ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಬುಕ್ಕಿಗಳು ಪರಾರಿ

ಬೆಂಗಳೂರು, ನ. 23 ಕರ್ನಾಟಕ  ಪ್ರಿಮಿಯರ್ ಲೀಗ್ ಕ್ರಿಕೆಟ್ ನಲ್ಲಿ  ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ತೀವ್ರಗೊಳಿಸಿದ್ದಾರೆ.  ಬಂಧಿತ ಆಟಗಾರರಿಂದ ವಿಚಾರಣೆ ಸಂದರ್ಭದಲ್ಲಿ ಫಿಕ್ಸಿಂಗ್ ನಡೆಯುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.  ಟಾಸ್ ಆಯ್ಕೆ, ಪ್ಲೇಯಿಂಗ್ ಇಲೆವೆನ್, ಬ್ಯಾಟಿಂಗ್ ಆರ್ಡರ್  ನಲ್ಲಿ ಪಂದ್ಯದ ವೇಳೆ ಕೆಲ ತಂಡದ ಮಾಲೀಕರು ಹಸ್ತಕ್ಷೇಪ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಕೆಲ ಆಟಗಾರರನ್ನು ಸಂಪರ್ಕಿಸಿ ಬುಕ್ಕಿಗಳು ನಿರ್ದೇಶನ ನೀಡುತ್ತಿದ್ದರು ಎನ್ನಲಾಗಿದೆ. ಮ್ಯಾಚ್ ಫಿಕ್ಸಿಂಗ್  ಬಹುತೇಕ ತಂಡದ ನಾಯಕನ ಮೂಲಕವೇ ನಡೆಯುತ್ತಿದ್ದು, ಆಟಗಾರರನ್ನು ಕ್ಯಾಪ್ಟನ್ ಬಳಸಿಕೊಳ್ಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.  ವಿಚಾರಣೆ ವೇಳೆ ಪೂರ್ವ ನಿಯೋಜನೆಯಂತೆ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿತ್ತು ಎಂಬ ಅಂಶ ಹೊರಬಂದಿದೆ.  ಪ್ರಕರಣ ಬಯಲಾಗುತ್ತಿದ್ದಂತೆ ಅಂತಾರಾಷ್ಟ್ರೀಯ ಬುಕ್ಕಿಗಳಾದ ಅಮಿತ್ ಮಾವಿ, ಮನೋಜ್ ಅಲಿಯಾಸ್ ಮಾಂಟಿ, ವೆಂಕಿ ಹಾಗೂ ಖಾನ್ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾರೆ.  ಸದ್ಯ ಬುಕ್ಕಿಗಳ ಮೊಬೈಲ್ ಸಂಖ್ಯೆ ಪಡೆಯುವಲ್ಲಿ ತನಿಖಾ ತಂಡ ತಲ್ಲೀನವಾಗಿದೆ.