ಕಬಡ್ಡಿ ಪಟು ಬಾಗು ಬಾಬುಗೆ ಗಂಭೀರ ಗಾಯ ಲೋಕದರ್ಶನ ವರದಿ

ಹಳಿಯಾಳ, 14: ಅತ್ಯುತ್ತಮ ಕಬಡ್ಡಿ ಪಟುವಾಗಿದ್ದ ಗೌಳಿ ಸಮುದಾಯದ ಯುವಕನೋರ್ವ ಕಬಡ್ಡಿ ಆಯ್ಕೆಯ ಸ್ಪಧರ್ೆಯ ಆಟದಲ್ಲಿ ಶರೀರಕ್ಕೆ ಆಘಾತ ಉಂಟಾದ ಕಾರಣ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಟ್ಟಿಗೇರಾ ಗ್ರಾಮ ಪಂಚಾಯತ ವ್ಯಾಪ್ತಿಯ ಅಡಿಕೆಹೊಸೂರು ಗೌಳಿವಾಡಾ ಗ್ರಾಮದ ಬಾಗು ಬಾಬು ಎಡಗೆ ಹೆಸರಿನ 18 ವರ್ಷ ವಯಸ್ಸಿನ ತರುಣ ಕಬಡ್ಡಿ ಪಟುವೇ ಶಾರೀರಿಕ ಆಘಾತಕ್ಕೊಳಗಾಗಿ ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯಲ್ಲಿ ದಾಖಲಾಗಿ ಅಲ್ಲಿನ ತುತರ್ು ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸಾಂಬ್ರಾಣಿಯ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮುಗಿಸಿದ ಬಾಗು ಈತ ಸಧ್ಯ ಹಳಿಯಾಳ ಪಟ್ಟಣದಲ್ಲಿರುವ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯವರ ವ್ಹಿ.ಡಿ. ಹೆಗಡೆ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾಥರ್ಿಯಾಗಿದ್ದು, ಅತ್ಯುತ್ತಮ ಕಬಡ್ಡಿ ಪಟುವಾಗಿದ್ದಾನೆ. ಅಡಿಕೆಹೊಸೂರು ಗೌಳಿವಾಡಾದ ಬಾಬು ರಾಮು ಎಡಗೆ ಹಾಗೂ ಅಂಬಿಬಾಯಿ ದಂಪತಿಗಳಿಗೆ ಒಟ್ಟು 3 ಮಕ್ಕಳು. ಕೇವಲ ಅರ್ಧ ಎಕ್ರೆ ಜಮೀನು ಹೊಂದಿರುವ ಈ ಕುಟುಂಬ ಕೂಲಿ-ನಾಲಿ ಮಾಡಿ ಜೀವನ ನಡೆಸುತ್ತಿದೆ. ಬಾಗು ಹಿರಿಯ ಮಗನಾಗಿದ್ದು ತಮ್ಮ ದೇವು (ಎಸ್ಸೆಸ್ಸೆಲ್ಸಿ), ತಂಗಿ ನಾಗೇಂದ್ರಿ (8ನೇ ತರಗತಿ) ಸಾಂಬ್ರಾಣಿಯ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ 

ಮಾಡುತ್ತಿದ್ದಾರೆ.

ರಾಜ್ಯ ಕಿರಿಯರ ಕಬಡ್ಡಿ ತಂಡಕ್ಕೆ ಉತ್ತರಕನ್ನಡ ಜಿಲ್ಲೆಯಿಂದ ಪ್ರತಿಭಾವಂತ ಕಬಡ್ಡಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ಜ.6 ರಂದು ಸಿದ್ಧಾಪುರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಂದು ಅಲ್ಲಿ ಕಬಡ್ಡಿಯ ಎಲ್ಲಾ ಬೇರೆ-ಬೇರೆ ವಿಭಾಗಗಳಲ್ಲಿ ಅತ್ಯುತ್ತಮ ಸ್ಪಧರ್ೆ ನೀಡಿದ ಬಾಗು ಸೆಮಿಫೈನಲ್ನಲ್ಲಿ ಕಬಡ್ಡಿಯಾಡುವಾಗ ಆಕಸ್ಮಾತ ಆಗಿ ಬಿದ್ದ ಪರಿಣಾಮ ತಲೆಗೆ ಜೋಡಿಸುವ ಬೆನ್ನುಮುಳೆಯ ಮೇಲ್ಭಾಗದಲ್ಲಿ ಜಖಂಗೊಂಡು ತೀವೃ ಶಾರೀರಿಕ ಆಘಾತಕ್ಕೊಳಗಾದನು. ಅಂದಿನ ಕ್ರೀಡಾಕೂಟದ ನೇತೃತ್ವ ವಹಿಸಿದ್ದ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸೂರಜ ನಾಯ್ಕ ಸೋನಿ ಅವರು ಸ್ವತಃ ಮುತುವಜರ್ಿ ವಹಿಸಿ ಸ್ವಂತ ಹಾಗೂ ಅಲ್ಲಿದ್ದ ಕಬಡ್ಡಿ ವೀಕ್ಷಕ ಪ್ರೇಮಿಗಳಿಂದ ತಕ್ಷಣ ವಂತಿಗೆ ಸಂಗ್ರಹಿಸಿ ಗಾಯಾಳುವನ್ನು ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಗೆ ದಾಖಲಿಸಿದರು.

ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸೂರಜ ನಾಯ್ಕ ಸೋನಿ, ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಇವರ ವತಿಯಿಂದ ವಿಆರ್ಡಿಎಂ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಭೇಟಿ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ ವತಿಯಿಂದ ತಾಲೂಕಾ ಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ಇವರೂ ಸಹ ಆಸ್ಪತ್ರೆಗೆ ಹೋಗಿ ಬಂದಿದ್ದಾರೆ.

ತಲೆಗೆ ಜೋಡಿಸುವ ಬೆನ್ನುಮುಳೆಯ ಮೇಲ್ಭಾಗದಲ್ಲಿ ಜಖಂಗೊಂಡು ಕುತ್ತಿಗೆಯ ಭಾಗದ ನರಗಳಿಗೆ ತೀವೃ ಪೆಟ್ಟಾದ ಕಾರಣ ಗಾಯಾಳು ಬಾಗು ಈತನ ಸ್ಥಿತಿ ತೀರಾ ಗಂಭೀರವಾದ ಪರಿಣಾಮ ಮೆದುಳು ಹಾಗೂ ಉಳಿದ ಶರೀರದ ಸಂಪರ್ಕ ಕಡಿದುಹೋದಂತಾಗಿ ಪರಿಸ್ಥಿತಿ ಚಿಂತಾಜನಕವಾಗಿದೆ. 

ಉಸಿರಾಟದ ತೊಂದರೆಯಿದ್ದ ಕಾರಣ ಮೊದಲ ಹಂತದ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಪ್ರತಿಭಾವಂತ ಕಬಡ್ಡಿ ಪಟುವಾಗಿರುವ ಬಾಗು ಮತ್ತೆ ಸಹಜಸ್ಥಿತಿಗೆ ಮರಳುವಂತಾಗಲಿ ಎಂದು ಸರ್ವರು ಪ್ರಾಥರ್ಿಸುತ್ತಿದ್ದಾರೆ.