ಕಬ್ಬಡಿ ಕೀಡೇ ದೇಶಕ್ಕೆ ಹೆಸರು ತಂದು ಕೊಟ್ಟ ಕ್ರೀಡೆ : ಭರತ
ಶಿಗ್ಗಾವಿ 05: ದೇಶಿ ಕ್ರೀಡೆಯಾಗಿರುವ ಕಬಡ್ಡಿ ಕ್ರೀಡೆ, ದೇಶಕ್ಕೆ ಸಾಕಷ್ಟು ಹೆಗ್ಗಳಿಕೆ ಜತೆಗೆ ಹೆಸರು ತಂದು ಕೊಟ್ಟಿದೆ. ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಗ್ರಾಮೀಣ ಜನರಿಗೆ ಬಹಳ ಇಷ್ಟವಾದ ಆಟ ಎಂದು ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.
ತಾಲೂಕಿನ ಬಾಡ ಗ್ರಾಮದಲ್ಲಿ ಭಕ್ತ ಕನಕ ಜಯಂತ್ಯೋತ್ಸವ ಹಾಗೂ ಹೊಸ ವರ್ಷದ ಅಂಗವಾಗಿ ಗ್ರಾಮಸ್ಥರ ಸಯೋಗದೊಂದಿಗೆ ಬಂಕನಾಥೇಶ್ವರ ಕಬಡ್ಡಿ ಕ್ಲಬ್ ಏರಿ್ಡಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು ನಾಲ್ಕು ಸಾವಿರ ವರ್ಷಗಳ ಇತಿಹಾಸ ಇರುವ ಗ್ರಾಮೀಣ ಕಬಡ್ಡಿ ಕ್ರೀಡೆ ಪುರಾತನವಾದದ್ದು. ಆಟಗಾರರಿಗೆ ಸೋಲು, ಗೆಲುವು ಮುಖ್ಯವಲ್ಲ ಇದರಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ ಎಂದರು.
ಕ್ರೀಡಾ ಮನೋಭಾವ ಬೆಳೆಸಿಕೊಂಡಿರುವ ಯುವಕರು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ, ಬೆಂಬಲಿಸುವ ಮೂಲಕ ನಮ್ಮ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ, ಬೆಳೆಸುವತ್ತ ಸಮಾಜದ ಚಿಂತನೆಯಾಗಬೇಕು. ಈ ನಿಟ್ಟಿನಲ್ಲಿ ಸಹಾಯ, ಸಹಕಾರ ನೀಡುವುದಾಗಿ ಬೊಮ್ಮಾಯಿ ತಿಳಿಸಿದರು. ಯುವ ಮುಖಂಡರಾದ ಮಾಲತೇಶ ಕಮ್ಮಾರ, ಜಗದೀಶ ಸಿದ್ದಪ್ಪನವರ ಮಾತನಾಡಿ, ಗ್ರಾಮೀಣ ಕ್ರೀಡೆಗಳ ಆಯೋಜನೆಗೆ ಸತತ ಗ್ರಾಮಸ್ಥರು ನೀಡುತ್ತಿರುವ ಸಹಕಾರ ಸ್ಮರಣಿಯವಾಗಿದೆ ಎಂದರು.
ಮುರಗೇಶ ಪುಟ್ಟಪ್ಪನವರ, ಯಲ್ಲಪ್ಪ ಸಿದ್ದಪ್ಪನವರ, ಶಿವಾನಂದ ಬಿಳಿಕುದರಿ, ರವಿ ಪೂಜಾರ, ಬಸವರಾಜ ಯಡೋಜಿ, ಅನಿಲ ಕುಂದೂರ, ಸುರೇಶ ಕುಂದೂರ, ರವಿ ಸಣ್ಣಬಸಪ್ಪನವರ, ಚೇತನ ಬಾರಿಗಿಡದ, ಶೇಕಪ್ಪ ಕುಂದೂರ, ಮಲ್ಲಿಕಾರ್ಜುನ ಈಳಿಗೇರ, ಪರಶುರಾಮ ಸೋಮಣ್ಣವರ, ಶಿವಾನಂದ ತೊಂಡೂರ, ನಿಂಗಪ್ಪ ಗೂದಾಯಿ, ಮಲ್ಲಪ್ಪ ಕುಂದಗೋಳ, ಪ್ರಕಾಶ ತೊಂಡೂರ, ಸಿದ್ದಪ್ಪ ಚಿನ್ನಪ್ಪನವರ, ರಾಜು ಬಡಿಗೇರ, ಜಗದೀಶ ಚಿನ್ನಪ್ಪನವರ, ರಾಮಣ್ಣ ಕುಂದೂರ, ಸುಲ್ತಾನಿ ತೋಟಗೇರ, ಈಶ್ವರ ಚಿನ್ನಪ್ಪನವರ, ಲಕ್ಷ್ಮಣ ತೊಂಡೂರ, ಕುಮಾರ ಬಿದರಗಡ್ಡಿ, ಪ್ರಕಾಶ ವೆಂಕೋಜಿ, ಶಿವರಾಜ ಪೂಜಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.