ಲೋಕದರ್ಶನ ವರದಿ
ಗಂಗಾವತಿ 30: ಸಮಾಜದಲ್ಲಿನ ಸಮಸ್ಯೆಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದರ ಜತೆಗೆ ಸಮಾಜದಲ್ಲಿನ ಉಪ್ಪಾರ ಜನತೆಯಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಆಚರಿಸುವ ಶ್ರೀ ಭಗೀರಥ ರಾಜಋಷಿಯ ಜಯಂತ್ಯೋತ್ಸವವು ಅತ್ಯಂತ ಸಹಕಾರಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಉಪ್ಪಾರ ಯುವ ಘಟಕದ ಅಧ್ಯಕ್ಷ ಯಂಕಪ್ಪ ಕಟ್ಟಿಮನಿ ಹೇಳಿದರು.
ಅವರು ಹಿರೇಜಂತಕಲ್ ಪ್ರಸನ್ನ ಪಂಪಾಪತಿ ದೇವಸ್ಥಾನದಲ್ಲಿ ಜರುಗಿದ ಭಗೀರಥ ಜಯಂತ್ಯೋತ್ಸವದ ವೇದಿಕೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು, ಸಮಾಜದಲ್ಲಿನ ಜನತೆ ಶಿಕ್ಷಣ ಪಡೆಯಬೇಕು ಶಿಕ್ಷಣದ ಜತೆಗೆ ಸಾಮಾಜಿಕ, ಆಥರ್ಿಕ, ರಾಜಕೀಯ ಮತ್ತು ಧಾಮರ್ಿಕ ಪ್ರಜ್ಞೆಯನ್ನು ಜನತೆಯಲ್ಲಿ ಬೆಳೆಸುವುದರ ಜತೆಗೆ, ಉದ್ಯೋಗಕ್ಕಾಗಿ ಸರಕಾರದತ್ತ ಮುಖ ಮಾಡದೆ ಸ್ವಯಂ ಉದ್ಯೋಗಕ್ಕೆ ಅಗತ್ಯ ಮಾರ್ಗದರ್ಶನ ನೀಡಿ ಯುವ ಸಮುದಾಯವನ್ನು ಸಬಲರನ್ನಾಗಿ ಮಾಡಬೇಕು ಆಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದರು.
ಉಪ್ಪಾರ ಸಮಾಜ ಇತರೆ ಸಮಾಜ ಬಾಂಧವರೊಂದಿಗೆ ತುಂಬಾ ಉತ್ತಮ ಬಾಂಧವ್ಯ ಹೊಂದಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಆದರೆ, ರಾಜಕೀಯವಾಗಿ ಸೂಕ್ತ ಸ್ಥಾನಮಾನಗಳು ಸಿಗುತ್ತಿಲ್ಲ, ರಾಜಕೀಯವಾಗಿ ನಾವು ಮುಂದೆ ಬರಬೇಕಾದರೆ ಪರಸ್ಪರ ಸಹಕಾರದಿಂದ ಮುಂದಡಿ ಇಡಬೇಕು ಆಗ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ತಾಲೂಕಾ ಉಪ್ಪಾರ ಸಮಾಜದ ಅಧ್ಯಕ್ಷ ಮುದ್ದಪ್ಪ ಆರ್ಹಾಳ್ ಮಾತನಾಡಿ, ಜಂತಕಲ್ ಭಾಗದಲ್ಲಿ ಅತ್ಯಂತ ವಿಜೃಂಭಣೆಯ ಜಯಂತಿ ಆಚರಿಸಿದ್ದು ಉತ್ತಮ ಬೆಳವಣಿಗೆ ಸಮಾಜ ಸಂಘಟನೆಗೆ ಜಯಂತಿ ಪೂರಕವಾಗಿದ್ದು, ಪ್ರತಿ ವರ್ಷ ನಮ್ಮ ಪ್ರಗತಿಯ ಹಿನ್ನೋಟವಾದಾಗ ಮಾತ್ರ ನಾವು ಇಡಬೇಕಾದ ಹೆಜ್ಜೆ ಗುರುತು ಅಂದಾಜಿಸಲು ಸಾಧ್ಯವಾಗುತ್ತದೆ ಹಣಗಳಿಕೆಗಿಂತ ಮಕ್ಕಳಲ್ಲಿ ಶಿಕ್ಷಣದ ಜತೆಗೆ ಬೌದ್ಧಿಕ ಗುಣ ಹೆಚ್ಚಳಕ್ಕೆ ಆದ್ಯತೆ ನೀಡಬೇಕು ಮಕ್ಕಳನ್ನು ಆಸ್ತಿಯನ್ನಾಗಿ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕಾ ನೌಕರರ ಸಂಘದ ಅಧ್ಯಕ್ಷ ದೇವಪ್ಪ ಮಾಸ್ತಾರ್ ಮಾತನಾಡಿ ಶಿಸ್ತು ಮತ್ತು ಸಮಯ ಪ್ರಜ್ಞೆ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ನಾಂದಿಯಾಗುತ್ತದೆ, ಸಮಾಜದಲ್ಲಿ ಯುವ ಸಮುದಾಯ ಸಮಯದ ಮಹತ್ವ ತಿಳಿದುಕೊಳ್ಳುವುದರೊಂದಿಗೆ ಇತರರು ನಮ್ಮಡೆಗೆ ತಿರುಗಿ ನೋಡುವಂತೆ ಆದರ್ಶದ ಬದುಕು ಕಟ್ಟಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಶಿಕ್ಷಕ ರಾಮನಗೌಡ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಎಸ್ಎಸ್ಎಲ್ಸ್ಸಿ ಹಾಗು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳು ಸೇರಿದಂತೆ ಸಮಾಜಕ್ಕಾಗಿ ದುಡಿದ ಹಿರಿಯರು ಮತ್ತು ಯುವ ಸಮುದಾಯವನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗಂಗಾವತಿ ಉಪ್ಪಾರ ಸಮಾಜದ ತಾಲೂಕಾ ಪ್ರಧಾನ ಕಾರ್ಯದಶರ್ಿ ವೆಂಕಟೇಶ್ ಮಾನಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ದಾನಪ್ಪ ದರೋಜಿ, ನಗರಸಭೆ ಸದಸ್ಯ ನೀಲಕಂಠ ಕಟ್ಟಿಮನಿ, ಮಾಜಿ ಸದಸ್ಯ ರಾಘವೇಂದ್ರ ಮಾನಳ್ಳಿ, ಮುಖಂಡರಾದ ಚಂದ್ರಪ್ಪ ಕಲ್ಗುಡಿ, ವಿ.ಸತ್ಯನಾರಾಯಣ, ಯಂಕಣ್ಣ, ಆನಂದ ಮಾನಳ್ಳಿ, ರಾಮಣ್ಣ ಕುರಿತಲೆ, ಯಲ್ಲಪ್ಪ ಕಟ್ಟಿಮನಿ, ಯಂಕೋಬಣ್ಣಾ, ಹೊಸಮನಿ ರಾಮಣ್ಣ, ಕೆ.ಮಂಜುನಾಥ್, ಭೀಮೇಶ್ ಉಪ್ಪಾರ್, ಬಿಜೆಪಿ ಮುಖಂಡ ನಾರಾಯಣಪ್ಪ, ನಾಗರಾಜ್ ಇಂಗಳಗಿ, ಕುಪ್ಪಣ್ಣ ಮಿಣಜಿಗಿ, ಮುಕ್ಕಣ್ಣ ಮಾನಳ್ಳಿ, ದರೋಜಿ ವಿರುಪಣ್ಣ, ಮರಳಿ ಭೀಮೆಶ್, ಮಂಜುನಾಥ ಹೊಸಮನಿ, ವೆಂಕಟಾಪುರ ಸುರೇಶ್ ಮತ್ತಿತರರಿದ್ದರು.
ಇದಕ್ಕೂ ಮುನ್ನಾ ಹಿರೇಜಂತಕಲ್ನ ಪ್ರಮುಖ ಬೀದಿಗಳಲ್ಲಿ 101 ಕುಂಬ ಕಳಸ ಮೆರವಣಿಗೆಯು ತಾಶಾ ವಾದ್ಯ ಮೇಳದೊಂದಿಗೆ ಅದ್ಧೂರಿಯಾಗಿ ಜರುಗಿತು. ಹೂಗಳಿಂದಲಂಕೃತ ಸಾರೋಟದಲ್ಲಿ ಶ್ರೀ ಭಗೀರಥ ರಾಜಋಷಿಯ ಭಾವಚಿತ್ರದ ಮೆರವಣಿಗೆಯು ಜನಾಕರ್ಷಣೆಯ ಕೇಂದ್ರವಾಗಿತ್ತು.