ಕೇಂದ್ರ ಬಜೆಟ್ ಮಧ್ಯಮ ವರ್ಗದ ಕೈಹಿಡಿದು ಅನುಕೂಲ ಕಲ್ಪಿಸಿದ್ದು ಸ್ವಾಗತಾರ್ಹ
ರಾಣೇಬೆನ್ನೂರು 03: ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಮಧ್ಯಮ ವರ್ಗದ ಕೈಹಿಡಿದು ಅನುಕೂಲ ಕಲ್ಪಿಸಿದ್ದು ಸ್ವಾಗತಾರ್ಹ. ವಾರ್ಷಿಕ 12 ಲಕ್ಷದ ವರೆಗೆ ವೇತನ ಪಡೆಯುವ ದೇಶದ ಕೋಟ್ಯಾಂತರ ಉದ್ಯೋಗಿಗಳು ಹಾಗೂ ಹೆಚ್ಚಿನ ನೌಕರರು ಆದಾಯ ತೆರಿಗೆ ವಿನಾಯಿತಿ ಪಡೆಯಲಿದ್ದಾರೆ. ಇದರಿಂದ ಆ ವರ್ಗದ ಜನರ ಉಳಿತಾಯ ಪ್ರವೃತ್ತಿ ಹೆಚ್ಚುತ್ತದೆ. ಶೇರು ಮಾರುಕಟ್ಟೆ ಹಾಗೂ ಸರಕು-ಸೇವೆಗಳ ಮಾರುಕಟ್ಟೆ ಬೆಳವಣಿಗೆಗೆ ಪೂರಕವಾಗಿದೆ. ಹಿರಿಯ ನಾಗರಿಕರಿಗೂ ಅನುಕೂಲ ಕಲ್ಪಿಸಿದ್ದು ಸೂಕ್ತವಾಗಿದೆ.ಕಿಸಾನ್ ಕ್ರೆಡಿಟ್ ಕಾರ್ಡ್ ದಾರರಿಗೆ ಅನುಕೂಲಗಳಾಗಿವೆ.ಅರ್ಥ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಬಗ್ಗೆ ದೂರದೃಷ್ಟಿಯಿಂದಲಾದರೂ ವಿಶೇಷ ಗಮನ ಕೊಡಬೇಕಾಗಿತ್ತು ಎನಿಸುತ್ತದೆ-ಜಿ.ಬಿ.ಮಾಸಣಗಿ, ಮಾಜಿ ಅಧ್ಯಕ್ಷರು,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಹಾವೇರಿ