ಜೆಎನ್ಯು ವಿದ್ಯಾರ್ಥಿ , ಅಧ್ಯಾಪಕರ ಮೇಲೆ ಹಲ್ಲೆ ಖಂಡನೀಯ JNU student, teacher attacked Reprehensible
Lokadrshan Daily
1/19/25, 2:15 PM ಪ್ರಕಟಿಸಲಾಗಿದೆ
ಹಾವೇರಿ : ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಹಾಗೂ ಎಸ್ಎಫ್ಐ ಮುಖಂಡರಾದ ಆಯಿಷಿ ಘೋಷ್, ಇನ್ನೊಬ್ಬ ಮುಖಂಡ ಸೂರಿ ಹಾಗೂ ಅಧ್ಯಾಪಕಿ ಪ್ರೊ. ಸುಚರಿತಾ ಸೇನ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಮೇಲೆ ಗೂಂಡಾಗಳು ಮಾರಣಾಂತಿಕ ಹಲ್ಲೆ ಮಾಡಿದ್ದು ಖಂಡನೀಯ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿರುವ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ರವಿವಾರ ಸಂಜೆ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಮೇಲೆ ಮುಸುಕುಧಾರಿ ಗೂಂಡಾಗಳು ನಡೆಸಿದ್ದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಹಾಗೂ ವಿ.ವಿಯ ವಿದಾರ್ಥಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸರಕಾರವನ್ನು ಒತ್ತಾಯಿಸಿ, ನಗರದ ಸಿದ್ದಪ್ಪ ವೃತ್ತದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹಾವೇರಿ ಜಿಲ್ಲಾ ಸಮಿತಿಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ದನುದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಸ್ವತಃ ಅಪರಿಚತರು ಕ್ಯಾಂಪಸ್ ಒಳಗಡೆ ಇದಾರೆ ಅಂತ ಪೋಲಿಸರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದೇ ಇರುವುದು ಕೇಂದ್ರ ಸರಕಾರವೇ ಈ ಘಟನೆಗೆ ಕುಮ್ಮಕ್ಕು ನೀಡಿ, ಶಿಕ್ಷಣ ಸಂಸ್ಥೆಗಳ ಮೇಲೆ ಧಾಳಿಗೆ ಮುಂದಾಗುತ್ತಿರುವುದು ದೇಶಕ್ಕೆ ಬಗೆದ ದೊಡ್ಡ ದ್ರೋಹವಾಗಿದೆ ಎಂದು ಕಿಡಿಕಾರಿದರು. ಈ ರೀತಿ ಗೂಂಡಾಗಳು ಮಾರಕಾಸ್ತ್ರಗಳೊಂದಿಗೆ ಕ್ಯಾಂಪಸ್ ಒಳಗೆ ಬರುವುದನ್ನು ತಡೆಯಲು ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಉಪಕುಲಪತಿಗಳು ವಿಫಲವಾಗಿದ್ದು, ಈ ಘಟನೆ ಕೇಂದ್ರ ಸರಕಾರ ಜೆಎನ್.ಯು ಮೇಲೆ ಪ್ರತೀಕಾರವಾಗಿ ನಡೆಸುತ್ತಿರುವ ಸಂಚಿನ ಮುಂದುವರಿದ ಧಾಳಿಯ ಭಾಗವಾಗಿದೆ. ಈ ತರಹದ ಗೂಂಡಾ ಧಾಳಿಗಳಿಂದ ವಿದ್ಯಾರ್ಥಿಗಳ ಧದವನಿ ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನು ಸರಕಾರ ಅರಿಯಬೇಕು ಹಾಗೂ ಹಲ್ಲೇಕೋರ ಗೂಂಡಾಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪೂಜಾರ ಸರಕಾರವನ್ನು ಒತ್ತಾಯಿಸಿದರು.
