ರಾಚವಿವಿ ಬಿಬಿಎ ವಿಭಾಗಕ್ಕೆ ಜಬೀನಾ ಪ್ರಥಮ ಯಾಂರ್ಕ್
ಮಹಾಲಿಂಗಪುರ 22: ಪಟ್ಟಣದ ಜಬೀನಾ ರಮ್ಜಾನಸಾಬ ಪಣಿಬಂದ ಬಿಬಿಎ ವಿಭಾಗದಲ್ಲಿ ವ್ಯಾಸಂಗ ಮಾಡಿ ಪರೀಕ್ಷೆಯಲ್ಲಿ ಪ್ರತಿ ಶತ 91.88 ಅಂಕಗಳನ್ನು ಹೊಂದಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಥಮ ಯಾಂರ್ಕ್ ಪಡೆದು ಮಹಾಲಿಂಗಪುರ ಪಟ್ಟಣ ಹಾಗೂ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. 2021 ರಿಂದ 2024 ರವರೆಗೆ ಜಮಖಂಡಿ ಬಿಎಲ್ ಡಿಇ ಅಸೋಸಿಯೇಷನ್ ಕಾಮರ್ಸ್ ಬಿ.ಎಚ್.ಎಸ್. ಆರ್ಟ್ಸ್ ಮತ್ತು ಟಿಜಿಪಿ ಸೈನ್ಸ್ ಕಾಲೇಜ್ ನಲ್ಲಿ ಬಿಬಿಎ ಮಾಡಿರುವ ಈ ವಿಧ್ಯಾರ್ಥಿನಿ ಪರೀಕ್ಷೆಯಲ್ಲಿ 4200 ಪೈಕಿ 3859 ಪಡೆದುಕ್ಕೊಂಡು ಎಲ್ಲ ವಿಧ್ಯಾರ್ಥಿಗಳಿಗಿಂತ ಅತಿ ಹೆಚ್ಚು ಅಂಕಗಳನ್ನು ಗಳಿಸಿ ವಿಶ್ವ ವಿದ್ಯಾಲಯಕ್ಕೆ ಅಗ್ರ ಪ್ರಾಶಸ್ತ್ಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಭವಿಷ್ಯದ ವಿಚಾರಕ್ಕೆ ಬಂದಾಗ ಮುಂದೆ ಸ್ಪರ್ಧಾತ್ಮಕ ವಿಷಯಗಳ ಅಧ್ಯಯನ ಮಾಡಿ ಸರ್ಕಾರಿ ಮಟ್ಟದ ಉತ್ತಮ ಹುದ್ದೆಯನ್ನು ಹೊಂದುವ ಆಶೆಯನ್ನು ಪ್ರಕಟ ಪಡಿಸಿ, ಆ ನಿಟ್ಟಿನಲ್ಲಿಯೂ ಶ್ರಮವನ್ನು ವ್ಯಯಿಸಿ ಕಲಿತ ಶಾಲೆ, ಊರು ಮತ್ತು ಪರಿವಾರದ ಹೆಸರನ್ನು ತರುತ್ತೇನೆ ಎನ್ನುತ್ತಾಳೆ ವಿಧ್ಯಾರ್ಥಿನಿ. ತಂದೆ ರಮ್ಜಾನ್ ಸಣ್ಣ ಸೈಕಲ್ ರಿಪೇರಿ ಅಂಗಡಿ ಹೊಂದಿದವ, ಈ ವೃತ್ತಿಯಿಂದಲೆ ಬಂದ ಅಲ್ಪ ಆದಾಯದಲ್ಲಿ ಮಗಳ ವಿದ್ಯಾಭ್ಯಾಸ ಮತ್ತು ತುಂಬಿದ ಸಂಸಾರದ ಜವಾಬ್ದಾರಿ ನೀಗಿಸುತ್ತಿದ್ದು ಹೇಗೋ ಸಂಸಾರದ ಬಂಡಿ ಸಾಗುತ್ತಿದೆ. ಜಬೀನ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ಪ್ರಗತಿ ಶಾಲೆ ಮತ್ತು ಪ್ರೌಢ ಶಿಕ್ಷಣವನ್ನು ಎಸ್‌ಸಿಪಿ, ಕೆಎಲ್‌ಇ ಶಾಲೆಯಲ್ಲಿ ಮುಗಿಸಿ, ಪ್ರಸ್ತುತ ಕಾಯಕವನ್ನು ಪ್ರಗತಿ ಪ್ರೌಢ ಶಾಲೆಯಲ್ಲಿ ಇಂಗ್ಲೀಷ್ ವಿಷಯದ ಮೇಲೆ ಅತಿಥಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ತನಗೆ ಬಂದ ಅಲ್ಪ ವೇತನವನ್ನು ಪರಿವಾರದ ಖರ್ಚು ವೆಚ್ಚಗಳನ್ನು ಭರಿಸಲು ತಂದೆಗೆ ನೀಡುತ್ತಾಳೆ. ವಿದ್ಯಾರ್ಥಿನಿ ಜಬೀನ ಫಲಿತಾಂಶ ತಿಳಿದು ಪ್ರಗತಿ ಪ್ರೌಢಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಸಿಬ್ಬಂದಿಗಳು ಸೇರಿ ಸನ್ಮಾನಿಸಿ ಉತ್ತಮ ಭವಿಷ್ಯಕ್ಕೆ ಹಾರೈಸಿದರು. ಮುಖ್ಯೋಪಾಧ್ಯಾಯ ಎಚ್ ಡಿ ಬ್ಯಾಕೋಡ್, ಶಿಕ್ಷಕರಾದ ವಿಜಯಕುಮಾರ ಕುಳಲಿ, ಟಿ ಆಯ್. ವಸ್ತ್ರದ, ಬಿ ಬಿ. ಪೂಜಾರಿ, ಬಿ ಬಿ.ಶಿರಮಗೊಂಡ, ಬಿ ಎಲ್.ಮನ್ನಿಕೇರಿ ಶಿಕ್ಷಕಿಯರಾದ ಡಿ ಜಿ. ದೇಸಾಯಿ, ಎಸ್ ಆರ್.ಅತ್ತಿಮಠದ, ಪಿ ಎಂ.ಕರಿಜಾಡರ್, ಎಸ್ ಎಂ. ಬಡಿಗೇರ, ಪಿ ಎಂ.ಬೆಟಗೇರಿ ಮತ್ತು ಜೆ ಬಿ. ಹಿರೇಮಠ ಮುಂತಾದವರು ಇದ್ದರು.