ಲೋಕದರ್ಶನ ವರದಿ
ವಿಜಯಪುರ 14: ಸಮಾಜ ಬಿಟ್ಟು ಜನರಿಲ್ಲ. ಜನರನ್ನು ಬಿಟ್ಟು ಮಾಧ್ಯಮಗಳಿಲ್ಲ ಅದ್ದರಿಂದ ದ್ವನಿಯಿಲ್ಲದವರಿಗೆ ದ್ವನಿಯಾಗುವುದೇ ಮಾಧ್ಯಮಗಳ ಜವಾಬ್ದಾರಿಯೆಂದು ದೂರದರ್ಶನ ಮತ್ತು ಆಕಾಶವಾಣಿಯ ಕೊಪ್ಪಳ ಜಿಲ್ಲಾ ವರದಿಗಾರಾದ ರಾಜಸಾಬು ಎಂ. ಮುಲ್ಲಾರ ಹೇಳಿದರು.
ನಗರದ ಸರಕಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜಿನಲ್ಲಿ ಅಂತರಿಕ ಗುಣಮಟ್ಟ ಭರವಸೆಯ ಕೋಶದ ವತಿಯಿಂದ ನಡೆದ ವಿಚಾರ ಸಂಕೀರಣದಲ್ಲಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ವಿದ್ಯಾಥರ್ಿಗಳು ತುಲನಾತ್ಮಕವಾಗಿ ಪತ್ರಿಕೆಗಳನ್ನು ಓದಬೇಕು ಹೆಚ್ಚಿನ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಪತ್ರಕರ್ತರು ಸಮಾಜದ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು ಮಾನವೀಯ ಗುಣಗಳನ್ನು ಹೊಂದಿರಬೇಕು. ಮಾಧ್ಯಮಗಳು ಜನರ ವಿಶ್ವಾಸಾರ್ಹತೆಯನ್ನು ಕಲೆದಕೊಳ್ಳಬಾರದು. ಸಮಾಜದ ಹಿತದೃಷ್ಟಿಯಿಂದ ಸುದ್ದಿಗಳನ್ನು ಟಿ.ವಿ ಗಳಲ್ಲಿ ಪ್ರಸಾರ ಮಾಡಬೇಕು ಅನ್ಯಾಯಗಳ ಕುರಿತು ಮಾಧ್ಯಮಗಳ ಮೂಲಕ ಸಮಾಜಕ್ಕೆ ತಿಳಿಸಬೇಕುಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ ಲಮಾಣಿ ವಹಿಸಿದ್ದರು. ವೇದಿಕೆಯಲ್ಲಿ ಡಾ. ನರಸಿಂಹ ಗುಂಜಹಳ್ಳಿ, ಬಸವರಾಜ ಭಂಡಾರಿ ಇತರರು ಇದ್ದರು. ಲಕ್ಷ್ಮಿ ಕವಲೂರು ನಿರೂಪಿಸಿದರು. ಗೀತಾ ವಂದಿಸಿದರು. ಪವಿತ್ರ ಪ್ರಾರ್ಥನೆ ಗೀತೆ ಹಾಡಿದರು. ಲಕ್ಷ್ಮಿ ಸ್ವಾಗತಿಸಿದರು.