ಜಾರ್ಖಂಡ್ ಚುನಾವಣೆ: 189 ಅಭ್ಯರ್ಥಿಗಳ ಭವಿಷ್ಯ ಇಂದೇ ತೀರ್ಮಾನ

Jharkhand polls

ರಾಂಚಿ, ನ 30- ಜಾರ್ಖಂಡ್ ವಿಧಾನಸಭೆಗೆ ಇಂದಿನಿಂದ  ಮತದಾನ  ಆರಂಭವಾಗಿದೆ. ಈ ಹಂತದಲ್ಲಿ ಆರು ಜಿಲ್ಲೆಗಳ 13 ಕ್ಷೇತ್ರಗಳಿಗೆ  ಮತದಾನ ನಡೆಯಲಿದೆ.  15 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 189 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಇಂದೇ  ತೀರ್ಮಾನವಾಗಲಿದೆ . 

ಒಟ್ಟಾರೆ  ಐದು ಹಂತಗಳಲ್ಲಿ ಚುನಾವಣೆ  ನಡೆಯಲಿದ್ದು, ಮೊದಲ ಹಂತದ ಮತದಾನ ಇಂದು ನಡೆದರೆ, ಡಿ.7ರಂದು 2ನೇ ಹಂತದ ಮತದಾನ, ಡಿ.12ರಂದು 3ನೇ ಹಂತ,  ಡಿ.16ರಂದು 4ನೇ ಹಂತ,   ಡಿ.20ರಂದು 5ನೇ ಹಂತದ  ಮತದಾನ ನಡೆಯಲಿದೆ. ಒಟ್ಟಾರೆ ಜಾರ್ಖಂಡ್ನ 81 ವಿಧಾನಸಭಾ ಕ್ಷೇತ್ರಗಳಿಗೆ ಐದು ಹಂತದಲ್ಲಿ ಚುನಾವಣೆ ನಡೆಯಲಿದ್ದು ,ಡಿಸೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. 

ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ 15 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 189 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು 37 ಲಕ್ಷಕ್ಕೂ ಹೆಚ್ಚು ಮತದಾರರು ನಿರ್ಧರಿಸಲಿದ್ದಾರೆ ಎಂದು ಜಾರ್ಖಂಡ್ ಮುಖ್ಯ ಚುನಾವಣಾ ಅಧಿಕಾರಿ ವಿನಯ್ ಕುಮಾರ್ ಚೌಬೆ ತಿಳಿಸಿದ್ದಾರೆ. 

ಜಾರ್ಖಂಡ್ನಲ್ಲಿ ಕಳದೆ  1ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲಿದೆ. ರಾಜ್ಯ ವಿಧಾನಸಭೆಯ ಐದು ವರ್ಷಗಳ ಅವಧಿ ಜನವರಿ 5, 2020 ಕ್ಕೆ ಮುಗಿಯಲಿದೆ.  ಮತದಾನ ನಡೆಯುವ ಹಿನ್ನಲೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಭದ್ರತೆ  ಹೆಚ್ಚಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಎರಡನೆ  ಬಾರಿಗೆ ಅಧಿಕಾರಕ್ಕೇರಿದ ನಂತರ ನಡೆಯುತ್ತಿರುವ ಮೂರನೇ  ರಾಜ್ಯದ ಚುನಾವಣೆ ಇದಾಗಿದೆ. ಇದು  ಬಿಜೆಪಿಪಾಲಿಗೆ ತುಂಬಾ ಪ್ರತಿಷ್ಠೆಯಾಗಿದೆ.