ಕಾಗವಾಡ 03: ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಕಳೆದ ಕೆಲ ವರ್ಷಗಳಿಂದ ಶಿಥಿಲಗೊಂಡ ಕುಡಿಯುವ ನೀರಿನ ಟ್ಯಾಂಕ್ ನೆಲಸಮ ಮಾಡುವುದು, ಅನಧಿಕೃತವಾಗಿ ಪ್ರಾರಂಭಗೊಂಡ ಶಾಲೆ ತನಿಖೆ ಮಾಡುವುದು, ಪ್ರಧಾನಮಂತ್ರಿ ಕಿಸಾನ ಸನ್ಮಾನ ಯೋಜನೆಗಳು ಸೇರಿ ಬೇರೆ ಬೇರೆ 50 ಅಭಿವೃದ್ಧಿ ಯೋಜನೆಗಳ ಬಗ್ಗೆ ಜನಸ್ಪಂದನಾ ಸಭೆಯಲ್ಲಿ ತಹಸೀಲ್ದಾರ ಪರಿಮಳಾ ದೇಶಪಾಂಡೆ ಇವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಸಭೆ ಜರುಗಿತು.
ಶನಿವಾರ ದಿ. 2ರಂದು ಜುಗೂಳ ಗ್ರಾಮದ ಮಲ್ಲಿಕಾಜರ್ುನ ದೇವಸ್ಥಾನದಲ್ಲಿ ಜುಗೂಳ, ಶಹಾಪುರ, ಮಂಗಾವತಿ ಗ್ರಾಮಗಳ ಒಳಗೊಂಡ ಜನಸ್ಪಂದನಾ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡು, ಇಲಾಖೆಯ ಮಾಹಿತಿ ಜನರಿಗೆ ನೀಡಿದರು.
ಶಿಕ್ಷಣ ಸಂಯೋಜಕ ಎಸ್.ಬಿ.ಪಾಟೀಲ ಇವರಿಗೆ ಸ್ಥಳೀಯರು ಕಳೆದ ಅನೇಕ ವರ್ಷಗಳಿಂದ ಗ್ರಾಮದಲ್ಲಿ ಅನಧಿಕೃತವಾಗಿ ಶಿಕ್ಷಣ ಸಂಸ್ಥೆ ಪ್ರಾರಂಭಗೊಂಡಿದೆ. ಅಲ್ಲಿ ಮಕ್ಕಳಿಗೆ ನೀಡುವ ಯಾವುದೇ ದಾಖಲೆ ವ್ಯವಸ್ಥೆಯಿಲ್ಲಾ. ಈ ಶಾಲೆಯ ಸಂಚಾಲಕರ ಮೇಲೆ ಕ್ರಮ ಜರುಗಿಸಿರಿ ಎಂದು ಕೇಳಿಕೊಂಡರು. ಅಲ್ಲದೇ ಸಕರ್ಾರಿ ಶಾಲೆಯ ವಿದ್ಯಾಥರ್ಿಗಳಿಗೆ ಕುಡಿಯುವ ನೀರಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದರು.
ಆರೋಗ್ಯ ಇಲಾಖೆ ವತಿಯಿಂದ ಶಿರಗುಪ್ಪಿಯ ವೈದ್ಯಕೀಯ ಅಧಿಕಾರಿ ಶೈಲಾ ಸನ್ನಕ್ಕಿ ಇವರಿಗೆ ಪ್ರಶ್ನಿಸಿ, ಕೇಂದ್ರದಲ್ಲಿ ತಪಾಸಣೆಗೆ ಬರುವ ರೋಗಿಗಳಿಗೆ 100 ರೂ. ತೆಗೆದುಕೊಳ್ಳುತ್ತಿದ್ದ ಬಗ್ಗೆ ಪ್ರಶ್ನಿಸಿದರು. ಇದೇ ರೀತಿ ಜುಗೂಳದ ಉಪಕೇಂದ್ರದ ಕಟ್ಟಡ ಶಿಥಿಲಗೊಂಡಿದ್ದು, ಯಾವುದೇ ಸಿಬ್ಬಂದಿ ಇಲ್ಲದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಶೀಘ್ರದಲ್ಲಿ ಕ್ರಮ ಜರುಗಿಸಲು ತಹಸೀಲ್ದಾರರು ಆದೇಶಿಸಿದರು.
