ಸರ್ವಜ್ಞ ವಿದ್ಯಾಪೀಠದಲ್ಲಿ ಕಾಯಕ ಶರಣರ ಜಯಂತಿ ಆಚರಣೆ
ತಾಳಿಕೋಟೆ, 10; ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಾಯಕ ಶರಣರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಅವರು ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯರಾದ ಸಂತೋಷ ಪವಾರ ಶಿಕ್ಷಕರಾದ ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ,ಶಾಂತಗೌಡ ಬಿರಾದಾರ,ಭೀಮನಗೌಡ ಸಾಸನೂರ,ರಸೂಲಸಾ ತುರ್ಕನಗೇರಿ, ರವಿಕುಮಾರ ಮಲ್ಲಾಬಾದಿ,ಬಸವರಾಜ ಸವದತ್ತಿ ,ಮೌಲಾಲಿ ವಾಲಿಕಾರ, ಸಿದ್ದನಗೌಡ ಮೂದನೂರು, ಶರಣಗೌಡ ಕಾಚಾಪುರ,ರಮೇಶ ಪಾಸೋಡಿ, ರೂಪಾ ಪಾಟೀಲ, ಶಿವಲೀಲಾ ಚುಂಚನೂರ,ದೇವಿಂದ್ರ ಗುಳೆದ,ಅನಿತಾ ಚೌದ್ರಿ, ಅಂಬುಜಾ ಹಜೇರಿ, ಶಿವಕುಮಾರ ಕುಂಬಾರ, ರಾಜಬಿ ಬಿದರಿ,ಕಲ್ಪನಾ ಹಜೇರಿ, ನಾಗರತ್ನ ಮೈಲೇಶ್ವರ, ಹೇಮಾ ಕೊಡೆಕಲ್, ನಾಗಶ್ರೀ ನಾಯಕ, ಮೇಘಾ ಪಾಟೀಲ, ಮುಬಿನ ಮುರಾಳ, ತನುಶ್ರೀ ಮಹೇಂದ್ರಕರ, ಶಂಕ್ರಮ್ಮ, ಮುಬಾರಕ ಬನಹಟ್ಟಿ ಹಾಗೂ ಸರ್ವ ಗುರು ಬಳಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.