ಮಕ್ಕಳಿಗೆ ಕನಸು ಹಾಗೂ ಭವಿಷ್ಯವನ್ನು ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ವೀರೇಶ್ ಪಾಟೀಲ್

It is the first duty of all of us to create a dream and a future for children: Viresh Patil


ಮಕ್ಕಳಿಗೆ ಕನಸು ಹಾಗೂ ಭವಿಷ್ಯವನ್ನು ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ವೀರೇಶ್ ಪಾಟೀಲ್ 

ಮಾಂಜರಿ 21: ಮಕ್ಕಳು ದೇಶದ ಸಂಪತ್ತು. ಮಕ್ಕಳಿಗೆ ಕನಸು ಹಾಗೂ ಭವಿಷ್ಯವನ್ನು ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರತಿ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಹಾಗೂ ಚೈತನ್ಯ ಹೊಂದಿರುತ್ತಾರೆ. ಪೋಷಕರು ಮತ್ತು ಶಾಲಾ ಶಿಕ್ಷಕರು ತಮ್ಮ ಮಕ್ಕಳ ಕನಸನ್ನು ನನಸಾಗಿಸಲು ಸೂಕ್ತ ಅವಕಾಶ ಕಲಿಸಿಕೊಡಬೇಕು ಎಂದು ಸದಲಗಾ ಪಟ್ಟಣ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೀರೇಶ್ ಪಾಟೀಲ್ ಹೇಳಿದರು 


ಅವರು ಇಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಶಾಂತಿ ಸಾಗರ ಶಿಕ್ಷಣ ಪ್ರಸಾರಕ ಮಂಡಳದ  ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಶಿಕ್ಷಕರ ಸುಮನ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಮಕ್ಕಳು ಲವಲವಿಕೆಯಿಂದ ಮತ್ತು ಅವರಲ್ಲಿನ ಸೃಜನಶೀಲತೆ ಹೊರಬರಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ.ಮಕ್ಕಳು ಪತ್ಯೇತರ ಚಟುವಟಿಕೆಗಳ ಜೊತೆಗೆ ಓದಿನ ಕಡೆಯೂ ಗಮನಹರಿಸಬೇಕು. ಪರಿಶ್ರಮದಿಂದ ಪ್ರತಿಫಲ ಸಾಧ್ಯ. ಮುಂದಿನ ದಿನಗಳಲ್ಲಿ ಉತ್ತಮ ಜೀವನ ಸಾಗಿಸಲು ಈಗಿನಿಂದಲೇ ಪ್ರಯತ್ನಿಸಬೇಕು ಎಂದರು. 

ಮಕ್ಕಳು ಇತ್ತೀಚಿಗೆ ಮೊಬೈಲ್ ಗೀಳಿಗೆಬಲಿಯಾಗುತ್ತಿದ್ದಾರೆ. ಪೋಷಕರು ನಿಮಗೇಷ್ಟೇ ಒತ್ತಡದ ಕೆಲಸ ಇದ್ದರೂ ಮಕ್ಕಳು ಸುಮ್ಮನಿರುತ್ತಾರೆ ಎಂದು ಅವರಿಗೆ ಮೊಬೈಲ್ ನೀಡಬೇಡಿ ಎಂದು ತಿಳಿಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸದಲಗ ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆನವರ್ ಮಾತನಾಡಿ ಪ್ರಾಥಮಿಕ ಶಾಲಾಶಿಕ್ಷಣ ಹಂತವು ಮಕ್ಕಳಿಗೆ ಬುನಾದಿಯಾಗಿದೆ. ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಕ್ರಿಯಾಶೀಲತೆ ಆತ್ಮವಿಶ್ವಾಸ ವೃದ್ಧಿಯಾಗುವ ಕಲಿಕೆಯು ಈ ಹಂತದಲ್ಲೇ ಆರಂಭವಾಗುತ್ತದೆ.ಕ್ರಿಯಾತ್ಮಕ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಅನಾವರಣವಾಗುತ್ತವೆ ಎಂದರು.ಈ ವೇಳೆ ಸುರೇಂದ್ರ ಪಿಂಪಳೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು 

ಈ ಕಾರ್ಯಕ್ರಮಕ್ಕೆ ಶಿಕ್ಷಣ ಪ್ರಸಾರಕ ಮಂಡಳದ ಅಧ್ಯಕ್ಷರಾದ ಸನತ್ ಕುಮಾರ್ ಪಾಟೀಲ್ ಕಾರ್ಯದರ್ಶಿಗಳಾದ ದಾದಾಸಾಹೇಬ್ ಬೋಜಕರ್ ದುರ್ಯೋಧನ ವಸವಾಡೆ ಶ್ರೀಧರ ಭೋಜಕರ್ ಅಶೋಕ್ ಕೋಥಳಿ ಶ್ರೀಕಾಂತ್ ಕಟಕೋಳೆ ಸಾಗರ್ ಮಂಗಸುಳೆ ದತ್ತ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಅಮರ್ ಯಾದವ್ ಆದಪ್ಪ ಚೌಗುಲೆ ವಿದ್ಯಾಧರ್ ವಸವಾಡೆ ಮನೋಹರ್ ಭೋಜಕರ್ ನೇಮಿನಾಥ್ ವಸವಾಡೆ ಪಾಂಡುರಂಗ ಕುಲಕರ್ಣಿ ಹಾಗೂ ಹಿನ್ನೆಲೆದ ಶಿಕ್ಷಕ ವಿದ್ಯಾರ್ಥಿ ಬಾಲಕರು ಹಾಜರಿದ್ದರು ಮುಖ್ಯ ಗುರುಗಳಾದ ಸುನಿಲ್ ಒಡಗೋಲೆ ಸ್ವಾಗತಿಸಿ ಶಿಕ್ಷಕಿಯಾದ ಶೆಟ್ಟಿ ನಿರೂಪಿಸಿ ವಂದಿಸಿದರು ಈ ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಮತ್ತು ಶಿಕ್ಷಕಿ ಹಾಗೂ  ಶಿಕ್ಷಕರನ್ನು ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಿದರು