ಡಾ.ಶಿವಬಸವ ಮಹಾಸ್ವಾಮಿಗಳವರ ಜಯಂತಿ: ಸ್ವರ ನಮನ

ಬೆಳಗಾವಿ 08: ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿ ಕಾರ್ಯಕ್ರಮದ ಅಂಗವಾಗಿ ಇಂದು ಸ್ವರ ನಮನ ಕಾರ್ಯಕ್ರಮ ನಡೆಯಿತು. 

ಅಕ್ಕನ ಬಳಗ ಹನುಮನ ಬೀದಿ, ಬೆಳಗಾವಿ, ಪ್ರಭುದೇವ ಪ್ರತಿಷ್ಠಾನ-ಮಾತೃಮಂಡಳಿ, ಬೆಳಗಾವಿ, ಪಂ. ಸೋಮಶೇಖರ ಮರಡಿಮಠ, ಸಂಗೀತ ವಿದೂಷಿ ರೋಹಿಣಿ ಗಂಗಾಧರಯ್ಯ, ಬೆಳಗಾವಿ, ಸುನೀತ ಪಾಟೀಲ, ಬೆಳಗಾವಿ, ನಯನಾ ಗಿರಿಗೌಡರ, ಬೆಳಗಾವಿ, ಪ್ರಭುದೇವ ಪ್ರತಿಷ್ಠಾನದ ಮಾತೃಮಂಡಳಿ ಸದಸ್ಯರಿಂದ ಮತ್ತು ಇನ್ನೂ ಹಲವಾರು ಗಾಯಕರಿಂದ ಸ್ವರ ನಮನ ಕಾರ್ಯಕ್ರಮ ಜರುಗಿತು.

ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಜಗದ್ಗುರು ಎಡೆಯೂರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ನಾಗನೂರು ರುದ್ರಾಕ್ಷಿಮಠ, ಬೆಳಗಾವಿ, ಶಿವಾನಂದ ಮಹಾಸ್ವಾಮಿಗಳು, ಸಿದ್ಧೇಶ್ವರಮಠ, ಹಂದಿಗುಂದ-ಆಡಿ, ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಶಾಂತಲಿಂಗ ಮಹಾಸ್ವಾಮಿಗಳು, ಅಥಣಿ ಮೋಟಗಿಮಠದ ಚನ್ನಬಸವ ಸ್ವಾಮಿಜಿ, ಅಥಣಿಯ ಶಿವಬಸವ ಸ್ವಾಮಿಗಳು, ಅರಭಾವಿಮಠದ ಶ್ರೀಗಳು, ಕಿತ್ತೂರಿನ ಮಡಿವಾಳೇಶ್ವರ ಸ್ವಾಮಿಜಿಯವರು, ಕಡೋಲಿಯ ಬಸವಲಿಂಗ ಸ್ವಾಮಿಜಿಯವರು, ಹುಕ್ಕೇರಿಯ ಶಿವಬಸವ ಸ್ವಾಮಿಗಳು, ಬಾಗೆವಾಡಿಯ ಸಿದ್ದಲಿಂಗ ಶ್ರೀಗಳು, ರಬಕವಿಯ ರೇವಣಸಿದ್ಧ ಸ್ವಾಮಿಜಿ, ಮತ್ತಿತರ ಕಿರಿಯ ಸ್ವಾಮಿಜಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುನಂದಾ ಎಮ್ಮಿ ವಿರಚಿತ ನೀಲಗಂಗಾ ಸಾಹಿತ್ಯ ಚಿಂತನದ ಗ್ರಂಥ  "ಪರಿಮಳದ ಹೂ ತೇರು" ಲೋಕಾರ್ಪಣೆಗೊಂಡಿತು.

ಮಹಾಂತದೇವರು ಮತ್ತು ಸಿ.ಜೆ ಮಠಪತಿ ಅವರು ನಿರ್ವಹಿಸಿದರು. ಕನರ್ಾಟಕ ನೀರಾವರಿ ನಿಗಮದ (ಧಾರವಾಡ) ಆಡಳಿತಾಧಿಕಾರಿ ಎಸ್.ಎಸ್.ಬಗಲಿ, ನಗರಸೇವಕಿ ಸರಳಾ ಹೇರೆಕರ, ಬಸವರಾಜ ಜಗಜಂಪಿ, ಮಾತೋಶ್ರೀಯರಾದ ವಾಗ್ದೇವಿತಾಯಿ ಮತ್ತು ಕುಮುದಿನಿತಾಯಿ ಅವರುಗಳು ಉಪಸ್ಥಿತರಿದ್ದರು.