ಬಾಗಲಕೋಟೆ 08: ದೇಶವನ್ನು ಕಾಯುವ ಯೋಧರು ರಕ್ಷಣಾ ಕಾಯರ್ಾಚರಣೆಯಲ್ಲಿ ಜೀವತೆತ್ತು ಅಂಗವಿಕಲರಾಗಿದ್ದು, ಅಂತಹ ಕುಟುಂಬಗಳ ರಕ್ಷಣೆಯ ಹೊಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಸಶಸ್ತ್ರ ಧ್ವಜ ದಿನಾಚರಣೆ ಅಂಗವಾಗಿ ಸಾಂಕೇತಿಕ ಹಾಗೂ ವಾಹನ ಧ್ವಜಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ದೇಶದ ಕಾಯರ್ಾಚರಣೆಯಲ್ಲಿ ತಮ್ಮ ಪಾಲಿನ ಸೇವೆ ಸಲ್ಲಿಸಿ ನಿವೃತ್ತರಾಗುವ ಸೈನಿಕರು ಮತ್ತು ಅವರ ಕುಟುಂಬದವರ ಕಲ್ಯಾಣ ಮತ್ತು ಪುನರ್ವಸತಿ ಕಲ್ಪಿಸುವುದು ನಮ್ಮೇಲ್ಲರ ಜವಾಬ್ದಾರಿಯಾಗಿದೆ ಎಂದರು. ಪ್ರತಿ ವರ್ಷದಂತೆ ಈ ವರ್ಷವೂ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಧ್ವಜಾ ದಿನಾಚರಣೆ ಅಂಗವಾಗಿ ಸಾಂಕೇತಿಕ ಹಾಗೂ ವಾಹನ ಧ್ವಜಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ನಿಧಿ ಸಂಗ್ರಹಿಸಲಾಗುತ್ತಿದೆ. ಈ ನಿಧಿಯಿಂದ ಹುತಾತ್ಮ ಯೋಧರ ಕುಟುಂಬಗಳಿಗೆ ಅಂಗವಿಕಲ ಯೋಧರ ಕುಟುಂಬಗಳಿಗೆ ಮತ್ತು ಮಾಜಿ ಯೋಧರಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದ್ದು, ಇಂತಹ ಪವಿತ್ರ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.
ಸೈಜಿಕ ಕಲ್ಯಾಣ ಇಲಾಖೆಯ ಉಪನಿದರ್ೇಶಕ ರಮೇಶ ಜಗಾಪೂರ ಮಾತನಾಡಿ, ಧ್ವಜ ನಿಧಿಗೆ ನೀಡುವ ದೇಣಿಗೆಗಳು ಆದಾಯ ತೆರಿಗೆ ಕಾಯ್ದೆ 1961ರ ಪರಿಚ್ಛೇದನ 80 ಜಿ (5) (6) ರಡಿಯಲ್ಲಿ ತೆರಿಗೆಯಿಂದ ವಿನಾಯಿತಿ ಇದ್ದು, ಸಾಂಕೇತಿಕ ಧ್ವಜ ಒಂದಕ್ಕೆ ಸಾಮಾನ್ಯರಿಂದ ರೂ.10, ವಿದ್ಯಾಥರ್ಿಗಳಿಂದ ರೂ.5 ವಾಹನ ಧ್ವಜ ಒಂದಕ್ಕೆ ದ್ವಿಚಕ್ರ ವಾಹನ ರೂ.20, ಲಘು ಮೋಟಾರ ವಾಹನ ರೂ.50 ಮತ್ತು ಖಾಸಗಿ ಬಸ್ಸು, ಟ್ರಕ್ಗಳಿಗೆ ರೂ.100 ರಂತೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಎಚ್.ಜಯ, ಜಿಲ್ಲಾ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಎಚ್.ಆರ್.ಕುಲಕಣರ್ಿ, ಕರಣಿ, ದಾಂಡಿಯಾ, ಚೌಕಿಮಠ, ಕ್ಯಾಪ್ಟನ ಅಜರ್ುನ ಕೋರಿ ಹಾಗೂ ಸೈನಿಕ ಕಲ್ಯಾಣ ಇಲಾಖೆಯ ರಾಮಪ್ಪ ಹಂಚಿನಮನಿ, ಎಂ.ಎಸ್.ಬಬಲಾದಿಮಠ, ಪಾಂಡುರಂಗ ಬ್ಯಾಳಿ ಉಪಸ್ಥಿತರಿದ್ದರು.