ಲೋಕದರ್ಶನ ವರದಿ
ಗಂಗಾವತಿ 27: ಹಗರಲಿರುಳು ಸಮಾಜದ ಓರೆಕೋರೆ ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುವ ಪತ್ರಕರ್ತರು, ತಮ್ಮ ವೃತ್ತಿ ಪಾವಿತ್ರ್ಯತೆ ಕಾಪಾಡಿಕೊಳ್ಳಲಿ ಸಮಾಜಕ್ಕೆ ಮಾದರಿಯಾಗಲಿ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಹೇಳಿದರು.
ಅವರು ನಗರದ ತಾಲೂಕಾ ಪಂಚಾಯತ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಸಂಸದರ ಅನುದಾದಡಿ ಮಂಜುರಾದ 5ಲಕ್ಷ ರೂ ವೆಚ್ಚದ ಮುಂದುವರೆದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಪತ್ರಕರ್ತರು ಯಾರದೆ ಹಂಗಿಗೊಳಗಾಗದೆ ನಿಧರ್ಾಕ್ಷಿಣ್ಯವಾಗಿ ಸುದ್ದಿ ಬಿತ್ತರಿಸುವ ಜಾಯಮಾನ ಹೊಂದಿದ್ದು, ತಮ್ಮ ಮೊನಚು ಬರಹಗಳಿಂದಲೆ ಸಮಾಜಕ್ಕೆ ದಾರಿ ತೋರಿಸುತ್ತಾರೆ ಎಂದರು.
ನಾಲ್ಕನೇ ಅಂಗ ಪತ್ರಿಕಾ ರಂಗ ಪ್ರಜಾಪ್ರಭುತ್ವದ ಕಾವಲು ನಾಯಿ, ಸರಕಾರದ ಯೋಜನೆಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಹಿರಿದು ಎಂದು ತಿಳಿಸಿದರು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಹಗಲಿರುಳು ವೃತ್ತಿ ನಿಷ್ಠೆ ಮೆರೆಯುತ್ತಿರುವ ಪತ್ರಕರ್ತರ ಸಂಬಳ ಕಡಿಮೆ ಇದ್ದರೂ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದ ಅವರು ನೆನೆಗುದಿಗೆ ಬಿದ್ದಿರುವ ಗ್ರಂಥಾಲಯ ಕಟ್ಟಡ ಅಭಿವೃದ್ಧಿಗೆ 5 ಲಕ್ಷ ರೂ ತಮ್ಮ ಅನುದಾನ ನೀಡುವುದಾಗಿ ಘೋಷಿಸಿದರು.
ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕಾ ಘಟಕದ ಅಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ ಹೈದ್ರಾಬಾದ ಕನರ್ಾಟಕದಲ್ಲೆ ಮೊದಲ ಬಾರಿಗೆ ಗಂಗಾವತಿಯಲ್ಲಿ ಪತ್ರಿಕಾ ಭವನ ನಿಮರ್ಾಣ ಮಾಡಲಾಗಿದ್ದು ಸುಸಜ್ಜಿತ ಭವನದಿಂದಾಗಿ ವೃತ್ತಿ ಕೌಶಲ್ಯ ಹೆಚ್ಚಳವಾಗುತ್ತದೆ. ಸಂಸದರು ತಮ್ಮ ಅನುದಾನ ನೀಡಿರುವುದು ಅಭಿನಂದನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿಂಗನಾಳ್ ವಿರುಪಾಕ್ಷಪ್ಪ, ಪತ್ರಕರ್ತರ ಸಂಘದ ತಾಲೂಕಾ ಗೌರವಧ್ಯಕ್ಷ ವೀರೇಶ್ ಬಳ್ಳಾರಿ, ಜಿಲ್ಲ್ಲಾ ಉಪಾಧ್ಯಕ್ಷ ವೆಂಕಟೇಶ್ ಆರ್ ಕುಲಕಣರ್ಿ, ಕಾರ್ಯದಶರ್ಿ ವೃಷಭೇಂದ್ರ ಸ್ವಾಮಿ ನವಲಿ ಹಿರೇಮಠ, ಪತ್ರಕರ್ತರಾದ ಪ್ರಸನ್ನ ದೇಸಾಯಿ, ವೀರಾಪುರ ಕೃಷ್ಣ, ಚಂದ್ರಶೇಖರ್ ಮುಕುಂದಿ, ಹನುಮೇಶ್ ಬಟಾರಿ ಇತರರಿದ್ದರು. ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಪ್ರಶಸ್ತಿಗೆ ಭಾಜನರಾದ ಪ್ರಜಾಪ್ರಪಂಚ ಪತ್ರಿಕೆಯ ಸಂಪಾದಕರಾದ ವೀರೇಂದ್ರ ಹೆಚ್.ಇರಕಲ್ ಇವರನ್ನು ಸನ್ಮಾನಿಸಲಾಯಿತು.