ನಾಡಿನಲ್ಲಿ ಸಮಸಮಾಜ ನಿರ್ಮಿಸುವುದು ಸಂವಿಧಾನದ ಆಶಯವಾಗಿದೆ : ಚೇತನ್ ಅಹಿಂಸಾ

It is the wish of the Constitution to build an egalitarian society in the country : Chetan Ahimsa

ನಾಡಿನಲ್ಲಿ ಸಮಸಮಾಜ ನಿರ್ಮಿಸುವುದು ಸಂವಿಧಾನದ ಆಶಯವಾಗಿದೆ : ಚೇತನ್ ಅಹಿಂಸಾ 

ಕಂಪ್ಲಿ 24: ಪ್ರತಿಯೊಬ್ಬರಲ್ಲಿ ಸಮಾನತೆ ತರಲು, ನಾಡಿನಲ್ಲಿ ಸಮಸಮಾಜ ನಿರ್ಮಿಸುವುದು ಸಂವಿಧಾನದ ಆಶಯವಾಗಿದೆ ಎಂದು ಚಲನಚಿತ್ರ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತಿಳಿಸಿದರು. ಅವರು ಪಟ್ಟಣದಲ್ಲಿ ಸಮಾನ ಮನಸ್ಕ ಪ್ರಗತಿಪರ ಹೋರಾಟಗಾರರ ವೇದಿಕೆಯಿಂದ ಏರಿ​‍್ಡಸಿದ್ದ ಸಮಾನತೆ ಕರ್ನಾಟಕ ನಿರ್ಮಾಣದ ಭವಿಷ್ಯ ಕುರಿತ ಚರ್ಚೆಯಲ್ಲಿ  ಭಾಗವಹಿಸಿ ಮಾತನಾಡಿದರು. ಅಂಬೇಡ್ಕರರ ಜೀವನ, ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿದಾಗ ಸ್ವತಂತ್ರ ಬದುಕಿನ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು ಅಂಬೇಡ್ಕರ್ ಅವರನ್ನು ಕೇವಲ ಸೌಲಭ್ಯಗಳಿಗಾಗಿ ಬಳಸಿಕೊಳ್ಳದೇ, ಅಂಬೇಡ್ಕರ್ ವಿಷಯಗಳನ್ನು ಓದುವ ಮೂಲಕ ಅರಿತುಕೊಳ್ಳಬೇಕು ಎಂದರು. ಸಮಸಮಾಜ ವಿಚಾರ ಮತ್ತು ತತ್ವ ಸಿದ್ಧಾಂತಗಳನ್ನು ನಂಬಿದವರು ಕರ್ನಾಟಕದಲ್ಲಿ ಸಂಘಟಿತರಾಗಬೇಕಿದೆ.ಜನಸಂಖ್ಯ ಆಧಾರಿಯ ಮೀಸಲಾತಿ ಅಗತ್ತವಿದೆ ಎಂದು ಪ್ರತಿಪಾಧಿಸಿದರು. ಎಸ್ಟಿ.ಎಸ್ಸಿ., 2ಎ ಮೀಸಲಾತಿ ಕೇಳುವುದರಲ್ಲಿ ಅರ್ಥವಿಲ್ಲ, ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಇಡಬ್ಲ್ಯುಎಸ್ ಮೀಸಲಾತಿ ನೀಡಿರುವುದು ಸರಿಯಲ್ಲವೆಂದ ಅವರು  ಇತ್ತೀಚೆಗೆ ಟಿ.ನರಸೀಪುರದ ಕುಂಭಮೇಳಕ್ಕೆ ರಾಜ್ಯ ಸರ್ಕಾರ 6 ಕೋಟಿ ರೂ ನೀಡುವ ಬದಲಿಗೆ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಈ ಅನುದಾನ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರಾದ ಕೆ.ಲಕ್ಷ್ಮಣ, ರವಿ ಮಣ್ಣೂರು, ರಮೇಶ ಸುಗ್ಗೇನಹಳ್ಳಿ, ಸಿ.ವೆಂಕಟೇಶ್, ಸಣಾಪುರ ಮರಿಸ್ವಾಮಿ,ಎನ್‌.ಬುಜ್ಜಿಕುಮಾರ್ ಸೇರಿದಂತೆ ಇತರರು ಇದ್ದರು.