ಕೆ.ಇ.ಬೋರ್ಡ ಸಂಸ್ಥೆ ಕಾರ್ಯ ಶ್ಲಾಘನೀಯ: ಸಿದ್ಧೇಶ್ವರಶ್ರೀ

ಧಾರವಾಡ: ನ-06 ನೂರು ವರ್ಷಗಳಿಂದ ಅನೇಕ ವಿದ್ಯಾಥರ್ಿಗಳಿಗೆ ಜ್ಞಾನಾಮೃತವನ್ನು ಉಣಬಡಿಸಿ, ನಾಡಿಗೆ ಅಮೂಲ್ಯ ಕೊಡುಗೆ ನೀಡುತ್ತಿರುವ ಕೆ. ಇ. ಬೋರ್ಡ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು ಎಂದು ಬಿಜಾಪುರ ಜ್ಞಾನಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಶುಭಕೋರಿದರು.

ಸ್ಥಳೀಯ ಮಾಳಮಡ್ಡಿ ಕೆ. ಇ. ಪ್ರೌಢ ಶಾಲೆಯಲ್ಲಿ ಶತಮಾನೋತ್ಸವ ಆಚರಣೆಯ ಅಂಗವಾಗಿ ನಿಮರ್ಿಸಿದ ಔಷಧಿ ಸಸ್ಯಗಳ ಉದ್ಯಾನ ವೀಕ್ಷಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ವಿದ್ಯಾಥರ್ಿಗಳು ಸಸ್ಯ-ಹಸಿರನ್ನು ಪ್ರೀತಿಸಿ ಪೋಷಿಸಿತ್ತಿರುವುದು. ಭವಿಷ್ಯದಲ್ಲಿ ಹೆಮ್ಮೆಯ ಸಂಗತಿ. ಸಸ್ಯಗಳು ಆರೋಗ್ಯ ಸಂಜಿವಿನಿಯಾಗಿವೆ. ಮುಂಪಿಳಿಗೆಗೆ ಉತ್ತಮ ಆರೋಗ್ಯ ನೀಡುವಲ್ಲಿ ಇದು ಅಮೂಲ್ಯ ಕಾರ್ಯವಾಗಿದೆ. ಮಕ್ಕಳು ಕ್ಷಣಿಕ ಶ್ರೀಮಂತಿಕೆ ಬೆನ್ನುಹತ್ತದೆ. ಜ್ಞಾನಾಮೃತ ಪಡೆಯಲು  ಸನ್ನದ್ಧರಾಗಬೇಕು. ಕೆ. ಇ. ಬೋರ್ಡ ಸಂಸ್ಥೆ ಈ ನಿಟ್ಟಿನಲ್ಲಿ ಭಾರತೀಯ ಸಂಸ್ಕೃತಿ ಎತ್ತಿಹಿಡಿಯುವ ಶ್ರೇಷ್ಠ ಕಾರ್ಯ ಮಾಡುತ್ತಾ ಬಂದಿವೆ. ಇಂತಹ ಸಂಸ್ಥೆಯ ಓದುತ್ತಿರುವ ವಿದ್ಯಾಥರ್ಿಗಳು ಪುಣ್ಯವಂತರು.

ಜಗತ್ತಿನಲ್ಲಿ ಅನ್ನ, ನೀರು, ಜ್ಞಾನ ಜೀವನದಲ್ಲಿ ಬೆಲೆಬಾಳುವ ಆಭರ್ಣಗಳಾಗಿವೆ. ಇವು ಇಲ್ಲದ ಜೀವನ ನಶ್ವರ. ರೈತ ಕೊಡುವ ಅನ್ನ ಪ್ರಕತಿ ನೀಡುವ ನೀರು ಗುರುಗಳು ದಯಪಾಲಿಸುವ ಜ್ಞಾನ ಇವು ಜೀವನ ಶ್ರೀಮಂತಿಕೆ ಹೆಚ್ಚಿಸುವ ಅಮೂಲ್ಯ ರತ್ನಗಳು. ಇವುಗಳ ಸಮೃದ್ಧಿಯಿಂದ ದೇಶ, ಜಗತ್ತು ಶ್ರೀಮಂತವಾಗುತ್ತದೆ. ನಾವು ಕಸಿದುಕೊಳ್ಳುವ ಶ್ರೀಮಂತರಾಗುವುದಕ್ಕಿಂತ ದಾನ ಮಾಡುವ ಶ್ರೀಮಂತಿಕೆ ಶ್ರೀಷ್ಠವಾದುದು. ಇಂತಹ ಶ್ರೀಮಂತರಾಗಿ ದೇಶದ ಕೀತರ್ಿ ಹೆಚ್ಚಿಸೋಣ ಎಂದು ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ಗುಡಗೇರಿ ಮಠದ ಪೂಜ್ಯ ಮಲ್ಲಯ್ಯ ಸ್ವಾಮೀಜಿ, ಕೆ.ಇ.ಬೋರ್ಡ ಸಂಸ್ಥೆಯ ಕಾಯರ್ಾಧ್ಯಕ್ಷರು ಅರುಣ. ನಾಡಗೇರ ನಿದರ್ೇಶಕರಾದ, ಆರ್.ಎ. ಸಿದ್ದಾಂತಿ, ಪ್ರಾಂಶುಪಾಲ ವಸಂತ ಮುರುಡೇಶ್ವರ, ಉಪಪ್ರಾಂಶುಪಾಲ ಎನ್.ಎಸ್. ಗೋವಿಂದರೆಡ್ಡಿ, ಮುಖ್ಯೋಪಾದ್ಯಾಯರಾದ ಸ್ಮೀತಾ ಕುಲಕಣರ್ಿ, ವಂದನಾ ಹರ್ಪನಹಳ್ಳಿ. ಶಿಕ್ಷಕ ಆನಂದ ಕುಲಕಣರ್ಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.