ಜ. 21 ರಂದು ವಿವಿಧ ಮಹನೀಯರ ಜಯಂತಿಗಳನ್ನು ಸರ್ಕಾರ ಹಾಗೂ ಸಾರ್ವಜನಿಕರು ಸೇರಿ ವಿಜೃಂಭಣೆ ಹಾಗೂ ಸಂಭ್ರಮದಿಂದ ಆಚರಿಸಲು ಪೂರ್ವ ಭಾವಿ ಸಭೆ
ಬ್ಯಾಡಗಿ 09: ಪಟ್ಟಣದಲ್ಲಿ ಜ. 21 ರಂದು ವಿವಿಧ ಮಹನೀಯರ ಜಯಂತಿಗಳನ್ನು ಸರ್ಕಾರ ಹಾಗೂ ಸಾರ್ವಜನಿಕರು ಸೇರಿ ವಿಜೃಂಭಣೆ ಹಾಗೂ ಸಂಭ್ರಮದಿಂದ ಆಚರಿಸಲು ಪೂರ್ವ ಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಬುಧವಾರ ಸ್ಥಳೀಯ ತಹಶೀಲ್ದಾರ ಫಿರೋಜಾಷಾ ಸೋಮನಕಟ್ಟಿ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಶ್ರೀ ಸಿದ್ದರಾಮೇಶ್ವರ ಜಯಂತಿ, ಮಹಾಯೋಗಿ ವೇಮನ ಜಯಂತಿ ಹಾಗೂ ಅಂಬಿಗರ ಚೌಡಯ್ಯನವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಕೊಳ್ಳಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಫಿರೋಜಾಷಾ ಸೋಮನಕಟ್ಟಿ ಮಾತನಾಡಿ ಜ 14 ರಂದು ಈ ಮೂವರು ಮಹನೀಯರ ಜಯಂತಿ ದಿನಗಳನ್ನು ಆಚರಿಸಬೇಕಿದ್ದು, ಅಂದು ಸರ್ಕಾರಿ ರಜೆ ಘೋಷಣೆಯಾಗಿರುವುದರಿಂದಾಗಿ ಅಧಿಕಾರಿಗಳು, ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದೇಟು ಹಾಕಿ ನಿರಾಕರಿಸುವ ಸಂದರ್ಭ ಬರಲಿದ್ದು, ಆದ್ದರಿಂದ ಜ.14 ಬದಲಾಗಿ, ಜ.21 ರಂದು ಶ್ರೀ ಸಿದ್ದರಾಮೇಶ್ವರ ಜಯಂತಿ, ಶ್ರೀ ಮಹಾಯೋಗಿ ವೇಮನ ಜಯಂತಿ ಹಾಗೂ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಮುಂಜಾನೆ 11 ಘಂಟೆಗೆ ತಮ್ಮ ಕಛೇರಿಯ ಸಭಾಂಗಣದಲ್ಲಿ ಆಚರಿಸಲು ಪೂರ್ವ ಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತೆಂದರು. ಮೂವರು ಮಹನೀಯರ ಜೀವನ, ತತ್ವ, ಆದರ್ಶಗಳ ಕುರಿತು ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯ ಕ್ರಮ ಏರಿ್ಡಸುವಂತೆ ನಿರ್ಧಾರ ಕೈಗೊಳ್ಳಲಾಗಿದೆ.ಮೂವರು ಶ್ರೀಗಳು ಯಾವುದೇ ನಿರ್ದಿಷ್ಟ ಧರ್ಮ, ವರ್ಗಕ್ಕೆ ಸೀಮಿತರಾಗದೇ ಇಡೀ ಮಾನವ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರ ಜಯಂತಿಯನ್ನು ಮಾದರಿ ಕಾರ್ಯಕ್ರಮ ಆಚರಿಸಬೇಕಿದ್ದು, ಇದಕ್ಕೆ ವಿವಿಧ ಸಮುದಾಯಗಳ ಸಂಘ ಸಂಸ್ಥೆಗಳು ಅಗತ್ಯ ಸಹಕಾರ ನೀಡಬೇಕು ಹಾಗೂ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಸಹ ವ್ಯವಸ್ಥಿತ ರೀತಿಯಲ್ಲಿ ಆಚರಣೆ ನಡೆಯಬೇಕೆಂದರಲ್ಲದೇ ಸಭೆಗೆ ತಾಲೂಕಿನ ಅನೇಕ ಅಧಿಕಾರಿಗಳು ಗೈರು ಹಾಜರಾಗಿದ್ದು, ಕಾರಣ ಕೇಳಿ ನೋಟಿಸ್ ನೀಡಲು ತಹಶೀಲ್ದಾರರು ಸೂಚಿಸಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರಮೇಶ ಸುತ್ತಕೋಟಿ, ಜಯಣ್ಣ ಮಲ್ಲಿಗಾರ, ತಿಮ್ಮಣ್ಣ ವಡ್ಡರ, ಜೀತೇಂದ್ರ ಸುಣಗಾರ, ಮಂಜಣ್ಣ ಭೋವಿ, ಆನಂದ ಬಂಡಿವಡ್ಡರ, ಜಗದೀಶ ಕಣಿಗಲ ಭಾವಿ, ವೀರಭದ್ರ್ಪ ಗೊಡಚಿ, ಶಿವಾನಂದ ಸಾಲಿ, ಪಾಂಡು ಸುತಾರ, ನಿಂಗಪ್ಪ ಬಟ್ಟಲಕಟ್ಟಿ ಸೇರಿದಂತೆ ಇತರರಿದ್ದರು.