ಬೆಂಗಳೂರು 12: ಶಾಸಕ ಸ್ಥಾನಕ್ಕೆ ತಾವು ನೀಡಿದ ರಾಜೀನಾಮೆಯನ್ನು ಸ್ವೀಕರಿಸುವಂತೆ, ಕಾಂಗ್ರೆಸ್ನಿಂದ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚಿಂಚೋಳಿಯ ಉಮೇಶ್ ಜಾಧವ್, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಸದಸ್ಯತ್ವ ಅನರ್ಹತೆ ಪ್ರಕರಣ ಕುರಿತು ಮಂಗಳವಾರ ರಮೇಶ್ ಕುಮಾರ್ ವಿಚಾರಣೆ ನಡೆಸಬೇಕಿತ್ತು. ವಿಚಾರಣೆ ದಿನದಂದೇ ಜಾಧವ್ ಪತ್ರ ಬರೆದಿದ್ದಾರೆ.
ಮಾಚರ್್ 4 ರಂದು ಕೋಲಾರ ಅಡಗ್ಗಲ್ ನ ತಮ್ಮ ನಿವಾಸಕ್ಕೆ ಖುದ್ದು ಭೇಟಿ ನೀಡಿ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ರಾಜೀನಾಮೆ ಪತ್ರ ಸ್ವೀಕರಿಸಿದ ತಾವು ಪರಿಶೀಲನೆ ನಡೆಸುವುದಾಗಿ ಹೇಳಿರುತ್ತೀರಿ.
ವಿಧಾನಸಭೆ ಕಾರ್ಯದಶರ್ಿ ಎಂ.ಕೆ.ವಿಶಾಲಾಕ್ಷಿ ಅವರು ರಾಜೀನಾಮೆಗೆ ಕಾರಣಗಳನ್ನು ಕೇಳಿ ಪತ್ರ ಬರೆದಿದ್ದು, ಪತ್ರಕ್ಕೆ ಸಮರ್ಪಕ ಉತ್ತರ ನೀಡಲಾಗಿದೆ. ಆದ್ದರಿಂದ ಆದಷ್ಟು ಬೇಗ ತಮ್ಮ ರಾಜೀನಾಮೆ ಪತ್ರವನ್ನು ಅಂಗೀಕರಿಸುವಂತೆ ಜಾಧವ್ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಲೋಕಸಭೆ ನಾಯಕ ಮಲ್ಲಿಕಾಜರ್ುನ ಖಗರ್ೆ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಕಲಬುರಗಿ ಕ್ಷೇತ್ರದಿಂದ ಬಿಜೆಪಿ ಅಭ್ಯಥರ್ಿಯಾಗಿ ಕಣಕ್ಕಿಳಿಯಲು ಮುಂದಾಗಿರುವ ಜಾಧವ್ , ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದರು. ಲೋಕಸಭಾ ಚುನಾವಣೆಗೆ ಸ್ಪಧರ್ೆ, ರಾಜೀನಾಮೆ ವಿಚಾರ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಅವರು ಉತ್ತಮ ಸಭಾಧ್ಯಕ್ಷರು. ಯಾವುದೇ ಒತ್ತಡಗಳಿಗೆ ಮಣಿಯದೇ ಅವರು ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ತಮಗೆ ಇದೆ ಎಂದರು.