ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಣೆ
ಹುಬ್ಬಳ್ಳಿ 15: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿ, ಹುಬ್ಬಳ್ಳಿಯಲ್ಲಿ, ಜರುಗಿದ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಅಂಗವಾಗಿ ಸಂಸ್ಥೆಯ ಉಪಾಧ್ಯಕ್ಷರಾದ ಪೀರಸಾಬ್ ಅ.ಕೌತಾಳ ರವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾನ್ಯ ಅಧ್ಯಕರ ಆಪ್ತ ಕಾರ್ಯದರ್ಶಿಯಾದ ಪಿ.ಆರ್.ಕಿರಣಗಿ ರವರು ಮಾತನಾಡಿ, ಶ್ರೀ ಸಂತ ಸೇವಾಲಾಲ್ ಮಹಾರಾಜರ ಜೀವನ ಮತ್ತು ಸಾಧನೆಗಳ ಕುರಿತು ತಿಳಿಸಿ, ಸಂತ ಸೇವಾಲಾಲರು ಮನುಷ್ಯ ಮನುಷ್ಯನಾಗಿ ಎಲ್ಲರೊಂದಿಗೆ ಸಹಬಾಳ್ವೆಯಿಂದ ಬದುಕಬೇಕು ಎಂದು ತಿಳಿಸುತ್ತಾ, ಇಡೀ ಮಾನವ ಜನಾಂಗಕ್ಕೆ ವಿಶಿಷ್ಟವಾದ ಸಂದೇಶಗಳನ್ನು ನೀಡುವುದರ ಮೂಲಕ ನಮಗೆಲ್ಲ ದಾರೀದೀಪವಾಗಿದ್ದಾರೆ. ಇಂದು ನಾವೆಲ್ಲರು ಅವರ ಸಂದೇಶಗಳನ್ನು ಪಾಲಿಸುವುದು ಅವಶ್ಯವಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಕಛೇರಿಯ ಇಲಾಖಾ ಮುಖ್ಯಸ್ಥರಾದ ಶ್ರೀನಾಥ.ಜಿ ಹಾಗೂ ಅಧಿಕಾರಿಗಳಾದ ಆರ್.ಎಲ್.ಭಜಂತ್ರಿ, ಪಿ.ಆರ್.ಕಿರಣಗಿ, ಹನುಮೆಗೌಡ.ಜಿ, ತೈಸಿನ್ಭಾನು ಪಟವೇಗಾರ, ಎ.ಒ.ಒಡೆಯರ್.ರವರು ಮತ್ತು ಕೇಂದ್ರ ಕಛೇರಿಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿರೂಪಾಕ್ಷ ಕಟ್ಟಿಮನಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.