ಮನುಕುಲಕ್ಕೆ ಜಗದ್ಗುರು ಮೌನೇಶ್ವರ ಸ್ವಾಮಿಯೇ ದಾರಿ ದೀಪ: ಶಂಕರಾನಂದ ಸರಸ್ವತಿ ಶ್ರೀಗಳು
ರಾಣಿಬೆನ್ನೂರ 04: ಭಾರತದಲ್ಲಿ ಹಿಂದೂ ಧರ್ಮವು ಜೀವಂತವಾಗಿದೆ ಎಂದರೆ ಅದು ವಿಶ್ವಕರ್ಮ ಸಮಾಜದ ಶಿಲ್ಪಿಗಳ ಕೆತ್ತನೆಯ ಶಿಲ್ಪ ಕಲೆಯೇ ಕಾರಣವಾಗಿದೆ. ಇಡೀ ಮನುಕುಲಕ್ಕೆ ಜಗದ್ಗುರು ಮೌನೇಶ್ವರ ಸ್ವಾಮಿಯ ದಾರಿ ದೀಪವಾಗಿದ್ದಾರೆ ಎಂದು ವಡ್ನಾಳ ಸಾವಿತ್ರಿ ಪೀಠದ ಶಂಕರಾನಂದ ಸರಸ್ವತಿ ಶ್ರೀಗಳು ಹೇಳಿದರು.
ಇಲ್ಲಿನ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಮೌನೇಶ್ವರ ದೇವಸ್ಥಾನ ಸಮಿತಿ, ಕಾಳಿಕಾದೇವಿ ಮಹಿಳಾ ಮಂಡಳ, ತಾಲೂಕಾ ವಿಶ್ವಕರ್ಮ ಸಮಾಜ ಹಾಗೂ ತಾಲೂಕಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತಾಶ್ರಯಲ್ಲಿ ಮಂಗಳವಾರ ಜಗದ್ಗುರು ಮೌನೇಶ್ವರ ಜಯಂತಿ, ಉಪನಯನ ಮತ್ತು ಧರ್ಮಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಹಿಂದೂ ಧರ್ಮ ಸರ್ವಕಾಲಿಕ ಉಳುವಿಗೆ ಅಪರಶಿಲ್ಪಿ ಜಕನಾಚಾರಿಯಿಂದ ಹಿಡಿದು ಆಧುನಿಕ ಶಿಲ್ಪಿಗಳ ಕೊಡುಗೆ ಅಪಾರವಾಗಿದೆ. ಮಾನವನ ಜನ್ಮದಿಂದ ಮೃಣದ ವರೆಗೂ ವಿಶ್ವಕರ್ಮ ಸಮಾದ ಸೇವೆ ಇದೆ ಜೊತೆಕೆ ಕೃಷಿ ಸೇರಿ ಎಲ್ಲ ಕಾಯಕದವರಿಗೂ ಇವರ ಆಶ್ರಯ ಬೇಕೆ ಬೇಕು. ಹಿಂದೂ ಧರ್ಮದ ರಕ್ಷಣೆ ಮತ್ತು ಸಂಸ್ಕಾರ ಮತ್ತು ಸಂಸ್ಕೃತಿ ಉಳಿಯಾಬೇಕಾದೆರೆ ಪಾಶ್ಚಿಮಾತ್ಯ ಸಂಸ್ಸೃತಿಯ ಶಾಲೆ ಕಾಲೇಜುಗಳಿಗೆ ಮಕ್ಕಳನ್ನು ಕಳಿಸದೆ ಗುರುಕುಲ ಶಾಲೆಗಳಲ್ಲಿ ಕಲಿಸಬೇಕು ಎಂದು ಶ್ರೀಗಳು ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಉತ್ಸವ ಸಮಿತಿ ಅಧ್ಯಕ್ಷ ಪರಮೇಶ್ವರಾಚಾರ್ಯ ಬಡಿಗೇರ, ಗೌರವಾಧ್ಯಕ್ಷ ಬಸವರಾಜ ಬಡಿಗೇರ, ಕರಿಯಪ್ಪ ಕಾಟೇನಹಳ್ಳಿ ಮಾತನಾಡಿದರು.
ಬೆಳಗ್ಗೆ ಬ್ರಹ್ಮಿಮಹೂರ್ತದಲ್ಲಿ ಮೌನೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ್, ಅಲಂಕಾರ ಪೂಜೆ, ಮಹಾಮಂಗಳಾರತಿ ನೆರವೇರಿದವು ಹಾಗೂ ಜವಳ ಹಾಗೂ ಉಪನಯನ ಕಾರ್ಯಕ್ರಮಗಳು ನಡೆದವು. ಸಾಮೂಹಿಕ ವಿವಾಹವು ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಹಾವೇರಿ ಜಿಲ್ಲೆ ಪ್ರಥಮ ರಾಜ್ಯಕ್ಕೆ 10 ನೇಯ ರಾ್ಯಂಕ ಪಡೆದ ಸಹನಾ ಬಡಿಗೇರ ಮತ್ತು ಸಮಾಜದ ಸಾಧಕರನ್ನು ಸನ್ಮಾಸಿ ಗೌರವಿಸಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿರುಪಾಕ್ಷಪ್ಪ ಹಾವನೂರ, ಉತ್ಸವ ಸಮಿತಿ ಸದಸ್ಯರಾದ ಓಂಕಾರ್ಪ ಅರ್ಕಚಾರಿ, ಶಕುಂತಲಾ ಬಡಿಗೇರ, ಗೀರೀಶ ಕಮ್ಮಾರ, ಚಿದಾನಂದ ಬಡಿಗೇರ, ಹೇಮಾಚಾರ ಬಡಿಗೇರ, ವೀರಣ್ಣ ಅರ್ಕಾಚಾರಿ ಸೇರಿ ಮತ್ತಿತರರು ಇದ್ದರು.
ಫೋಟೊ:4ಆರ್‌ಎನ್‌ಆರ್06ರಾಣಿಬೆನ್ನೂರ:ಇಲ್ಲಿನ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಜಗದ್ಗುರು ಶ್ರೀ ಮೌನೇಶ್ವರ ಜಯಂತಿ, ಉಪನಯನ ಮತ್ತು ಧರ್ಮಸಮಾರಂಭವನ್ನು ವಡ್ನಾಳ ಸಾವಿತ್ರಿ ಪೀಠದ ಶಂಕರಾನಂದ ಸರಸ್ವತಿ ಶ್ರೀಗಳು ಉದ್ಘಾಟಿಸಿದರು.