ಲೋಕದರ್ಶನ ವರದಿ
ಬೆಳಗಾವಿ 18: ಕೆಎಲ್ಇ ಸಂಸ್ಥೆಯ ಬೆಳಗಾವಿಯ ಲಿಂಗರಾಜ ಕಾಲೇಜು ಇತ್ತೀಚೆಗೆ ಹಮ್ಮಿಕೊಂಡ ಪದವಿ ಪೂರ್ವ ಅಂತರ ಮಹಾವಿದ್ಯಾಲಯ ಸಾಂಸ್ಕೃತಿಕ ಉತ್ಸವ (ಕಲ್ಚರಲ್ ಫೆಸ್ಟ್)ದಲ್ಲಿ 'ಕೈರೊಸ್ಅತ್ಯತ್ತಮ ಸಾಧನೆ ಮೆರೆದ ನಗರದ ಜೆಜಿಐ ಸಂಸ್ಥೆಯ ಜೈನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಪ್ರಥಮ ಸ್ಥಾನ ಪಡೆದುಕೊಂಡು ಜನರಲ್ ಚಾಂಪಿಯನ್ ಪಾರಿತೋಷಕವನ್ನು ತನ್ನದನ್ನಾಗಿಸಿಕೊಂಡಿದೆ.
ಜೈನ ಕಾಲೇಜಿನ ವಿದ್ಯಾಥರ್ಿಗಳು ಸಮೂಹ ನೃತ್ಯ, ರ್ಯಾಂಪ್ವಾಕ್ ಇವೆಂಟ್ದಲ್ಲಿ ಹಾಗೂ ವಿಶೇಷ ಇವೆಂಟ್ದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಡಾಕ್ಯೂಮೆಂಟರಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಇನ್ನುಳಿದ ಇವೆಂಟ್ಗಳಲ್ಲಿ ಉತ್ತಮ ಸಾಧನೆ ಮೆರೆದು ಜನರಲ್ ಚಾಂಪಿಯನಶಿಫ್ಗೆ ಪಡೆದುಕೊಂಡಿದೆ. ನಯನಶ್ರೀ ಟಕ, ಪ್ರಣಮ ಶೆಟ್ಟಿ, ಉತ್ಕರ್ಷ, ಪೃಥವಿ ಪಾಟೀಲ, ಕಾಜೆಲ ಪಟೇಲ, ವೈಷ್ಣವಿ ಬಜಾಜ್, ರಜಥ ಬಂಗ, ರಜವೀರ ರಾಯಬಾಗಿ, ರೀಷಾ ಜೈನ, ವಿವೇಕ ಕುಲಕಣರ್ಿ ಮತ್ತು ಓಂಕಾರ ಕೇಸರಕರ ಸೇರಿದಂತೆ ಇತರೆ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾಥರ್ಿಗಳು ಈ ಉತ್ಸವದ ಸ್ಪಧರ್ೆಯಲ್ಲಿ ಭಾಗಹಿಸಿ ತಮ್ಮ ಪ್ರತಿಭೆ ಪ್ರದರ್ಶನ ನೀಡಿದ್ದಾರೆ. ಅಧ್ಯಾಪಕರಾದ ವಿವೇಕಾನಂದ ತೆಳಗಡಿ, ವಿಶ್ವನಾಥ ಪಾಟೀಲ ಹಾಗೂ ಮಧುರಾ ಪಾಟೀಲ ವಿದ್ಯಾಥರ್ಿಗಳ ಸಾಂಸ್ಕೃತಿಕ ತಯಾರಿಯ ಉಸ್ತುವಾರಿ ನೋಡಿಕೊಂಡಿದ್ದರು.
ವಿದ್ಯಾಥರ್ಿಗಳ ಸಾಧನೆಗೆ ಜೆಜಿಐ ಸಂಸ್ಥೆಯ ನಿದರ್ೇಶಕರಾದ ಶ್ರದ್ಧಾ ಕಟವಾಟೆ, ಪ್ರಾಚಾಯರ್ೆ ರೋಹಿಣಿ. ಕೆ.ಬಿ. ಹಾಗೂ ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.