ಕೆ. ಬಸವರಾಜಗೆ 'ಶರಣ ಕಾಯಕ ರತ್ನ' ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಬೆಳಗಾವಿ 23:  ಇತ್ತೀಚಿಗೆ ಲಿಂಗಾಯತ ಧರ್ಮಕ್ಷೇತ್ರ ಕೂಡಲಸಂಗಮದಲ್ಲಿ ತಾ. 11 ರಿಂದ 14ರ ವರೆಗೆ ನಡೆದ ಜಾಗತಿಕ ಸಮಾವೇಶ - 33ನೇ "ಶರಣ ಮೇಳ"ದಲ್ಲಿ ರಾಷ್ಟ್ರೀಯ ಬಸವ ದಳದ ಬೆಳಗಾವಿ ಜಿಲ್ಲಾಧ್ಯಕ್ಷರು ಮತ್ತು ಲಿಂಗಾಯತ ಧರ್ಮ ಮಹಾಸಭಾದ ರಾಜ್ಯ ಗೌರವಾಧ್ಯಕ್ಷ ಶರಣ ಕೆ. ಬಸವರಾಜನವರಿಗೆ - ಬಸವಧರ್ಮ ಪೀಠದಿಂದ ಕೊಡಮಾಡುವ "ಶರಣ ಕಾಯಕ ರತ್ನ" ಪ್ರಶಸ್ತಿಯನ್ನು ದಿ. 12ರಂದು ಪೀಠಾಧ್ಯಕ್ಷ ನಿರಂಜನ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ ತಾಯಿಯವರು ನೀಡಿ ಆತ್ಮೀಯವಾಗಿ ಸನ್ಮಾನಿಸಿದ್ದಾರೆ. ಪ್ರಶಸ್ತಿಯೊಟ್ಟಿಗೆ 'ಪ್ರಶಂಸಾ ಪತ್ರವನ್ನು ದಯಪಾಲಿಸಿ ಗೌರವಿಸಲಾಗಿದೆ. ಬೆಂಗಳೂರು ಕುಂಬಳಗೋಡಿನ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಕೊಲ್ಹಾಪುರ ಅಲ್ಲಮಗಿರಿಯ ಜಗದ್ಗುರು ಬಸವಕುಮಾರ ಸ್ವಾಮೀಜಿ, ಬಸವಕಲ್ಯಾಣದ ಸದ್ಗುರು ಬಸವಪ್ರಭು ಸ್ವಾಮೀಜಿ, ಉಳವಿಯ ಅಕ್ಕನಾಗಲಾಂಬಿಕಾ ಪೀಠದ ಜಗದ್ಗುರು ದಾನೇಶ್ವರಿ ಮಾತಾಜಿ, ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಜಗದ್ಗುರು ಜ್ಞಾನೇಶ್ವರಿ ಮಾತಾಜಿ ಅಲ್ಲದೆ ರಾಷ್ಟ್ರೀಯ ಬಸವದಳದ ರಾಷ್ಟ್ರಾಧ್ಯಕ್ಷ ಶರಣ ಬಸವರಾಜ್ ಧನ್ನೂರು, ಹಿಂದುಳಿದವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕನಾಥ, ಬೆಳಗಾವಿ ಲೆಕ್ಕ ಪರಿಶೋಧನಾ ಇಲಾಖೆಯ ಪ್ರಾದೇಶಿಕ ಅಧಿಕಾರಿ ಶರಣ ಎಸ್. ದಿವಾಕರ್, 'ಬಸವಮಾರ್ಗ ' ಮಾಸಪತ್ರಿಕೆಯ ಸಂಪಾದಕ ವಿಶ್ವರಾಧ್ಯ ಸತ್ಯಂಪೇಟ, ಗಣನಾಯಕ ಸಂಕೇಶ್ವರದ ಡಾ. ಶಿ.ಬಾ.ಪಾಟೀಲರು ಹಾಗೂ ಕೊಪ್ಪಳದ ಶರಣ ವೀರಣ್ಣ ಕೊರ್ಲಳ್ಳಿಯವರ ಉಪಸ್ಥಿತಿಯಲ್ಲಿ ನೆರವೇರಿತು. 