ಉಚಿತ ಬೃಹತ್ ಆರೋಗ್ಯ ಮೇಳ:
ಚಿಕ್ಕೋಡಿ ಆರ್.ಡಿ ಹೈಸ್ಕೂಲಿನಲ್ಲಿ ರಾಜ್ಯ ವೈದ್ಯಕೀಯ ಇಲಾಖೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಂಡಿದ್ದು, ತಜ್ಞ ವೈದ್ಯರು ಪಾಲ್ಗೊಳ್ಳಿದ್ದಾರೆ ಎಂದು ಹೇಳಿದರು.
ಶಿಥಿಲಗೊಂಡ ಕುಡಿಯುವ ನೀರಿನ ಟ್ಯಾಂಕ್:
ಜುಗೂಳ ಗ್ರಾಮಕ್ಕಾಗಿ ಕಳೇದ ಅನೇಕ ವರ್ಷಗಳ ಹಿಂದೆ ಕುಡಿಯುವ ನೀರಿನ ಟ್ಯಾಂಕ್ ನಿಮರ್ಿಸಿದ್ದಾರೆ. ಆದರೆ ಅದು ಶಿಥಿಲಗೊಂಡಿದೆ. ಪಕ್ಕದಲ್ಲಿ ಸಕರ್ಾರಿ ಶಾಲೆಯಿದ್ದು, ಜೀವಿತ ಹಾನಿಯಾಗುವ ಸಾಧ್ಯತೆಯಿದೆೆ. ಕೂಡಲೆ ನೆಲಸಮ ಮಾಡಬೇಕೆಂದು ಗ್ರಾಪಂ ಅಧ್ಯಕ್ಷ ಸಂಜಯ ಮಿಣಚೆ ಹೇಳಿದರು. ಅದಕ್ಕೆ ಅಧಿಕಾರಿಗಳು ಸ್ಪಂದಿಸಿದರು.
ಇದೇ ರೀತಿ ಪಶು ಇಲಾಖೆ ವತಿಯಿಂದ ಎ.ಎಸ್.ವಡೆಯರ, ಕೃಷಿ ಇಲಾಖೆಯ ವಿ.ಕೆ.ಕಾಂಬಳೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆರ್.ಎಲ್.ಕಮತೆ, ಕಂದಾಯ ಇಲಾಖೆ ವತಿಯಿಂದ ಕಂದಾಯ ನೀರಿಕ್ಷಕ ಬಸವರಾಜ ಬೋರಗಲ, ಉಪತಹಸೀಲ್ದಾರ ವಿಜಯ ಚೌಗುಲೆ, ಗ್ರಾಮಲೆಕ್ಕಾಧಿಕಾರಿ ಎಸ್.ಎನ್.ಜೋರೆ ಇವರು ಜನರ ಪ್ರಶ್ನೆಗೆ ಉತ್ತರಿಸಿದರು.
ಜನಸ್ಪಂದನಾ ಸಭೆಯಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷ ಮಲಗೌಡಾ ಪಾಟೀಲ, ಸುರೇಶ ಪಾಟೀಲ, ಅರುಣ ಗಣೇಶವಾಡಿ, ಪ್ರಭಾಕರ ಪಾಟೀಲ, ರಾಜಗೌಡಾ ಪಾಟೀಲ, ಉದಯ ದೇಸಾಯಿ, ಪ್ರವೀಣ ದೇಸಾಯಿ, ಮಹೇಶ ಪಾಟೀಲ, ಚಿದಾನಂದ ಪಾಟೀಲ ಇತರರು ಚಚರ್ೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಶಿಲ್ಪಾ ನಾಯಕವಾಡಿ, ಸ್ವಾಗತಿಸಿ, ವಂದಿಸಿದರು.