ಬೆನಕನಹಳ್ಳಿ ಗ್ರಾಮದ ಭೀರಲಿಂಗೇಶ್ವರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಉದ್ಘಾಟಿಸಿದರು
ತಾಂಬಾ 13 : ಹಿಂದಿನ ಶಿಕ್ಷಣ ಪದ್ದತಿ ಇಂದಿನ ಮಕ್ಕಳಲ್ಲಿ ಕಾಣುತ್ತಿಲ್ಲ ಪಾಲಕರು ಮನೆಗಳಲ್ಲಿ ಮಕ್ಕಳಿಗೆ ಮೋದಲು ಗುರು ಹಿರಿಯರ ಬಗ್ಗೆ ಗೌರವ ಕುಡುವದನ್ನು ಕಲಿಸಬೇಕು ಅದು ಮಕ್ಕಳಲ್ಲಿ ಕಾಣುತ್ತಿಲ್ಲ ಮಕ್ಕಳನ್ನು ದುಷ್ಟಗಳಿಂದ ದೂರವಿಡಬೇಕು. ನಗು ನಮ್ಮ ಜೀವನದ ಮೂಲ ಓಷದವೆಂದು ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಹೇಳಿದರು.ಬೆನಕನಹಳ್ಳಿ ಗ್ರಾಮದ ಭೀರಲಿಂಗೇಶ್ವರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಧನೆ ಎನ್ನುವದು ಶ್ರೀಮಂತಿಕೆಯಿಂದ ಬರುವದಲ್ಲ ಅದು ಬಡತನದಲ್ಲಿ ಬಂದಿರುವದು. ಇಂದಿನ ಸ್ಪರ್ಧಾಧ್ಮಕ ಯುಗದಲ್ಲಿ ಸರಕಾರದ ಅನುದಾನದ ಹಂಗಿಲ್ಲದೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನಿಯವಾದದ್ದು. ಖಾಸಗಿ ಶಾಲೆಗಳ ಅನುದಾನಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳಬೆಕೆಂದು ಆಗ್ರಹಿಸಿದರು.
ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳ ತಂದೆಯವರಾದ ಬಸವರಾಜ ನಿಂಬರಗಿ ಅಧ್ಯಕ್ಷತೆ ವಹಿಸಿದ್ದರು ಸಂಸ್ಥೆಯ ಅಧ್ಯಕ್ಷ ಎಮ್.ಆರ್.ಪೂಜಾರಿ, ಶಿವನಗೌಡ ಪಾಟೀಲ, ರಾಜಕುಮಾರ ಪೂಜಾರಿ, ಎಮ್.ಎಸ್.ಪೂಜಾರಿ, ಈರ್ಪ ಡೋಣೂರ ಮುಖ್ಯ ಗುರುಮಾತೆ ನಾಗವೇಣಿ.ಆರ್.ಸಿದ್ಧಿ, ಬೀರ್ಪ ಚ್ಯಾಕರಿ ಉಪಸ್ಥಿತರಿದ್ದರು. ಇದಕ್ಕೂ ಮೋದಲು ಪ್ರಶಸ್ತಿ ಪ್ರಧಾನ ಸಮಾರಂಭ ಜರೂಗಿತು. ನಂತರ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಜರೂಗಿದವು.