ಜೇಸಿ ಶಾಲೆಯ ದೇಶೀ ಸಂಸ್ಕೃತಿ ಮಾದರಿ: ಶಿವಲಿಂಗ ಸಿದ್ನಾಳ

Jaycee School's Country Culture Model: Shivlinga Sidna

ಜೇಸಿ ಶಾಲೆಯ ದೇಶೀ ಸಂಸ್ಕೃತಿ ಮಾದರಿ: ಶಿವಲಿಂಗ ಸಿದ್ನಾಳ  

ಮಹಾಲಿಂಗಪುರ 01: ಇಡೀ ಜಗತ್ತು ಜನವರಿ 1ನ್ನು ಮದ್ಯ, ಮಾನಿನಿ, ಡ್ರಗ್ಸ್‌ ಮತ್ತಿನಲ್ಲಿ ಹೊಸ ವರ್ಷವೆಂದು ಹುಮ್ಮಸ್ಸಿನಿಂದ ಆಚರಿಸುತ್ತಿದ್ದರೆ, ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ನವಚೇತನ ಶಿಕ್ಷಣ ಸಂಸ್ಥೆಯ ಜೆಸಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪೌಢ ಶಾಲೆಯಲ್ಲಿ ಜ.1ನ್ನು ರಾಮಕೃಷ್ಣ ಪರಮಹಂಸರು ತಮ್ಮ ಶಿಷ್ಯಂದಿರನ್ನು ಆಶೀರ್ವದಿಸಿದ ಕಲ್ಪತರು ದಿನವನ್ನಾಗಿ ಆಚರಿಸಿದ್ದು ಗಮನಸೆಳೆಯಿತು. 

ಶಿಕ್ಷಕ ಎಸ್‌.ಪಿ.ಸುತಾರ ಅವರ ಮಾರ್ಗದರ್ಶನದಲ್ಲಿ 8ನೇ ತರಗತಿ ವಿದ್ಯಾರ್ಥಿಗಳು ಕಲ್ಪತರು ದಿನಾಚರಣೆಯ ಹಿನ್ನಲೆ ಮತ್ತು ಮಹತ್ವ ಕುರಿತ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದರು. 

1 ರಿಂದ 7ನೇ ವರ್ಗದ ವಿದ್ಯಾರ್ಥಿಗಳು ತಮ್ಮ ತಮ್ಮ ವರ್ಗದ ಕೋಣೆಗಳಲ್ಲಿ ಒಂದೊಂದು ಹಬ್ಬದ ಆಚರಣೆಗಳನ್ನು ಮಾಡಿ ಭಾರತೀಯ ಸನಾತನ ಹಬ್ಬಗಳ ಸಂಸ್ಕೃತಿಯನ್ನು ಜೀವಂತವಾಗಿಟ್ಟು ಇಂದಿನ ಪೀಳಿಗೆಗೆ ಅವುಗಳ ಮಹತ್ವ, ದೈವಿಕ ಮತ್ತು ವೈಜ್ಞಾನಿಕ ಹಿನ್ನಲೆಗಳನ್ನು ಮನದಟ್ಟು ಮಾಡಿ ಪಾಶ್ಚಾತ್ಯರ ಅರ್ಥಹೀನ ಆಚರಣೆಗಳಿಗಿಂತ ನಮ್ಮ ಯುಗಾದಿ, ನಾಗರ ಪಂಚಮಿ, ದೀಪಾವಳಿ, ಸಂಕ್ರಾಂತಿ, ಗಣೇಶ ಚತುರ್ಥಿ, ರಂಜಾನ್ ಹಬ್ಬಗಳು ಶ್ರೇಷ್ಠ ಎಂಬುದನ್ನು ಮನದಟ್ಟು ಮಾಡಲಾಯಿತು. ಆಯಾ ಹಬ್ಬಗಳ ವಿಶೇಷ ಸಿಹಿ ಪದಾರ್ಥಗಳನ್ನು ಹಂಚಿ, ಹಬ್ಬದ ಮಹತ್ವ ವಿವರಿಸಿದರು, 3ನೇ ತರಗತಿಯ ಒಂದೇ ಕೊಠಡಿಯಲ್ಲಿ ಗಣೇಶ ಚತುರ್ಥಿ ಮತ್ತು ರಂಜಾನ್ ಹಬ್ಬವನ್ನು ಆಚರಿಸಿ ಭಾವೈಕ್ಯತೆ ಮೆರೆದದ್ದು ವಿಶೇಷವೆನಿಸಿತು. ಪ್ರೌಢ ಶಾಲಾ ವಿದ್ಯಾರ್ಥಿಗಳು ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಎಂಬ ಸಂದೇಶದೊಂದಿಗೆ ಹಣ್ಣು, ತರಕಾರಿ, ಕಾಳು, ಹಾಲು, ಬೆಲ್ಲ ಮುಂತಾದ ಪದಾರ್ಥಗಳಿಂದ ತಯಾರಿಸಿದ ವಿಶೇಷ ತಿಂಡಿ ತಿನಿಸುಗಳ ಮೇಳ ನಡೆಸಿದರು, ಸವಿ ಸವಿದ ಗಣ್ಯರು, ಪಾಲಕರು ಆಹಾರ ಉತ್ಸವವನ್ನು ಮನದುಂಬಿ ಶ್ಲಾಘಿಸಿದರು. 

ಕಲ್ಪತರು ದಿನಾಚರಣೆ ಪ್ರಯುಕ್ತ ತಾಯಂದಿರಿಗಾಗಿ ರಂಗೋಲಿ, ಮೆಹಂದಿ, ಕ್ರಾಫ್ಟ್‌ವರ್ಕ್‌ ಸ್ಪರ್ಧೆಗಳನ್ನು ಏರಿ​‍್ಡಸಲಾಗಿತ್ತು. 

ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ ಪಟೇಲ ಅಧ್ಯಕ್ಷತೆ ವಹಿಸಿ, ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಕಾರ್ಯದರ್ಶಿ ಗುರುರಾಜ ಅಂಬಿ, ನಿರ್ದೇಶಕರಾದ  ಈಶ್ವರ ಮುರಗೋಡ, ರಮೇಶ ಮುಳವಾಡ, ರಾಜು ಘಟ್ಟೆಪ್ಪನವರ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಕಾರ್ಯದರ್ಶಿ ಹನಮಂತ ನಾವಿ,  ಜಿಲ್ಲಾ ಕಾನಿಪ ಸದಸ್ಯ ಎಸ್‌.ಎಸ್‌.ಈಶ್ವರ​‍್ಪಗೋಳ, ಪತ್ರಕರ್ತರಾದ ಶಿವಲಿಂಗ ಸಿದ್ನಾಳ, ನಾರನಗೌಡ ಉತ್ತಂಗಿ, ಯೂನೂಸ್ ಪಠಾಣ, ರಾಜೇಂದ್ರ ನಾವಿ, ಮುಖ್ಯೋಪಾಧ್ಯಾಯ ಎಸ್‌.ಜಿ.ಕೌಜಲಗಿ ಇತರರಿದ್ದರು. 

ಬಾಕ್ಸ್‌ : ಆಂಗ್ಲ ಮಾಧ್ಯಮ ಶಾಲೆಯಾದರೂ ಜೇಸಿ ಶಾಲೆಯ ದೇಶೀ ಸಂಸ್ಕೃತಿ ಮಾದರಿ, ಜ್ಞಾನಕ್ಕಾಗಿ ಆಂಗ್ಲ ಮಾಧ್ಯಮ ಶಿಕ್ಷಣ ಕೊಡುತ್ತಾ ಮಕ್ಕಳಲ್ಲಿ ಭಾರತೀಯ ಸನಾತನ ಸಂಸ್ಕೃತಿಯನ್ನು ಬೆಳೆಸುತ್ತಿರುವ ಏಕೈಕ ಶಾಲೆಯಾಗಿದೆ : ಪ್ರೊ. ಶಿವಲಿಂಗ ಸಿದ್ನಾಳ, ಪತ್ರಕರ್ತರು, ಮಹಾಲಿಂಗಪುರ.