ಯುವ ವಕೀಲ ನಾರಾಯಣ ಕಾಳೆ ಮಾತನಾಡಿ, ಸಂಘ ಪರಿವಾರದ ಗುಂಡಾಗಳು ಮೊನ್ನೆ ಸಂಜೆಯ ಸುಮಾರಿಗೆ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಕ್ಯಾಂಪಸ್ ಸೇರಿದಂತೆ ವಿದ್ಯಾರ್ಥಿಗಳಿರುವ ಹಾಸ್ಟೆಲ್ ಮತ್ತು ಕೊಠಿಡಿಯೊಳಗೆ ನುಗ್ಗಿ ಕಬ್ಬಿಣದ ರಾಡ್, ಸಲಾಕೆ ಮತ್ತು ಇತರ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಜೆಎನ್ ಯು ವಿದ್ಯಾರ್ಥಿಗಳು ಆರೋಪಿಸುತ್ತಿದ್ದು, ಸರಕಾರ ಕೂಡಲೇ ತನಿಖೆ ಮಾಡಿ ಮುಸುಕುಧಾರಿ ಗೂಂಡಾಗಳ ಮೇಲೆ ಕಟಿಣ ಕ್ರಮ ಕಯಗೊಳ್ಳಬೇಕು.ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕ ಸಮುದಾಯದ ಮೇಲೆ ಅಮಾನುಷ ಧಾಳಿಯನ್ನು ದೇಶದ ಜನತೆ ಸಹಿಸುವುದಿಲ್ಲ. ಸರಕಾರ ಎಚ್ಚೆತ್ತುಕೊಂಡು ಮುಂದೆ ಈ ರಿತಿ ಘಟನೆ ಆಗದಂತೆ ಎಚ್ಚರಿಕೆ ವಹಿಸಬೇಕು, ಇಲ್ಲವಾದಲ್ಲಿ ತೀವ್ರ ಹೋರಾಟಕ್ಕೆ ವಿದ್ಯಾಥರ್ಿ ಸಮುದಾಯ ಮುಂದಾಗಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಸಿದರು.
ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ಹೊರಗಿನಿಂದ ಬಂದ ಕಿಡಿಗೇಡಿಗಳು ವಿದ್ಯಾರ್ಥಿ ಮುಖಂಡರನ್ನು ಮತ್ತು ಜನಪರವಾಗಿ ಆಲೋಚಿಸುವ ಪ್ರಾಧ್ಯಾಪಕರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಇವರ ಮೇಲೆ ದಾಳಿಯನ್ನು ಮಾಡಿದ್ದಾರೆ. ಈ ಪೂರ್ವಯೋಜಿತ ದಾಳಿಯನ್ನು ತಡೆಯುವಲ್ಲಿ ವಿ.ವಿ ಯ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿಯು ಸಂಪೂರ್ಣವಾಗಿ ವಿಫಲವಾಗಿದೆ. ಭಾರೀ ಭದ್ರತೆಯ ಮಧ್ಯೆ ಯೂ ಈ ದಾಳಿ ಆಗಿದೆ ಅಂದರೆ ಇದಕ್ಕೆ ವಿ.ವಿ ಆಡಳಿತ ಮಂಡಳಿಯ ಮತ್ತು ಭದ್ರತಾ ಸಿಬ್ಬಂದಿಗಳು ಸೇರಿದಂತೆ ಸ್ಥಳದಲ್ಲಿಯೇ ಇದ್ದ ಪೋಲೀಸರ ಮೌನವು ಧಾಳಿಕೋರರಿಗೆ ಸಹಕರಿಸಿದ್ದಾರೆಂದು ಅಪಾದಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರ, ಎಸ್ಎಫ್ಐ ಮುಖಂಡರಾದ ಹನುಮಂತಗೌಡ ಪಾಟೀಲ, ಹನುಮಂತಗೌಡ ಭರಮಗೌಡ್ರ, ಯಲ್ಲಪ್ಪಗೌಡ ಪಾಟೀಲ, ನಾಗರಾಜ ಪವಾಡಿ, ರವಿ,ಅರುಣ ಕಡಕೋಳ. ಮಹಮದ್, ಸಾಹಿಲ್ ಮುಲ್ಲಾ, ಪುಟ್ಟಪ್ಪ ಹರಿಜನ, ಪ್ರಶಾಂತ ಹಳ್ಳದಂಡಿ, ನವೀನಕುಮಾರ, ಫದರ್ಿನ್ ಖಾನ್, ಸೊಹೆಲ್, ತಬರಜ್ ಮಲೀಕ್ ಸೇರಿದಂತೆ ಹಲವಾರು ವಿದ್ಯಾರ್ಥಿ ಗಳು ಪಾಲ್ಗೊಂಡಿದ್ದರು.