ಜಿನಭಜನಾ ಸ್ಪರ್ಧೆ: ಬೆಳಗಾವಿ ವಿಶಾರದ ನೃತ್ಯ ಶಾಲಾ ತಂಡ ಪ್ರಥಮ
ಬೆಳಗಾವಿ 26: ಇತ್ತಿಚಿಗೆ ಬೆಂಗಳೂರಿನಲ್ಲಿ ನಡೆದ ಧಾರ್ಮಿಕ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಬೆಳಗಾವಿಯ ವಿಶಾರದ ನೃತ್ಯ ಶಾಲಾ ತಂಡದ ಮಕ್ಕಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ದಾಖಲೆ ನಿರ್ಮಿಸಿದ್ದಾರೆ.
ಧರ್ಮಸ್ಥಳದ ಅನಿತಾ ಸುರೇಂದ್ರಕುಮಾರ ಹೆಗಡೆ ಅವರ ನೇತೃತ್ವದಲ್ಲಿ ಕಳೆದ 8 ವರ್ಷಗಳಿಂದ ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ನಡೆದ ಸ್ಫರ್ಧೆಯಲ್ಲಿ ಬೆಳಗಾವಿಯ ವಿಶಾರದ ನೃತ್ಯ ಶಾಲಾ ಮಕ್ಕಳು ಧಾರವಾಡ ವಲಯ ವಿಭಾಗದಿಂದ ಆಯ್ಕೆಯಾಗಿ ಅಂತಿಮ ಸುತ್ತಿನಲ್ಲಿ ಪ್ರವೇಶ ಪಡೆದುಕೊಂಡರು.
ತದ ನಂತರ ಇತ್ತಿಚಿಗೆ ಬೆಂಗಳೂರಿನ ಜ್ಞಾನದೀಪ ಸಭಾಂಗಣದಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ವಿಶಾರದ ನೃತ್ಯ ಶಾಲಾ ತಂಡ ಅತ್ಯುತ್ತಮ ಹಾಡಿಗಾರಿಕೆಯನ್ನು ಪ್ರದರ್ಶಿಸಿ ಗೆಲವು ಸಾಧಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಈ ತಂಡದಲ್ಲಿದ್ದ ಕುಮಾರಿ ಅನರ್ಘ್ಯ, ಕುಮಾರಿ, ಮಧುರಾ ,ಕುಮಾರಿ ಪ್ರಾಚಿ, ಕುಮಾರಿ. ಧೃತಿ ಮತ್ತು ಕುಮಾರಿ ಶ್ರೀಣಿಕಾ ಇವರ ಹಾಡಿದ ಭಜನೆ ಎಲ್ಲ ತಿರ್ುಗಾರರ ಮತ್ತು ಸಭಾಂಗಣದಲ್ಲಿ ನೆರೆದಿದ್ದ ಎಲ್ಲ ಸಭಿಕರ ಮನಗೆದ್ದರು.
ವಿಜೇತ ವಿಶಾರದ ನೃತ್ಯ ಶಾಲಾ ಮಕ್ಕಳಿಗೆ ಜಿನವಾಣಿ ಪ್ರತಿಮೆ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಇವರಿಗೆ ಸಂಗೀತ ಗುರುಗಳಾದ ಅಶೋಕ ಕಟ್ಟಿ ಮತ್ತು ತಬಲಾ ಸಾಥ ಚಂದ್ರಕಾಂತ ನಿರಗುಡು ಇವರು ಸಹಕರಿಸಿದರು.ಇವರಿಗೆ ಪ್ರೇಮಾ ಶಾಂತಿನಾಥ ಉಪಾಧ್ಯೆ ಇವರ ಮಾರ್ಗದರ್ಶನ ಲಭಿಸಿದೆ.