ಕ.ವಿ.ವ. ಸಂಘದ ಪದಾಧಿಕಾರಿ, ಸಿಬ್ಬಂದಿಗಳಿಂದ ಸಾಧನಕೇರಿಯಲ್ಲಿ ಸ್ವಚ್ಛತಾ ಕಾರ್ಯ

ಧಾರವಾಡ 18: ಜನೇವರಿ ಮೊದಲ ವಾರದಲ್ಲಿ ಧಾರವಾಡದಲ್ಲಿ ನಡೆಯಲಿರುವ ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದಲ್ಲಿ ನಾಗರಿಕರು ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನದಲ್ಲಿ ಮಾನ್ಯ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಕರೆಯ ಮೇರೆಗೆ ಕನರ್ಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಸದಸ್ಯರು ಭಾಗವಹಿಸಿ ಸಾಧನಕೇರಿ, ಅದರಲ್ಲಿಯೂ ವಿಶೇಷವಾಗಿ ಬೇಂದ್ರೆ ಭವನ, ಬೇಂದ್ರೆ ಉದ್ಯಾನವನ ಮೊದಲಾದ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯ ಕೈಕೊಂಡು ಸಮ್ಮೇಳನದ ಯಶಸ್ಸಿಗೆ ಕೈ ಜೋಡಿಸಿದರು. 

ಸಂಘದ ಪದಾಧಿಕಾರಿಗಳಾದ ಕೃಷ್ಣ ಜೋಶಿ, ಪ್ರಕಾಶ ಎಸ್. ಉಡಿಕೇರಿ, ಸದಾನಂದ ಶಿವಳ್ಳಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ, ಸತೀಶ ತುರಮರಿ, ಶಂಕರ ಕುಂಬಿ ಹಾಗೂ ಸಂಘದ ಸಿಬ್ಬಂದಿಗಳಾದ ಎಸ್. ಎಂ. ರಾಚಯ್ಯನವರ, ಎನ್.ಎಸ್. ಕಾಶಪ್ಪನವರ, ಎಸ್. ಆಯ್. ಭಾವಿಕಟ್ಟಿ, ಮಹೇಶ ಗುರುಪುತ್ರನವರ, ಶಕುಂತಲಾ ದೊಡಮನಿ, ಸಿಬ್ಬಂದಿ ವರ್ಗದವರು ಹಾಗೂ ಸಂಘದ ಸದಸ್ಯರಾದ ಬಸವಲಿಂಗಯ್ಯ ಹಿರೇಮಠ, ಡಾ. ರಾಮು ಮೂಲಗಿ, ಡಾ. ಸದಾಶಿವ ಮಜರ್ಿ, ಪಿ.ಎಚ್. ನೀರಲಕೇರಿ, ಡಾ. ಶರಣಮ್ಮ ಗೋರೆಬಾಳ, ಶಂಕರ ಸುಗತೆ, ಡಾ. ವಿಶ್ವನಾಥ ಚಿಂತಾಮಣಿ, ಡಾ. ಸುರೇಶ ಹಿರೇಮಠ, ಮಹಾದೇವಿ ದೊಡಮನಿ, ಸುವಣರ್ಾ ಸುರಕೋಡ, ಶಿವಾನಂದ ಹೂಗಾರ, ಎಫ್.ಬಿ. ಕಣವಿ, ಜಯಶ್ರೀ ಗೌಳಿ, ಗುರು ತಿಗಡಿ, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.