ಸಂಸ್ಕಾರ, ಸಂಸ್ಕೃತಿ ಅಳವಡಿಸಿದಾಗ ಭವಿಷ್ಯದಲ್ಲಿ ಯಶಸ್ವಿ ಕಾಣಲು ಸಾಧ್ಯವಿದೆ: ದೊಡ್ಡಗೌಡ್ರ

It is possible to see success in the future when samskara, culture is implemented: Dodda Gowdra

ಸಂಸ್ಕಾರ, ಸಂಸ್ಕೃತಿ  ಅಳವಡಿಸಿದಾಗ ಭವಿಷ್ಯದಲ್ಲಿ ಯಶಸ್ವಿ ಕಾಣಲು ಸಾಧ್ಯವಿದೆ: ದೊಡ್ಡಗೌಡ್ರ 

  ಶಿಗ್ಗಾವಿ  06: ತಾಯಿ ನೀಡುವ ಸಂಸ್ಕಾರ, ಸಂಸ್ಕೃತಿಗಳು ಶ್ರೇಷ್ಟವಾಗಿದ್ದು, ಅವುಗಳನ್ನು ಬದುಕಿಗೆ ಅಳವಡಿಸಿದಾಗ ಭವಿಷ್ಯದಲ್ಲಿ ಯಶಸ್ವಿ ಕಾಣಲು ಸಾಧ್ಯವಿದೆ. ಅಂತಹ ಚಿಂತನೆಗಳು ಮಕ್ಕಳಲ್ಲಿ ಮೂಡಲಿ ಎಂದು ಸ್ನೇಹಜೀವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೀರನಗೌಡ ದೊಡ್ಡಗೌಡ್ರ ಹೇಳಿದರು. 

      ತಾಲೂಕಿನ ಹೊಸೂರ ಗ್ರಾಮದ ಸರಸ್ವತಿ ಇಂಗ್ಲಿಷ್ ಮಾದ್ಯಮ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ವಿವಿಧ ಸಾಧಕರನ್ನು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಅವರು ಮಕ್ಕಳು ಉತ್ತಮವಾಗಿ ಅಭ್ಯಾಸ ಮಾಡಿ ಉನ್ನತ ದರ್ಜೆಯ ಹುದ್ದೆಯನ್ನು ಅಲಂಕರಿಸಿದಾಗ ಸಂಸ್ಥೆಗೂ ಹೆಮ್ಮೆ ಕಲಿಸಿದ ಗುರುಗಳಿಗೆ ಹೆಮ್ಮೆ ಇರುತ್ತದೆ ಎಂದರು. 

    ಕುಮಾರಪಟ್ಟಣದ ಪುಣ್ಯಕೋಟಿಮಠದ ಜಗದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಲಮಾಣಿ, ಉಪಾಧ್ಯಕ್ಷ ಧರಣೇಂದ್ರ ಪುಟ್ಟಣ್ಣವರ, ಎಸ್‌.ಬಿ.ಐ ಬ್ಯಾಂಕ್ ವ್ಯವಸ್ಥಾಪಕ ಜಗನಮೋಹನ, ಅದಪ್ಪ ಛಬ್ಬಿ, ಫಕ್ಕೀರಗೌಡ ಪಾಟೀಲ, ಈರ​‍್ಪ ಡವಗಿ, ಲಕ್ಷ್ಮಣ ಸುಣಗಾರ ಸೇರಿದಂತೆ ಗ್ರಾಪಂ ಸದಸ್ಯರು, ಶಾಲೆ ಶಿಕ್ಷಕರು, ಸಿಬ್ಬಂದಿ ಇದ್ದರು. 

   ನಂತರ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮದ ಜನರನ್ನು ರಂಜಿಸಿದವು.