ಜತ್ತ ಶಾಸಕ ಗೋಪಿಚಂದ ಪಡಳಕರರಿಗೆ ಶೀಘ್ರದಲ್ಲಿ ಸತ್ಕಾರ: ಭರತ ಮಾನೆ
ಸಂಬರಗಿ 05: ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜತ್ತ ವಿಧಾನ ಸಭಾ ಕ್ಷೇತ್ರದ ಹಾಲು ಮತ ಸಮಾಜದ ಶಾಸಕ ಗೋಪಿಚಂದ ಪಡಳಕರ ಇವರನ್ನು ಶೀಘ್ರದಲ್ಲಿ ಸದ್ಗುರು ಕೊಂಡಿಬಾ ಮಹಾರಾಜ ಮಠದಲ್ಲಿ ಸತ್ಕಾರ ಕಾರ್ಯಕ್ರಮ ಏರಿ್ಡಸಲಾಗುವುದು ಎಂದು ಗಡಿ ಭಾಗದ ಹೋರಾಟಗಾರರು ಹಾಲು ಮತ ಸಮಾಜದ ಮುಖಂಡ ಭರತ ಮಾನೆ ಹೇಳಿದರು.
ಶಿರೂರ ಗ್ರಾಮದಲ್ಲಿ ಸದ್ಗುರು ಕೊಂಡಿಬಾ ಮಹಾರಾಜ ಮಠದಲ್ಲಿ ಮಠದ ಸಪ್ತಾಹ ನಿಮಿತ್ಯವಾಗಿ ಸದ್ಗುರು ಕೊಂಡಿಬಾ ಮಹಾರಾಜ ಇವರನ್ನು ಸತ್ಕರಿಸಿ ಮಾತನಾಡಿ ಗೋಪಿಚಂದ ಪಡಳಕರ ಇವರು ಮಹಾರಾಷ್ಟ್ರದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರು ಕೆಲಸ ಮಾಡಿ ಬಿಜೆಪಿ ಪಕ್ಷದಿಂದ ಜತ್ತ ವಿಧಾನ ಸಭಾ ಕ್ಷೇತ್ರದಲ್ಲಿ ಭಾರಿ ಅಂತರದಿಂದ ಆಯ್ಕೆಯಾಗಿದ್ದಾರೆ. ಗಡಿ ಭಾಗದ ಹಲವಾರು ಸಮಸ್ಯಗಳು ಬಗೆಹರಿಸಲು ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ ಅವರಿಗೆ ಮನವಿ ಸಲ್ಲಿಸಲಾಗುವುದು.
ದಿವ್ಯ ಸಾನಿಧ್ಯ ವಹಿಸಿ ಕೊಂಡಿಬಾ ಮಹಾರಾಜ ಮಾತನಾಡಿದರು. ಮಾಯನಟ್ಟಿ ಗ್ರಾಮದ ಮುಖಂಡರು ಸದಾಶಿವ ನಾಯಿಕ, ಅಸ್ಲಂ ನಾಲಬಂದ ಸಂಬರಗಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಅಶೋಕ ಮಾನೆ, ಅಣ್ಣಾಸಾಬ ಮಾನೆ, ರಮೇಶ ಕಾಂಬಳೆ, ಶಿವಪುತ್ರ ಬೆವನೂರ ಸೇರಿದ ಗಣ್ಯರು ಉಪಸ್ಥಿತರಿದ್ದರು.