ಲೋಕದರ್ಶನ ವರದಿ
ಕೊಪ್ಪಳ 26: ಸಪ್ಟಂಬರ್ ತಿಂಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ 35ನೇ ರಾಜ್ಯ ಮಟ್ಟದ ಸಮ್ಮೇಳನ ನಡೆಸಲು ಕೆಯುಡಬ್ಲ್ಯುಜೆ ರಾಜ್ಯ ಸಮೀತಿ ತೀರ್ಮಾನ ನಿಸಿದ್ದು ಅದರಂತೆ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು, ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಕಾರ್ಯ ನೀರತ ಪತ್ರಕರ್ತರ ಸಂಘದ ಜಿಲ್ಲಾ ಅದ್ಯಕ್ಷ ಎಂ ಸಾದಿಕ್ ಅಲಿ ಹೇಳಿದರು.
ಜಿಲ್ಲೆಯ ಯಲಬುರ್ಗ ಪಟ್ಟಣದ ತಹಸೀಲ್ದಾರ ಕಾರ್ಯಲಯದ ಆವರಣದಲ್ಲಿರುವ ಕಂದಾಯ ಇಲಾಖೆಯ ಸಭಾ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಭೆಯ ಅಧ್ಯಕ್ಷತೆ ವಹಿಸಿ ಸರ್ವಸದಸ್ಯರ ಸಲಹೆ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಉತ್ತರ ಕನರ್ಾಟಕದ ವಿವಿಧ ಜಿಲ್ಲೆಯ ಪತ್ರಕರ್ತರು ಸಮ್ಮೇಳನ ತಮ್ಮ ಜಿಲ್ಲೆಯಲ್ಲಿ ನಡೆಸಲು ರಾಜ್ಯ ಮಟ್ಟದವರನ್ನು ಕೇಳಿಕೊಂಡಿದ್ದರು ಅದರಂತೆ ನಾವು ಮನವಿ ಸಲ್ಲಿಸಿದ್ದೇವು ನಮ್ಮ ಮನವಿಗೆ ಸ್ಪಂದಿಸಿ ನಮ್ಮ ಜಿಲ್ಲೆಯಲ್ಲಿಯೇ ರಾಜ್ಯ ಸಮ್ಮೇಳನ ನಡೆಸಲು ತಿಮರ್ಾನಿಸಿದ್ದು ನಮಗೆ ಖುಷಿ ತಂದಿದೆ ಅದರಂತೆ ಯಾವುದೇ ನೂನ್ಯತೆಗಳು ಆಗದಂತೆ ಎಲ್ಲರು ಒಟ್ಟುಗೂಡಿ ಈ ಸಮ್ಮೇಳನ ಯಶಸ್ವಗೋಳಿಸೋಣ ಎಂದರು.
ರಾಜ್ಯ ಸಮಿತಿ ಕಾರ್ಯಕಾರಿಣಿ ಸದಸ್ಯ ಜಿ ಎಸ್ ಗೋನಾಳ ಮಾತನಾಡಿ ಪತ್ರಕರ್ತರ ಸಮ್ಮೇಳನದಲ್ಲಿ ವಿವಿಧ ಸಮಿತಿಗಳನ್ನ ರಚಿಸಲಾಗುವದು ಅದರಂತೆ ಅವರು ಕರ್ತವ್ಯ ನಿರ್ವಹಿಸಬೇಕು ಹಾಗೂ ಅಂದು ನಮ್ಮ ಭಾಗಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳ ಕುರಿತು ಚಚರ್ೆಗಳು ನಡೆಯಲಿದ್ದು ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದರು.
ರಾಜ್ಯ ಕಾರ್ಯಕಾರಣಿ ನಾಮಕರಣ ಸದಸ್ಯ ಎಚ್ ಎಸ್ ಹರೀಶ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎನ್ ಎಂ ದೊಡ್ಡಮನಿ, ಜಿಲ್ಲಾ ವರದಿಗಾರರಾದ ಮೌಲಾಹುಸೇನ್ ಬುಲ್ಡಿಯಾರ, ಸಿದ್ದನಗೌಡ ಪಾಟೀಲ, ಬಸವರಾಜ ಕಕರ್ಿಹಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕ ಗೌರವ ಅಧ್ಯಕ್ಷರಾದ ಉಮಾಶಂಕರ ಹಿರೇಮಠ, ಅದ್ಯಕ್ಷರಾದ ಇಮಾಮ್ ಸಂಕನೂರ, ಉಪಾಧ್ಯಕ್ಷರಾದ ವಿ ಎಸ್ ಶಿವಪ್ಪಯ್ಯನಮಠ, ಪ್ರಧಾನ ಕಾರ್ಯದರ್ಶಿ ರವಿಕುಮಾರ ಛಲವಾದಿ ವರದಿಗಾರರಾದ ವೀರಣ್ಣ ನಿಂಗೋಜಿ, ಭೀಮಪ್ಪ ಹವಳಿ, ಶ್ಯಾಮೀದ್ ತಾಳಕೇರಿ, ದಾದು ಯಲಿಗಾರ, ಮಂಜು ರಾಜೋಳ್ಳಿ, ಭರಮಪ್ಪ ಸೂಡಿ ಸೇರಿದಂತೆ ಅನೇಕರು ಹಾಜರಿದ್ದರು.