ಭೂತ್ರಾಮನಹಟ್ಟಿ ಶಾಲೆಗೆ ಜಯಕುಮಾರ ಅನೀರಿಕ್ಷಿತ ಭೇಟಿ

ಲೋಕದರ್ಶನ ವರದಿ

ಬೆಳಗಾವಿ 20:  ದಿ. 19ರಂದು ಬೆಳಗಾವಿ ತಾಲೂಕಿನ ಹೊಸವಂಟಮುರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸರಕಾರಿ ಮಾದರಿ ಹಿರಿಯ  ಪ್ರಾಥಮಿಕ ಶಾಲೆ ಭೂತ್ರಾಮನಹಟ್ಟಿಯಲ್ಲಿ ಜಯಕುಮಾರ ಎಸ್ ನಿದರ್ೇಶಕರು ಪ್ರಾಥಮಿಕ ಶಿಕ್ಷಣ ಅವರು ಅನೀರಿಕ್ಷಿತ ಭೇಟಿಯನ್ನು ನೀಡಿದರು. ಈ ಸಂದರ್ಭದಲ್ಲಿ ವಿಶೇಷ ಚಟುವಟಿಕೆಗಳಿಗೆ ಹೆಸರುವಾಸಿಯಾದ ಭೂತ್ರಾಮನಹಟ್ಟಿ ಶಾಲೆಯ ಮುದ್ದು ಮಕ್ಕಳು ಶಿಕ್ಷಕವೃಂದ ಹಾಗೂ ಪ್ರಧಾನ ಗುರುಮಾತೆಯರು ಹಾಜರಿದ್ದು ಭಾರತದಲ್ಲಿರುವ ವಿಶ್ವ ಪರಂಪರೆ ತಾಣಗಳ ಕುರಿತು ಹಾಗೂ ಭಾರತದ ಎಲ್ಲಾ ರಾಜ್ಯಗಳಲ್ಲಿ ಪ್ರಸಿದ್ದ ಸ್ಥಳಗಳು ನದಿಗಳು ಮುಂತಾದವುಗಳ ಕುರಿತು ಶಾಲೆಯಲ್ಲಿರುವ ಕಾಮನಬಿಲ್ಲು ಸಾಂಸ್ಕೃತಿಕ ಸಂಘದ ಸದಸ್ಯ ವಿದ್ಯಾಥರ್ಿಗಳು ಅತ್ಯುಪಯುಕ್ತ ವಿವರಣೆಯನ್ನು ನೀಡಿದರು. 

ನಿದರ್ೇಶಕರಾದ ಜಯಕುಮಾರ ಎಸ್ ಅವರು ಶಾಲೆಯ ಪ್ರಾರ್ಥನೆಯಲ್ಲಿ ಪಾಲ್ಗೋಂಡು ಮಕ್ಕಳ ಚಟುವಟಿಕೆಗಳನ್ನು ಆಲಿಸಿ ಮಕ್ಕಳೊಂದಿಗೆ ಮಕ್ಕಳಾಗಿ ಹಲವು ಉಪಯುಕ್ತ ಸಲಹೆಗಳನ್ನು ನೀಡಿ ಮಕ್ಕಳನ್ನು ಹುರುದುಂಬಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಹಲವು ಚಿಕ್ಕ ಚಿಕ್ಕ ಪ್ರಶ್ನೆಗಳನ್ನು ಕೇಳಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳವ ಸಲುವಾಗಿ ನಿವೆಲ್ಲಾ ದಿನಲೂ ಕಠಿಣ ಪರಿಶ್ರಮದೊಂದಿಗೆ ಅಭ್ಯಾಸವನ್ನು ರೂಪಿಸಕೊಳ್ಳಬೇಕು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಢಯಟನ ಹಿರಿಯ ಉಪನ್ಯಾಸಕರಾದ ಬಳಿಗಾರ ಅವರು ಜೊತೆಗಿದ್ದು ಶಾಲೆಯ ವಾತಾವರಣ ಕಂಡು ಹರ್ಷವ್ಯಕ್ತಪಡಿಸಿದರು.

ಶಾಲೆಯ ವಿದ್ಯಾಥರ್ಿಗಳ ಶಿಸ್ತು ಸಮಯ ಪಾಲನೆ ಉತ್ಸಾಹ ಕಂಡು ಶಾಲೆಯ ಪ್ರಧಾನ ಗುರುಮಾತೆಯರಾದ ಬಿ ಎಸ್ ಕುಡುಬಾಳೆಯವರು ಹಾಗೂ ಉಪಸ್ಥಿತರಿದ್ದ ಉತ್ಸಾಹಿ ಶಿಕ್ಷರಾದ ಬಿ ಎಸ್ ಸುಂಗಾರಿ, ಎಸ್ ಎಸ್ ಯಡವಿನಾಯ್ಕರ, ಆರ್ ಎಸ್ ಲಂಬುಗೋಳ, ಆರ್ ಘಸ್ತಿ, ಪಿ ವಾಯ್ ಪೀರಣ್ಣವರು ಹಾಗೂ ಶಿಕ್ಷಕರಾದ ಜೇ ಆರ್ ಶೇಟ ಅತಿಥಿ ಶಿಕ್ಷಕರಾದ ಮಾಲಾ ನಂದನವಾಡ ಸವಿತಾ ಪಿಂಗರವರು ಅಭಿನಂದಿಸಿದರು.

ಈ ಸಂಧರ್ಭದಲ್ಲಿ ಶಾಲೆಯ ಆವರಣದಲ್ಲಿ ರಂಗೋಲಿಯಲ್ಲಿ ಮಕ್ಕಳಿಂದ ಬಿಡಿಸಿರುವ ಭಾರತದ ನಕ್ಷೆ ಎಲ್ಲರನ್ನು ಆಕಷರ್ಿಸುವಂತಿತ್ತು. ಶಿವಕುಮಾರ ಹಲ್ಯಾಳಿ ಅಭಿವೃದ್ಧಿ ಅಧಿಕಾರಿಗಳು ಸುಗ್ರಾಮ ಯೋಜನೆ ಬೆಳಗಾವಿ ಅವರು ಹಾಜರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.