ನವದೆಹಲಿ : 19, ಹುಬ್ಬಳ್ಳಿಯಲ್ಲಿ ಬಹು ಅಪೇಕ್ಷಿತ ಹಾಗೂ ನಿರೀಕ್ಷಿತ ಸುಸಜ್ಜಿತ ವಿವಿದ್ದೋದೇಶ ಕ್ರೀಡಾ ಸಂಕಿರ್ಣ 11.35 ಕೋಟಿ ರೂ ವೆಚ್ಚದಲ್ಲಿ ಕೇಂದ್ರ ಸರಕಾರದ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ತಲೆ ಎತ್ತಲಿದೆಯೆಂದು ಸಂಸದ ಪ್ರಲ್ಹಾದಹಾದ ಜೋಶಿ ತಿಳಿಸಿದ್ದಾರೆ.
ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಕ್ರೀಡಾ ಸಚಿವರನ್ನು ಸಂಸತ್ ಆವರಣದಲ್ಲಿ ಬೇಟಿಯಾದಾಗ ಸ್ವತಃ ಸಚಿವ ರಾಜವರ್ಧನ ರಾತೋಡ ಅವರು ಈ ಸಂತಸದ ಸುದ್ದಿ ತಿಳಿಸಿ 8 ಕೋಟಿ ರೂಗಳನ್ನು ಬಿಡುಗಡೆ ಮಾಡಿದ ಕ್ರೀಡಾ ಇಲಾಖೆಯ ಮಂಜೂರಾತಿ ಪತ್ರವನ್ನು ನೀಡಿದ್ದಾರೆ. ಈ ಹಣವನ್ನು ಹಂತ ಹಂತವಾಗಿ ಕನರ್ಾಟಕ ಸರಕಾರದ ಕ್ರೀಡಾ ಇಲಾಖೆಗೆ ನೀಡಲಾಗುತ್ತಿದ್ದು ಯೋಜನೆಯ ಪ್ರಗತಿಯ ಆಧಾರದ ಮೇಲೆ ಕಂತುಗಳಲ್ಲಿ ಹಣ ಬಿಡುಗಡೆ ಆಗಲಿದೆಯೆಂದು ತಿಳಿಸಿಸಿದ ಜೋಶಿ ಮೊದಲ ಕಂತಾಗಿ ರೂ 3 ಕೋಟಿ ಬರಲಿದೆ ಎಂದಿದ್ದಾರೆ.
ಹುಬ್ಬಳ್ಳಿ ಮಹನಾಗರ ಪಾಲಿಕೆೆ ವ್ಯಾಪ್ತಿಯಲ್ಲಿ ತಲೆ ಎತ್ತಲಿರುವ ಈ ಕ್ರೀಡಾ ಸಂಕಿರ್ಣದಿಂದ ಈ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳು ಗರಿಗೆದರಲಿದ್ದು ಕ್ರೀಡೆಯಲ್ಲಿ ಸಾಧನೆ ಮಾಡುವ ಗುರಿ ಹೊಂದಿರುವ ಯುವಕರಿಗೆ ಇದೊಂದು ವರದಾನವಾಗಲಿದೆಯೆಂದು ಸಂತಸ ವ್ಯಕ್ತ ಪಡಿಸಿರುವ ಶ್ರೀ ಜೋಶಿ ತಾವು ಸ್ವತಃ ಈ ವಿಷಯದಲ್ಲಿ ಕ್ರೀಡಾ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸುವುದರಿಂದ ಹಿಡಿದು ಪ್ರಸ್ತಾವನೆ ಕೇಂದ್ರ ಸರಕಾರದಲ್ಲಿದ್ದಾಗ ಹಲವಾರೂ ಬಾರಿ ಹಿಂದಿನ ಹಾಗೂ ಈಗಿನ ಕೇಂದ್ರ ಕ್ರೀಡಾ ಸಚಿವರೊಂದಿಗೆ ನಿರಂತರ ಸಂಪರ್ಕ ಹಾಗೂ ಕಾಲಕಾಲಕ್ಕೆ ಅವರನ್ನು ಒತ್ತಾಯಿಸಿದ ಫಲವಾಗಿ ಇಡಿ ಉತ್ತರ ಕನರ್ಾಟಕವೆ ಹೆಮ್ಮೆ ಪಡುವಂತಹುದಾದ ಸುಸಜ್ಜಿತ ಕ್ರೀಡಾ ಸಂಕಿರ್ಣ ದೊರೆತಿದೆ.
ಧಾರವಾಡದಲ್ಲೂ ಕೂಡಾ ಈಗಾಗಲೇ ತಾವು ಕಪರ್ೋರೇಟ ಸಾಮಾಜಿಕ ಬದ್ದತಾ ಕಾರ್ಯಕ್ರಮದಡಿಯಲ್ಲಿ ತೈಲ ಕಂಪನಿಗಳ ನೆರವಿನಿಂದ ಸುಮಾರು 13 ಕೋಟಿ ರೂ ವೆಚ್ಚದಲ್ಲಿ ಇಂತಹುದೆ ಸುಸಜ್ಜಿತ ಕ್ರೀಡಾ ಸಂಕಿರ್ಣದ ನಿಮರ್ಾಣಕ್ಕೆ ಚಾಲನೆ ದೊರಕಿಸಿರುವುದಾಗಿ ತಿಳಿಸಿರುವ ಜೋಶಿ ಈ ಎರಡೂ ಕ್ರೀಡಾ ಸಂಕಿರ್ಣ ಕಟ್ಟಡ ನಿಮರ್ಾಣ ಪೂತರ್ಿಗೊಂಡಾಗ ಅವಳಿ ನಗರವೂ ಸೇರಿದಂತೆ ಇಡೀ ಉತ್ತರ ಕನರ್ಾಟಕದ ಕ್ರೀಡಾ ಚಟುವಟಿಕೆಗಳ ಕೇಂದ್ರವಾಗಿ ಹೊರಹೊಮ್ಮುವುದು ನಿಶ್ಚಿತವೆಂದು ಕೂಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಸಚಿವ ರಾಜವರ್ಧನ ಅವರಿಗೆ ತುಂಬು ಹೃದಯದ ಧನ್ಯವಾದ ಹೇಳಿರುವುದಾಗಿ ಸಂಸದ ಜೋಶಿ ನವದೆಹಲಿಯಿಂದ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.