿದರು. ರವಿಕುಮಾರ ಸ್ವಾಗತಿಸಿದರು. ಅಶೊಕ ನಿಡವಣಿ ವಂದಿಸಿದರು. ಮೆಘಾ ಹುಕ್ಕೇರಿ, ಶ್ರದ್ಧಾ ಹಾಗೂ ಬಸವರಾಜೇಶ್ವರಿ ಮೂರಶಿಳ್ಳಿ ವಚನ ಸಂಗೀತ ನಡೆಸಿಕೊಟ್ಟರು.