ನ್ಯಾಯ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು -ಶಾಸಕ ಹಿಟ್ನಾಳ
Justice is the fundamental right of every individual - MLA Hitnala
ನ್ಯಾಯ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು -ಶಾಸಕ ಹಿಟ್ನಾಳ
ಕೊಪ್ಪಳ 5 : ನ್ಯಾಯ ಎಂಬುವುದು ಅದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಪೈಗಂಬರ್ ಪ್ರವಾದಿ ಮಹಮ್ಮದ್ (ಸ) ರವರು ಸಾರಿದ್ದಾರೆ ಮತ್ತೆಅದನ್ನು ಸಂರಕ್ಷಿಸಲು ವಿಶೇಷ ಓತ್ತು ನೀಡಿದ್ದಾರೆ ಎಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಹೇಳಿದರು., ಅವರು ಶುಕ್ರವಾರ ಮಧ್ಯಾಹ್ನ ನಗರದ ಪ್ರಮುಖ ಯೂಸುಫಿಯ ಮಸೀದಿ ಆವರಣ ದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಏರಿ್ಡಸಿದ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಸಮ್ಮಿಲನ ಸಮಾರಂಭದಲ್ಲಿ ಪಾಲ್ಗೊಂಡು ಈದ್ ಮಿಲಾದ್ ಹಬ್ಬದ ಶುಭಾಶಯ ತಿಳಿಸಿ ಆಯೋಜಕರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಮುಂದುವರೆದು ಮಾತನಾಡಿ ಶಾಂತಿ ಸಮಾಧಾನ ನೆಲೆ ನಿಲ್ಲಬೇಕಾದರೆ ನ್ಯಾಯ ಪಾಲನೆಯು ಅನಿವಾರ್ಯ, ನ್ಯಾಯ ಮರೀಚಿಕೆಯಾದರೆ ಅಸಮಾಧಾನ ಅಕ್ರಮ ಆರಾಜಕತೆ ವರ್ದಿಸುತ್ತದೆ, ಪ್ರವಾದಿಯ ಈ ಶಿಕ್ಷಣವನ್ನು ಅವರ ಅನುಯಾಯಿಗಳು ತಮ್ಮ ಆಡಳಿತ ಅವಧಿಯಲ್ಲೂ ಅಳವಡಿಸಿದ್ದರು ಎಂದು ವಿವರಿಸಿದರು, ನಾವುಗಳು ಸಮಾಜದಲ್ಲಿ ಸಹೋದರತ್ವ ಮತ್ತು ಬಾತೃತ್ವ ದ ವಾತಾವರಣ ನಿರ್ಮಿಸುವುದರ ಜೊತೆಗೆ ಮಾನವೀಯ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು ಇಂತಹ ಹಬ್ಬಗಳ ಆಚರಣೆಗಳ ಮೂಲಕ ಪ್ರವಾದಿಗಳು ,ಸಾಧು, ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಬದುಕು ಕಟ್ಟಿಕೊಳ್ಳಬೇಕು ಎಲ್ಲರೊಂದಿಗೆ ಸೌಹಾರ್ದತೆ ಯೊಂದಿಗೆ ಬದುಕಿದರೆ ನಮ್ಮ ಜೀವನ ಸಾರ್ಥಕ ವಾಗುತ್ತದೆ ಎಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ನಗರದ ಹಿರಿಯ ಗಣ್ಯ ವ್ಯಕ್ತಿಗಳಾದ ಅಂದಾನಪ್ಪ ಅಗಡಿ, ಶಾಂತಣ್ಣ ಮುದಗಲ್, ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ ಶ್ರೀನಿವಾಸ ಗುಪ್ತ ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷ ಕಾಟನ್ ಸಮಾಜದ ಹಿರಿಯ ಮುಖಂಡ ಬಾಶೂ ಸಾಬ್ ಖತೀಬ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನ ಗಡಾದ್, ಶರಣಪ್ಪ ಸಜ್ಜನ್, ರವಿ ಕುರುಗೋಡು, ಮಂಜುನಾಥ್ ಗೊಂಡಬಾಳ ,ಎಂ ಲಾಯಕ್ ಅಲಿ, ಗುತ್ತಿಗೆದಾರ ಬಸವರಾಜ್ ಪುರದ, ಜೆಡಿಎಸ್ ಮುಖಂಡ ಸುರೇಶ ಭೂಮರೆಡ್ಡಿ, ಉದ್ದಿಮೆ ವೆಂಕಟೇಶ್ ಬಾರ್ಕೆರ್, ನಗರಸಭಾ ಸದಸ್ಯ ರಾಜಶೇಖರ್ ಅಡೂರ್, ಮುತ್ತುರಾಜ ಕುಷ್ಟಗಿ ಸಮಾಜದ ಯುವ ನಾಯಕ ಸಯ್ಯದ್ ಮೆಹ ಮೆಹಮೂದ ಹುಸೇನಿ ಬಲ್ಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಮುಸ್ಲಿಂ ಧರ್ಮ ಗುರು ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹ್ಮದ್ ಖಾದ್ರಿ ತಸ್ಕಿನಿ ರವರು ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರತಿಯೊಬ್ಬರಿಗೂ ಶುಭ ಕೋರಿದರು.ಅಲ್ಲದೆ ಮಸೀದಿ ಕಮಿಟಿ ಅಧ್ಯಕ್ಷ ಸೈಯದ್ ಎಜದಾನಿ ಪಾಷಾ ಖಾದ್ರಿ ಅನೇಕರು ಪಾಲ್ಗೊಂಡಿದ್ದು ಸಮಾಜದ ಯುವ ನಾಯಕ ಸಲೀಂ ಅಳವಂಡಿ ರವರು ಕಾರ್ಯಕ್ರಮ ದ ನಿರೂಪಣೆ ಮಾಡಿ ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು,
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 