ಲೋಕದರ್ಶನ ವರದಿ
ಬೆಳಗಾವಿ 8: ಧಾರವಾಡದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿ. ಪಿ.ಐ. ಜ್ಯೋತಿಲರ್ಿಂಗ ಹೊನಕಟ್ಟಿ ಅವರಿಂದ ತತ್ವಪದ ಹಾಗೂ ಜಾನಪದ ಹಾಡುಗಳ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ತತ್ವಪದ, ಜನಪದ ಗೀತೆಗಳಿಂದ ಹೊನಕಟ್ಟಿ ಅವರು ಕಾರ್ಯಕ್ರಮದಲ್ಲಿ ಆಕಶರ್ಿತರಾದರು ಬಸವರಾಜ ತಿಮ್ಮಾಪುರ ತಬಲಾ ಸಾಥ ನೀಡಿದರು. ನಂದಕುಮಾರ ಹಾಮರ್ೊನಿಯಂ ನುಡಿಸಿದರು ಸಹಾಯಕರಾಗಿ ಅರುಣ ಶಿರಗಾಪುರ, ಶ್ರೀರಂಗ ಜೊಶಿ, ಕಾರ್ಯನಿರ್ವಹಿಸಿದರು. ಈ ನಿಮಿತ್ಯ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಹೊನಕಟ್ಟಿ ಇವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಪೋಲಿಸ್ ಇಲಾಖೆ ಸೇವೆ ಜೊತೆಗೆ ಹೊನಕಟ್ಟಿ ಇವರು ಜನಪದ ಕ್ಷೇತ್ರದಲ್ಲಿ ತಮ್ಮದೇಯಾದ ಸಾಧನೆ ಮಾಡುತ್ತಿದ್ದಾರೆ. ಈಗಾಗಲೇ ಈ ಕುರಿತು ಪುಸ್ತಕ ಹಾಗೂ ಧ್ವನಿ ಸುರಳಿ ಬಿಡುಗಡೆ ಗೊಳಿಸಿದ್ದಾರೆ.