ಜ.12 ರಿಂದ ಹಾಲುಮತ ಸಂಸ್ಕೃತಿ ವೈಭವ: ವೀರನಗೌಡ ಪಾಟೀಲ
ಕೊಪ್ಪಳ 06: ಇದೇ ಜನವರಿ 12ರಿಂದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮವು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ತಿಂಥಣಿ ಬ್ರಿಜ್ ನಲ್ಲಿ ಅತ್ಯಂತ ವೈಭವದಿಂದ ಜರುಗುವುದು ಎಂದು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠದ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಬಳೂಟಗಿ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮ ಜನವರಿ 12, 13, 14 ರಂದು ಮೂರು ದಿನಗಳ ಕಾಲ ಜರಗಲಿದ್ದು, ಜನವರಿ 12ರಂದು ಶಿವಸಿದ್ಧ ಯೋಗ ವಿದ್ಯಾ ಮಂದಿರ ಶಿಲನ್ಯಾಸ ಮತ್ತು ಪೂಜಾರಿಗಳ ಸಮಾವೇಶ ಜರುಗುವುದು, ಜಿ. 13 ರಂದು ಹಾಲುಮತ, ಭಾಸ್ಕರ ಕನಕರತ್ನ ಸಿದ್ಧ ಶ್ರೀ ಪ್ರಶಸ್ತಿ ಪ್ರಧಾನ ಮತ್ತು ಸನ್ಮಾನ ಸಮಾರಂಭ ಜರಗಲಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯಪಾಲರಾದ ಸಿ.ಎಚ್ ವಿಜಯಶಂಕರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು, ಶಾಸಕರು ಪಾಲ್ಗೊಳ್ಳುವರು, ಜಿ. 14ರಂದು ಸಿದ್ದರಾಮೇಶ್ವರ ಜಯಂತಿ ಪ್ರಯುಕ್ತ ಸರ್ವ ಸಿದ್ದರ ಸ್ಮರಣೋತ್ಸವ ಜರುಗುತ್ತದೆ ಎಂದರು.
ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠದ ಕೊಪ್ಪಳ ನಗರ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಮೋರನಾಳ ಮಾತನಾಡಿ ಈ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯಿಂದ ಪ್ರತೀ ತಾಲೂಕಿನಿಂದ 10 ಸಾವಿರ ಜನ ಪಾಲ್ಗೊಳ್ಳುತ್ತಾರೆ ಈ ಕಾರ್ಯಕ್ರಮಕ್ಕೆ ರಾಜ್ಯದ ಸಚಿವರು ಶಾಸಕರು ಮಾಜಿ ಸಚಿವರು ಮಾಜಿ ಶಾಸಕರು ಹಾಗೂ ಗಣ್ಯರು ಭಾಗವಹಿಸುತ್ತಾರೆ ಎಂದ ಅವರು ಕೊಪ್ಪಳ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಕೊಪ್ಪಳ ಜಿಲ್ಲೆಯ ಉಪಾಧ್ಯಕ್ಷರಾದ ಹನುಮಂತಪ್ಪ ಹನಮಪುರ, ಕೊಪ್ಪಳ ತಾಲೂಕಿನ ಅಧ್ಯಕ್ಷರಾದ ಮುದ್ದಪ್ಪ ಬೇವಿನಹಳ್ಳಿ, ಕುಕುನೂರು ತಾಲೂಕಿನ ಅಧ್ಯಕ್ಷರಾದ ಗಗನ್ ನೋಟಕಾರ, ಕುಷ್ಟಗಿ ತಾಲೂಕ್ ಅಧ್ಯಕ್ಷ ಕಲ್ಲೇಶ್ ತಳದ್, ಗಂಗಾವತಿ ತಾಲೂಕ ಅಧ್ಯಕ್ಷ ದುರ್ಗಪ್ಪ ಮೌರ್ಯ, ಕನಕಗಿರಿ ತಾಲೂಕ ಅಧ್ಯಕ್ಷ ನಾಗರಾಜ್ ಓಬಳಬಂಡಿ, ಯಲಬುರ್ಗಾ ತಾಲೂಕ ಅಧ್ಯಕ್ಷ ಶಿವು ಯಲಬುರ್ಗಿ, ಪರಶುರಾಮ್ ಅಣ್ಣಿಗೇರಿ, ದ್ಯಾಮನಗೌಡ್ರು ಉಪಸ್ಥಿತರಿದ್ದರು.