ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಸಂಕಲ್ಪಕ್ಕೆ ಕೈಜೋಡಿಸಿ: ವೆಂಕಟ್ರಾಜ್

ಕೊಪ್ಪಳ 17: ಬಾಲ್ಯ ವಿವಾಹ ಕಾನೂನು ಬಾಹಿರವಾದ್ದು, ಇದರ ನಿಮರ್ೂಲನೆ ಮತ್ತು ಕೊಪ್ಪಳ ಜಿಲ್ಲೆಯನ್ನು "ಬಾಲ್ಯ ವಿವಾಹ ಮುಕ್ತ" ಸಂಕಲ್ಪಕ್ಕೆ ಕೈಜೋಡಿಸಿ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹ ಅಧಿಕಾರಿ ವೆಂಕಟರಾಜಾ ಅವರು ವಿದ್ಯಾಥರ್ಿಗಳಿಗೆ ಕರೆ ನೀಡಿದರು.  

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಮರ್ಿಕ ಇಲಾಖೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಕಂಪನಿಗಳ ಸಹಯೋಗದಲ್ಲಿ ಬಾಲ್ಯ ವಿವಾಹ, ಬಾಲ ಕಾಮರ್ಿಕ ಪದ್ಧತಿ ನಿಮರ್ೂಲನೆ, ಸಕರ್ಾರಿ ಶಾಲೆಗಳ ಉನ್ನತೀಕರಣ ಮತ್ತು ಹಳೇ ವಿದ್ಯಾಥರ್ಿ ಸಂಘಗಳ ಬಲವರ್ಧನೆ ಹಾಗೂ ಸ್ವಚ್ಛ ಭಾರತ್ ಆಂದೋಲನ್ ಕುರಿತು ಸಂದಿಗ್ಧ ಚಲನಚಿತ್ರ ತಂಡದೊಂದಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಗುರುವಾರದಂದು ಆಯೋಜಿಸಲಾದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಬಾಲ್ಯ ವಿವಾಹದಿಂದ ಅಪೌಷ್ಟಿಕತೆ, ಆರೋಗ್ಯದ ಮೇಲೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ.  ಬಾಲ್ಯ ವಿವಾಹ ಕಾನೂನು ಬಾಹಿರವಾದ್ದು, ಬಾಲ್ಯ ವಿವಾಹ ತಡೆಯಲು ವಿದ್ಯಾಥರ್ಿಗಳ ಸಹಕಾರವು ಅತಿ ಮುಖ್ಯವಾಗಿದ್ದು, ಜಿಲ್ಲೆಯ ಎಲ್ಲಾ ಪ್ರೌಢ ಶಾಲಾ ಮತ್ತು ಕಾಲೇಜು ಮಕ್ಕಳು ಸಂದಿಗ್ಧ ಚಿತ್ರವನ್ನು ಕಡ್ಡಾಯವಾಗಿ ವೀಕ್ಷೀಸಬೇಕು.  ಅಲ್ಲದೇ ತಮ್ಮ ಪಾಲಕರು ಸಹ ಈ ಚಿತ್ರದ ವೀಕ್ಷಣೆ ಮಾಡುವಂತೆ ಅವರಿಗೆ ಮನವರಿಕೆ ಮಾಡಿ.  ಜಿಲ್ಲೆಯ ಸಾರ್ವಜನಿಕರೆಲ್ಲರಿಗೂ ಸಂದಿಗ್ಧ ಚಿತ್ರ ವೀಕ್ಷಿಸಬೇಕಾಗಿದ್ದು, ಜಿಲ್ಲೆಯ 22 ಚಿತ್ರಮಂದಿರಗಳಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ.  ಜ. 30 ರೊಳಗಾಗಿ ಸುಮಾರು 1.5 ಲಕ್ಷದಿಂದ 02 ಲಕ್ಷದ ಜನರು ಈ ಚಿತ್ರವನ್ನು ವೀಕ್ಷಣೆ ಮಾಡುವರು ಎಂಬ ನಿರೀಕ್ಷೆ ಇದೆ.  ಒಂದು ವರ್ಷದ ಒಳಗೆ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸುವುದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಗುರಿಯಾಗಿದ್ದು, ಜಿಲ್ಲೆಯ ಎಲ್ಲಾ ಸಾರ್ವಜನಿಕರು, ವಿದ್ಯಾಥರ್ಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕತರ್ೆಯರು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಂದಿಗ್ಧ ಚಿತ್ರ ಪ್ರದರ್ಶನ ಅಭಿಯಾನದಲ್ಲಿ ಸಕ್ರೀಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಿ.ಪಂ. ಮುಖ್ಯ ಕಾಯರ್ಾನಿವರ್ಾಹಕ ಅಧಿಕಾರಿ ವೆಂಕಟ್ ರಾಜ್ ಹೇಳಿದರು.  

ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನೀತಾ ತೊರವಿ ಅವರು ಮಾತನಾಡಿ, ಬಾಲ್ಯ ವಿವಾಹದಿಂದ ಮಕ್ಕಳ ಭವಿಷ್ಯ ಮತ್ತು ಶಿಕ್ಷಣ ಕುಂಠಿತವಾಗುತ್ತದೆ.  ಬಾಲ್ಯ ವಿವಾಹದಿಂದ ಹುಟ್ಟುವ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅಂಗವಿಕಲತೆ ಉಂಟಾಗುತ್ತದೆ.  ಕೊಪ್ಪಳ ಜಿಲ್ಲೆಯು ಸ್ವಚ್ಛ ಭಾರತ್ ಯೋಜನೆಯಡಿ ದೇಶದ ಗಮನವನ್ನು ಸೆಳದಿದೆ.  ಜಿಲ್ಲೆಯಲ್ಲಿ ಸುಮಾರು 1500 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ ಹಾಗೂ ಈ ಕುರಿತು 11 ಎಫ್.ಐ.ಆರ್. ದಾಖಲಾಗಿದ್ದು, ಕೊಪ್ಪಳವು ರಾಜ್ಯದಲ್ಲಿ ಮಾದರಿ ಜಿಲ್ಲೆಯಾಗಿದೆ.  ಬಾಲ್ಯ ವಿವಾಹ ಮತ್ತು ಬಾಲ ಕಾಮರ್ಿಕ ಪದ್ಧತಿಯಿಂದ ಮುಕ್ತ ಜಿಲ್ಲೆಯಾಗಬೇಕಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದರು.  

"ಮಕ್ಕಳ ಹಕ್ಕುಗಳು ಉಲ್ಲಂಘನೆಯಾದಲ್ಲಿ ವೆಬ್ಸೈಟ್ ತಿತಿತಿ.ಞಛಿಠಿಛಿಡಿ.ಛಿಠಟ "ಕರೆ" ಮೂಲಕ ದೂರನ್ನು ಅಥವಾ ಟೋಲ್ ಫ್ರೀ ನಂಬರ್ 1800-425-2900ಕ್ಕೆ ಕರೆ ಮಾಡಿ" ಎಂಬ ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಪೋಸ್ಟರ್ನ್ನು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಬಿಡುಗಡೆ ಮಾಡಿದರು.  ಕಾರ್ಯಕ್ರಮದಲ್ಲಿ ಸಂದಿಗ್ಧ ಚಲನಚಿತ್ರದ ನಿದರ್ೇಶಕ ಸುಚಿಂದ್ರ ಪ್ರಸಾದ, ಬಾಲ ನಟರಾದ  ಸಂದಿಗ್ಧ ಚಿತ್ರದ ಬಾಲ ಕಲಾವಿದರಾದ ನಿಶಾಂತ, ರಂಜಿತಾ, ಸಂಜನಾ, ಕಿರಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕ ಈರಣ್ಣ ಪಂಚಾಳ್, ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣ ಯೋಜನೆಯ ಹರೀಶ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿರೇಂದ್ರ ನಾವದಗಿ, ಚಿತ್ರನಟ ಮಹೇಶ ದೇವು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.