ಜ. 1ರಿಂದ ಲಕ್ಷ್ಮೀದೇವಿಯ ಜಾತ್ರೆ: ದನಗಳ ಭವ್ಯ ಪ್ರದರ್ಶನ
ರಾಯಬಾಗ 27: ರೈಲ್ವೆ ಸ್ಟೇಷನ (ಖೈರವಾಡಿ)ದಲ್ಲಿ ಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆ ಮತ್ತು ದನಗಳ ಭವ್ಯ ಪ್ರದರ್ಶನ ಜ.1 ರಿಂದ 4ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಜ.1 ರಂದು ಮುಂ.7.15 ಕ್ಕೆ ಲಕ್ಷ್ಮೀದೇವಿಗೆ ಮಹಾಭಿಷೇಕ, ನಂತರ ಮಹಾಪೂಜೆ, 10 ಗಂಟೆಗೆ ದೇವಿಗೆ ಉಡಿ ತುಂಬುವದು ಹಾಗೂ ಮಹಾನೈವೇದ್ಯ ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ಜರುಗುವುದು. ರಾತ್ರಿ ದೇವಿಯ ಉತ್ಸವ ಮೂರ್ತಿ ಭವ್ಯ ಮೆರವಣಿಗೆ ನೆರವೇರುವುದು. ಜ.2 ರಂದು ಸಂಜೆ ಸಾಯಕಲ್ ಶರ್ಯತ್ತು, ಕುದುರೆ ಶರ್ಯತ್ತು ಜರುಗಲಿವೆ. ಸಂಜೆ 6 ಗಂಟೆಗೆ ಅಲಖನೂರ ಮಲ್ಲಿಕಾರ್ಜುನ ಪ್ರಾಸಾದಿಕ ನಾಟ್ಯ ಸಂಘದಿಂದ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಜ.3 ರಂದು ಮುಂ.10 ಗಂಟೆಗೆ ದನಗಳ ಭವ್ಯ ಪ್ರದರ್ಶನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಗೆ ಜಂಗಿ ನಿಕಾಲಿ ಕುಸ್ತಿಗಳು ನಡೆಯಲಿವೆ. ಜ.4 ರಂದು ಮುಂ.10 ಗಂಟೆಗೆ ಜೋಡು ಎತ್ತಿನ ಗಾಡಿ ಶರ್ಯತ್ತು ಜರುಗಲಿವೆ ಎಂದು ರಾಯಬಾಗ ಸ್ಟೇಷನ ಶ್ರೀ ಲಕ್ಷ್ಮೀದೇವಿ ಟ್ರಸ್ಟ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.