ಬೈಕ್‌ಗೆ ಕೆಎಸ್‌ಆರ್‌ಟಿಸಿಬಸ್ ಡಿಕ್ಕಿ: ಸವಾರ ಗಂಭೀರ ಗಾಯ
ಇಂಡಿ 13: ತಾಲೂಕಿನ ತಡವಲಗಾ ಗ್ರಾಮದ ಬಳಿ ಇಂಡಿ -ವಿಜಯಪೂರ ರಾಜ್ಯ ಹೆದ್ದಾರಿಯ ಬಳಿ ಇಂಡಿಯಿಂದ ವಿಜಯಪೂರ ಕಡೆಗೆ ಹೋಗುತ್ತಿರುವ ಏಂ28 ಈ 2194 ಈ ಸಂಖ್ಯೆಯ ಬಸ್ಸು ತಡವಲಗಾ ಗ್ರಾಮದ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು ಬಸ್ ಚಾಲಕ ಬಸ್ ನೊಂದಿಗೆ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ.
ಮಲ್ಲಪ್ಪ ಬಲವಂತಪ್ಪ ಖಸ್ಕಿ ಎಂಬ ಬೈಕ್ ಸವಾರ ತೀವ್ರ ಗಾಯಗೊಂಡಿದ್ದಾನೆ. ತಡವಲಗಾದಿಂದ ಜೋಡಗುಡಿಗೆ ಹೋಗುತ್ತಿರುವಾಗ ಬಸ್ಸು ಬೈಕ್ ಸವಾರನಿಗೆ ಹಿಂಬದಿ ಡಿಕ್ಕಿ ಹೊಡೆದು ಬಸ್ ಚಾಲಕ ಬಸ್‌ನ್ನು ನಿಲ್ಲಿಸದೆ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಇತನ ವರ್ತನೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಗಾಯಗೊಂಡ ಬೈಕ್ ಸವಾರನನ್ನು ತಕ್ಷಣ ತಡವಲಗಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪೂರದ ಬಿಎಲ್‌ಡಿಇ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದೆ ಎಂದು ಕುಟುಂಬಸ್ದರು ತಿಳಿಸಿದ್ದಾರೆ.ಸಾರ್ವಜನಿಕರು ಬಸ್ಸನ್ನು ಬೆನ್ನಟ್ಟಿ ವಿಜಯಪೂರ ರೇಲ್ವೆ ಗೇಟ್ ಹತ್ತಿರ ತಡೆದಿದ್ದಾರೆ.