ಕಬ್ರಸ್ಥಾನ: ಶಾಸಕ ಅಶೋಕ ಮನಗೂಳಿ ಸಂಧಾನದಲ್ಲಿ ಇತ್ಯರ್ಥಗೊಳ್ಳುವ ಭರವಸೆ
ಸಿಂದಗಿ 06: ನಗರದ ಮುಸ್ಲೀಂ ಜನತೆ ಸುಮಾರು 7ರಿಂದ 8 ಸಾವಿರ ಜನಸಂಖ್ಯೆಯಿದ್ದು 5ಎ19ಗು ಖಬರಸ್ತಾನ್ ಜಾಗೆ ಖಬರಸ್ಥಾನವಾಗಿಯೇ ಉಳಿಯಲು ಹೋರಾಟ ನಡೆಯುತ್ತಿದ್ದು ಇದನ್ನು ಗಮನಿಸಿದ ಸ್ಥಳೀಯ ಶಾಸಕ ಅಶೋಕ್ ಮನಗೂಳಿ ಅವರು ಎರಡು ಗುಂಪಿನ ಬಣ್ಣದವರಿಗೆ ಕರೆಯಿಸಿ ಸಂಧಾನದ ಮೂಲಕ ಒಂದು ನಿರ್ಣಯಕ್ಕೆ ಬಂದು ಕಬ್ರ ಸ್ಥಾನ ಜಾಗ ಕಬ್ರ ಸ್ಥಾನದ ಸುತ್ತಲು ಬಡ ಕಾರ್ಮಿಕರಿಗೆ ಯು ಆಕಾರದಲ್ಲಿ ಪತರಾಸ್ ಶೆಡ್ಡಿನ ಮಳಿಗೆ ಮಾಡಿ ಎನ್ನುವ ಬಗ್ಗೆ ತಿಳಿಸಿದ್ದು ಸೂಕ್ತವಾಗಿದೆ ಎಂದು ಕರ್ನಾಟಕ ಮುಸ್ಲಿಂ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಎ.ಖತೀಬ ಸ್ವಾಗತಿಸಿದರು. ಈ ವಿಷಯದ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ ಚರ್ಚೆಯಲ್ಲಿ ಮಹಿಬೂಬ್ ಸಿಂದಗಿಕರ, ರಹಿಮ ದುದನಿ ಇವರು ಕೂಡಾ ಶಾಸಕರ ಜೊತೆ ಚರ್ಚೆ ಮಾಡಿದರು ಸುಮಾರು ವರ್ಷಗಳಿಂದ ಇದ್ದ ಬಡ ಜನರ ಅಂಗಡಿಗಳು ಇದ್ದು ಆ ಅಂಗಡಿಗಳನ್ನು ಕೊಡಲು ಒಂದು ಬಣದಿಂದ ಮೂರು ಜನ ಇನ್ನೊಂದು ಬಣದಿಂದ ಮೂರು ಜನ ಸೇರಿ ಆರು ಜನರ ಸಮಿತಿ ರಚಿಸಿ ಇದರ ಉಸ್ತುವಾರಿ ಶಾಸಕರು ವಹಿಸಿಕೊಂಡು ಚರ್ಚೆ ಮಾಡಿದ್ದಾರೆ. ಒಂದು ಬಣದಿಂದ ಸಿಂದಗಿ ಅಂಜುಮನ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಜಾಕ್ ದುದನಿ, ಮಹೆಬೂಬ್ ನಾಟಿಕರ್, ಹಾಗೂ ಮಾಜಿ ಪುರಸಭೆ ಅಧ್ಯಕ್ಷ ಭಾಷಾಸಾಬ್ ತಾಂಬೊಳಿ ಹೆಸರುಗಳನ್ನು ಸೂಚಿಸಿದ್ದೇವೆ ಒಂದು ಸಮಿತಿ ಮಾಡಿ ಶಾಸಕರ ಉಸ್ತುವಾರಿಯಲ್ಲಿ ಅಂಗಡಿ ಮಾಲೀಕರೇ ಸ್ವಂತ ಖರ್ಚಿನಿಂದ ಪತ್ರಾಸ್ ಶೆಡ್ಡುಗಳು ನಿರ್ಮಿಸಬೇಕು ಇದರ ಬಾಡಿಗೆಯನ್ನು ಸಂಬಂಧಪಟ್ಟಂತಹ ಕಮಿಟಿಗೆ ಜಮಾ ಮಾಡಬೇಕೆಂದು ಚರ್ಚಿಸಲಾಗಿದೆ ಎಂದು ಹೋರಾಟದಲ್ಲಿ ಕುಳಿತ ಸಮೂದಾಯದ ಜನರಿಗೆ ತಿಳಿಸಲಾಗಿದೆ. ಕೆಲವರು ಸಹಮತ ಸೂಚಿಸಿದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಇದನ್ನು ಶಾಸಕ ಅಶೋಕ ಮನಗೂಳಿ ಅವರ ಸಂಧಾನದ ಮೂಲಕ ಇತ್ಯರ್ಥಗೊಳ್ಳುತ್ತದೆ ಎನ್ನುವ ಭರವಸೆ ನನ್ನಲ್ಲಿದೆ ಎಂದರು.