ಇದೇ ವೇದಿಕೆಯಲ್ಲಿ ಈ ರೀತಿ ಪ್ರಶಸ್ತಿಗೆ ಪಾತ್ರರಾದ ಇನ್ನಿತರ ಶರಣರೆಂದರೆ - ಬೆಂಗಳೂರು ವಿಜಯಪುರದ ಶರಣ ಬಸವರಾಜೇಂದ್ರಪ್ಪ, ಕೂಡಲಸಂಗಮದ ಜಿ.ಜಿ.ಪಾಟೀಲರು ಮತ್ತು ಕೊಪ್ಪಳದ ಸುಂಕಪ್ಪ ಅಮರಾಪುರ ಪ್ರಶಂಸಾ ಪತ್ರದಲ್ಲಿ - "ಶರಣ ಕೆ. ಬಸವರಾಜನವರು 1995ರಿಂದ ಬಸವ ತತ್ವದಲ್ಲಿ ನಡೆಯುತ್ತಿದ್ದು, 'ಲಿಂಗಾಯತ ಧರ್ಮ ಮಹಾಸಭಾ'ದ ರಾಜ್ಯ ಗೌರವಾಧ್ಯಕ್ಷರಾಗಿ ಹಾಗೂ ಬೆಳಗಾವಿ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ ಬಸವಧರ್ಮ ಪೀಠದ ಸಕ್ರಿಯ ಸದಸ್ಯರಾಗಿದ್ದಾರೆ. ಇವರ ಸಾಮಾಜಿಕ  ಧಾಮರ್ಿಕ ಕಳಕಳಿಯನ್ನು  ಗುರುತಿಸಿ ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರು ಡಾ. ಮಾತೆ ಮಹಾದೇವಿಯವರು ಇವರನ್ನು ಲಿಂಗಾಯತಧರ್ಮ ಮಹಾಸಭಾದ (ಕನರ್ಾಟಕ) ರಾಜ್ಯಾಧ್ಯಕ್ಷರನ್ನಾಗಿ ಮಾಡಿ ವಿಶೇಷ ಸ್ಥಾನವನ್ನು  ಕೊಟ್ಟಿರುತ್ತಾರೆ. ಬಸವ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸತ್ಯ ಶುದ್ಧ ಕಾಯಕವನ್ನು ನಡೆಸುತ್ತಿದ್ದಾರೆ. ಬಸವ ತತ್ವ ಪ್ರಚಾರಕ್ಕಾಗಿ ತನು ಮನ ಧನದ ಮೂಲಕ ಸೇವೆ ಸಲ್ಲುಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಬಸವ ಧರ್ಮ ಪೀಠವು "ಶರಣ ಸೇವಾ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ" ಎಂದು ಕೊಂಡಾಡಿದ್ದಾರೆ. 

ಕಳೆದ ರವಿವಾರ, ದಿ. 19ರಂದು ಬೆಳಗಾವಿ 'ವಿಶ್ವಗುರು ಬಸವ ಮಂಟಪ'ದಲ್ಲಿ ನಡೆದ ವಾರದ ಸಾಮೂಹಿಕ ಇಷ್ಟಲಿಂಗಾರ್ಚನೆ ಮತ್ತು ಪ್ರಾರ್ಥನೆಯ "ಶರಣ ಸಂಗಮ"ದಲ್ಲಿ ಸಂಚಾಲಕ ಸದ್ಗುರು ಪ್ರಭುಲಿಂಗ ಸ್ವಾಮೀಜಿಗಳ ಸನ್ನಿಧಿಯಲ್ಲಿ ಹಾಗೂ ಸರ್ವ ಶರಣರ ಉಪಸ್ತಿತಿಯಲ್ಲಿ ಇವರನ್ನು ಭಕ್ತಿಪೂರ್ವಕವಾಗಿ ಅಭಿನಂದಿಸಿ ಗೌರವಿಸಲಾಯಿತು.