ಶ್ರೀಶೈಲಕ್ಕೆ ಹೊಗುವ ಭಕ್ತರಿಗೆ ಕಡಕ್ ರೊಟ್ಟಿ ತಯಾರಿಸಿ ಇಟ್ಟಿರುವದು.
ತಾಂಬಾ 12 : ಪ್ರತಿ ವರ್ಷದಂತೆ ಈ ಭಾರಿಯೂ ಮಾರ್ಚ 14ರಂದು ಗ್ರಾಮಸ್ಥರು ಶ್ರೀಶೈಲ ಪಾದಯಾತ್ರೀಕರು ಶ್ರೀಶೈಲಕ್ಕೆ ಪಾದಯಾತ್ರೆಯ ಮೂಲಕ ತೆರಳಲಿದ್ದಾರೆ. ೆ 15ದಿನಗಳಿಂದ ಸಾಕಾಗುವಷ್ಟು ಹಾಗೂ ಅವರ ಜೋತೆ ಬರುವ ಎಲ್ಲ ಯಾತ್ರೀಕರಿಗೆ ಹೊಟ್ಟೆತುಂಬುವಷ್ಟು ಕಡಕ್ ರೊಟ್ಟಿ ತಯಾರಿಸಿ ಇಟ್ಟಿದ್ದಾರೆ. ಗ್ರಾಮಸ್ಥರೆಲ್ಲರು ಕುಡಿಕೊಂಡು ಶ್ರೀಶೈಲ ಮಲ್ಲಿಕಾರ್ಜುನ ಯಾತ್ರೀಕರಿಗೆ ಸುಮಾರು 50ಸಾವಿರದಷ್ಟು ಜನರಿಗೆ ಸಾಕಾಗುವಷ್ಟು ುರುಬಸವ ವೀರಕ್ತಮಠ ಹಾಗೂ ಮೈಸೂರು ಮಹಾರಾಜರ ಮಠದಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಮಾ.14 ರಂದು ಮೈಸೂರು ಮಹಾರಾಜರ ಮಠದಿಂದ ಸಂಜೆ 9ಕ್ಕೆ ಪಾದಯಾತ್ರೆ ಬೆಳಸುವರು. ಮಹಿಳೆಯರು ಪುರುಷರು ಸೇರಿದಂತೆ ಸುಮಾರು 5ಸಾವಿರ ಜನರು ಭಾಗಿಯಾಗಲಿದ್ದಾರೆ. ಶ್ರೀಗಳ ಹಾಗೂ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಸಾಗುವ ಶ್ರೀಶೈಲ ಪಾದಯಾತ್ರೀಕರಿಗೆ ಗ್ರಾಮದ ಎಲ್ಲ ನಾಗರಿಕರ ಸಹಕಾರ ವಿದೆ. ಪಾದಯಾತ್ರೆಯಲ್ಲಿ ಊಟ ವಸತಿ ತಂಗುವ ವ್ಯವಸ್ಥೆ ಓಷದ ಉಪಚಾರ ಮುತ್ತಾದ ಸೌಕರ್ಯಗಳನ್ನು ಕಮಿಟಿಯವರು ಮಾಡುತ್ತಾರೆ. 1)ಪ್ರತಿಸಲದಂತೆ ಈಸಲವು ಯಾತ್ರೀಕರಿಗೆ ಸಾಕಾಗುವಷ್ಟು ಗ್ರಾಮಸ್ಥರು ಕಡಕ್ ರೊಟ್ಟಿಗಳನ್ನು ತಯಾರಿಸಿ ಕೊಟ್ಟಿರುತ್ತಾರೆ. ತಾಂಬಾ ಗ್ರಾಮದ ಭಕ್ತರ ಭಕ್ತಿಯನ್ನು ನೋಡಿ ಸಾಕ್ಷಾತ್ ಶ್ರೀಶೈಲ ಮಲ್ಲಯ್ಯಸ್ವಾಮಿನೆ ಮೆಚ್ಚಿ ನಾವು ತಂದ ಎಲ್ಲ ಪ್ರಸಾದ ಸಾಕಾಗಿ ಇನ್ನು ಸಾಕಷ್ಟು ಉಳಿಯುತ್ತದೆ. ಮಲ್ಲಯ್ಯನ ದ್ಯಾನ ಮಾಡುತ್ತಾ ಸಾಗುವೆವು.