ಶಿಕ್ಷಣ, ಸಂಘಟನೆ, ಹೋರಾಟದಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ
ಕಂಪ್ಲಿ 29: ಶೋಷಣೆರಹಿತ ಸಮಾಜಕ್ಕಾಗಿ ಹಂಬಲಿಸಿದ ಡಾ.ಬಿ.ಆರ್.ಅಂಬೇಡ್ಕರ್, ನಾಡಿನ ಜನತೆಗೆ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಸಂದೇಶ ನೀಡಿದ್ದಾರೆ. ಹಿಂದುಳಿದ ಸಮಾಜ ಶಿಕ್ಷಣ ಪಡೆದು ಪ್ರಗತಿ ಸಾಧಿಸಬೇಕು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಕಂಪ್ಲಿ ಕ್ಷೇತ್ರ ಅಧ್ಯಕ್ಷ ಸಿ.ಎ.ಚನ್ನಪ್ಪ ಹೇಳಿದರು. ತಾಲೂಕಿನ ಹಂಪಾದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಹೋರಾಟ, ಸಂಘಟನೆ, ಶಿಕ್ಷಣ ಇಲ್ಲ ಅಂದ್ರೆ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಸೇನೆಯ ಸಿದ್ದಾಂತಗಳಿಗೆ ತಕ್ಕಂತೆ ಹೋರಾಟದ ರೂಪುರೇಷೆ ಮಾಡಿಕೊಳ್ಳಬೇಕು.
ಪ್ರತಿಯೊಬ್ಬ ಪದಾಧಿಕಾರಿಗಳು ಹೋರಾಟದ ಮೂಲಕ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕು. ರಾಜಾಧ್ಯಕ್ಷ ಕೋದಂಡರಾಮ್ ಅವರು ರಾಜ್ಯದಲ್ಲಿ ಸಾಕಷ್ಟು ಚಳುವಳಿಗಳನ್ನು ಮಾಡುತ್ತಾ, ಶೋಷಿತರಿಗೆ ಹಾಗೂ ಬಡವರಿಗೆ ನ್ಯಾಯ ಕೊಡಿಸುವಂತ ಕೆಲಸ ಮಾಡುತ್ತಿದ್ದು, ಅವರ ದಾರಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು. ರಾಮಸಾಗರ ಗ್ರಾಮ ಘಟಕ ಅಧ್ಯಕ್ಷ ವಿಶ್ವನಾಥ, ಉಪಾಧ್ಯಕ್ಷ ಪರಶುರಾಮ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಆಯ್ಕೆ: ಇಲ್ಲಿನ ಹಂಪಾದೇವನಹಳ್ಳಿ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹೆಚ್.ಶಂಕ್ರ್ಪ(ಅಧ್ಯಕ್ಷ) ರಾಮಾಂಜಿನಿ(ಉಪಾಧ್ಯಕ್ಷ), ಹೆಚ್.ಬಸವರಾಜ (ಪ್ರಧಾ ಕಾರ್ಯದರ್ಶಿ), ಹೆಚ್.ಪವನ್ ಕುಮಾರ್(ಖಜಾಂಚಿ), ಜನಧನ್(ಸಹ ಕಾರ್ಯದರ್ಶಿ), ಸದಸ್ಯರಾಗಿ ಹೆಚ್.ಚಂದ್ರ, ಹೆಚ್.ರಾಜ, ಗಂಗಾಧರ, ಸಿ.ಗಾದಿಲಿಂಗಪ್ಪ, ಹೆಚ್.ಸುರೇಶ, ಹೆಚ್.ಶೇಖರ, ಹೆಚ್.ಸುಂಕಪ್ಪ, ಹುಲುಗಪ್ಪ, ರುದ್ರ್ಪ, ಗಂಗಾಧರ, ವಿಜಯ, ಪುರುಷೋತ್ತಮ, ಪರಶುರಾಮ, ಪ್ರಭು, ಕಾರ್ತಿಕ, ಪಾಂಡು, ರಾಜ, ಹೆಚ್.ಸ್ವಾಮಿ, ರೇಣುಕಪ್ಪ, ಸೂರಿ, ಬಸವ, ಚಂದ, ಮಹೇಶ, ರಾವಿ ಇವರು ಸರ್ವಾನುಮತದಿಂದ ಆಯ್ಕೆಗೊಂಡರು. ನಂತರ ನೂತನ ಪದಾಧಿಕಾರಿಗಳಿಗೆ ಸಂಘಟನೆಯ ಶ್ಯಾಲು ಹಾಕಿ, ಗೌರವಿಸಲಾಯಿತು.