ನವದೆಹಲಿ 16: ನಕಲಿ ಬ್ಯಾಂಕ್ ಖಾತೆ ಸೃಷ್ಟಿಸುವ ಮೂಲಕ ಜಮ್ಮು -ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಹಾಗೂ ಇನ್ನಿತರ ಮೂವರ ವಿರುದ್ಧ ಸಿಬಿಐ ಇಂದು ಜಾಜರ್್ ಶೀಟ್ ದಾಖಲಿಸಿದೆ.
2001ರಲ್ಲಿ ಫಾರೂಖ್ ಅಬ್ದುಲ್ಲಾ ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು. ಆ ಅವಧಿಯಲ್ಲಿ ಸುಮಾರು 113 ಕೋಟಿ ರೂಪಾಯಿ ಹಣವನ್ನು ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳ ಮೂಲಕ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದಿತ್ತು.
ಚಾಚರ್್ ಶೀಟ್ ನಲ್ಲಿ ಅಬ್ದುಲ್ಲಾ ಜೊತೆಗೆ ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೊಸಿಯೇಷನ್ ಕಾರ್ಯದಶರ್ಿ ಸಲೀಂ ಖಾನ್, ಖಜಾಂಚಿ ಮೊಹಮ್ಮದ್ ಅಹಸಾನ್ ಮಿಜರ್ಾ ಮತ್ತು ಜಮ್ಮು-ಕಾಶ್ಮೀರ ಬ್ಯಾಂಕು ಎಕ್ಸಿಕ್ಯೂಟಿವ್ ಬಸೀರ್ ಅಹ್ಮದ್ ಮಾಂಸಿರ್ ಹೆಸರನ್ನು ಸೇರಿಸಲಾಗಿದೆ.
ಈ ವಿಚಾರದ ಬಗ್ಗೆ ಪೊಲೀಸರು ಮೊದಲಿನಿಂದಲೂ ತನಿಖೆ ನಡೆಸುತ್ತಿದ್ದು, ರಾಮ್ ಮುನ್ಷಿ ಬಾಗ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಸೆಪ್ಟೆಂಬರ್ 2015 ರಲ್ಲಿ ಸಿಬಿಐ ಎಫ್ ಐರ್ ದಾಖಲಿಸಿದ ನಂತರ , ತನಿಖೆ ಆರಂಭವಾಗಿರುವುದಕ್ಕೆ ತಮ್ಮಗೆ ಸಂತೋಷವಾಗುತ್ತಿದೆ. ಸಿಬಿಐ ನಿಷ್ ಪಕ್ಷಪಾತವಾಗಿ ತನಿಖೆ ನಡೆಸಲಿದೆ ಎಂಬ ವಿಶ್ವಾಸ ಇರುವುದಾಗಿ ಫಾರೂಖ್ ಅಬ್ದುಲ್ಲಾ ಹೇಳಿಕೆ ನೀಡಿದ್ದರು. ಪೋಟೊ 5