ಕಲ್ಯಾಣ ಕರ್ನಾಟಕ ಮೀಡಿಯಾ ಹಬ್ಬ ಸ್ಪರ್ಧೆಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉತ್ತಮ ಸಾಧನೆ
ಕೊಪ್ಪಳ 07: ಇತ್ತಿಚೆಗೆ ಕಲಬುರ್ಗಿಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಂಪರ್ಕ ಇಲಾಖೆ ಮತ್ತು ಶರಣಬಸವ ವಿಶ್ವ ವಿದ್ಯಾಲಯ ವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಮೀಡಿಯಾ ಹಬ್ಬದ ಅಂಗವಾಗಿ ಏರಿ್ಡಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ದ್ವೀತಿಯಾ ವರ್ಷದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಈರಣ್ಣ ಪಗಡಾಲ್, ರೇಡಿಯೋ ಜಾಕಿ ಸ್ಪರ್ಧೆಯಲ್ಲಿ ಪ್ರಥಮ, ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಪಿಟಿಸಿಯಲ್ಲಿ ತೃತೀಯಾ ಸ್ಥಾನ, ವಿದ್ಯಾರ್ಥಿ ಭಾನುಪ್ರಕಾಶ್, ಶಿವರಾಜ್ ಹಾಗೂ ನರಸಪ್ಪ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತೀಯಾ ಸ್ಥಾನ, ಪ್ರಥಮ ವರ್ಷದ ವಿದ್ಯಾರ್ಥಿ ಪ್ರಸಾದ್.ವಿ.ಪಿ ಸಾಮಾಜಿಕ ಬರವಣಿಗೆ ಸ್ಪರ್ಧೆಯಲ್ಲಿ ತೃತೀಯಾ ಸ್ಥಾನ ಪಡೆದುಕೊಂಡಿದ್ದಾರೆ.
ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಜುನಸಾಬ ವಡ್ಡಟ್ಟಿ, ವಿಜಯಕುಮಾರ, ಅಶ್ವಿನಿ, ರೇಣುಕಾ, ಈರಮ್ಮ, ಸ್ವಾತಿ, ಸಿದ್ದಾರ್ಥ, ಪ್ರಮೀಳಾ, ರಾಹುಲ್, ,ಸುಕಮಿನಿ, ಸಿದ್ದನಗೌಡ , ಸೋಮಪ್ಪ ಅವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಕೊಪ್ಪಳ ವಿವಿ ಕುಲಪತಿ ಪ್ರೋ.ಬಿ.ಕೆ.ರವಿ, ಕುಲ ಸಚಿವ ಕೆ.ವಿ.ಪ್ರಸಾದ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರಕಾಶ ಯಳವತ್ತಿ, ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಶ್ರೀಕಾಂತ್, ಸಂತೋಷಕುಮಾರ, ರಂಗನಾಥ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.