ರೈತರು ನಮ್ಮ ಅನ್ನದಾತರು ಅವರನ್ನು ನಿತ್ಯ ಸ್ಮರಿಸಿದರು ಸಾಲದು
ಹೊಸಪೇಟೆ 12: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ವಾಸುದೇವ ಮೇಟಿ ಬಣ ಹಾಗೂ ಜಿಲ್ಲಾಧ್ಯಕ್ಷರಾದ ಸಿ.ಎ ಗಾಳೆಪ್ಪ ಇವರ ನೇತೃತ್ವದಲ್ಲಿ ರೈತ ದಿನಾಚರಣೆ 2024 ಅಂಗವಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ದಿನಾಂಕ 27. 12. 2024 ಶುಕ್ರವಾರ ಬೆಳಗ್ಗೆ 9ಕ್ಕೆ ಸ್ಥಳ ಒಳಾಂಗಣ ಕ್ರೀಡಾಂಗಣ ಸಭಾಭವನದಲ್ಲಿ ವಿಜಯನಗರ ಜಿಲ್ಲಾ ರೈತರ ಸಮಾವೇಶ ಹಮ್ಮಿಕೊಳ್ಳಲಾಗಿರುತ್ತದೆ.
ಈ ಪ್ರಯುಕ್ತ ರೈತರ ಹಬ್ಬ ಶೋಭ ಯಾತ್ರೆಯನ್ನು ಬೆಳಗ್ಗೆ 9 ಕ್ಕೆ ರೈತರ ನೇಗಿಲು ಪೂಜೆ ಸಲ್ಲಿಸಿ ವಡಕ ರಾಯ ದೇವಸ್ಥಾನದಿಂದ ಮುಖ್ಯಬೀದಿ, ಮೇನ್ ಬಜಾರ್, ಪಾದಗಟ್ಟಿ ಆಂಜನೇಯ ದೇವಸ್ಥಾನ, ದರ್ಗಾ ಮಸೀದಿ, ಹೂವಿನ ಮಾರುಕಟ್ಟೆ, ಗಾಂಧಿ ಚೌಕ್, ಮೂರ್ ಅಂಗಡಿವೃತ್ತ, ಬಸ್ಟ್ಯಾಂಡ್, ಪುನೀತ್ ರಾಜಕುಮಾರ್ ಸರ್ಕಲ್, ಶಾನ್ಭಾಗ್ ಸರ್ಕಲ್, ಅಂಬೇಡ್ಕರ್ ವೃತ್ತ, ಕಾಲೇಜ್ ರಸ್ತೆ, ಮುಖಾಂತರ ವಿವಿಧ ಆಕರ್ಷಕ ಸ್ಥಳೀಯ ಕಲಾತಂಡಗಳು ಕಳಸ ಹೊರುವುದು, ಡೊಳ್ಳು, ಕೋಲಾಟ, ಭಜನೆ, ಹಲಗಿ, ತಾಶಾ, ನಂದಿ ಕೋಲು, ಕಹಳೆ, ಹಾಗೂ ಮುಂತಾದವುಗಳ ಹಿರಿಯರು ಹಾಗೂ ಕಿರಿಯರು ಮಹಿಳೆಯರು ಸೇರಿ ಮೆರವಣಿಗೆ ಮುಖಾಂತರ ಒಳ ಕ್ರೀಡಾಂಗಣಕ್ಕೆ ಬಂದು ಸಮಾರಂಭದಲ್ಲಿ ಸೇರುವುದಾಗಿರುತ್ತದೆ.
ಈ ನಿಮಿತ್ತ ರೈತರ ಹಬ್ಬ ಶುಭಾ ಯಾತ್ರೆಯ ಬಿತ್ತಿ ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎನ್ ಮಹಮ್ಮದ್ ಇಮಾಮ್ ನಿಯಾಜಿರವರು ರೈತರು ದೇಶದ ಬೆನ್ನೆಲುಬು ಎಂದು ಪುಸ್ತಕಗಳು ಪ್ರಬಂಧಗಳಲ್ಲಿ ಮಾತ್ರ ಉಳಿದಿದೆ ಆದರೆ ವಾಸ್ತವದಲ್ಲಿ ರೈತರ ಸಂಕಷ್ಟಗಳನ್ನು ಕೇಳುವವರು ಅಷ್ಟಕಷ್ಟೇ ಇರುತ್ತಾರೆ. ಈ ದೇಶದ 140 ಕೋಟಿ ಜನಸಂಖ್ಯೆಗೆ ಊಟ ಹಾಕುತ್ತಿರುವ ರೈತರು ನಮ್ಮ ಅನ್ನದಾತರು. ಅವರನ್ನು ನಿತ್ಯ ಸ್ಮರಿಸಿದರು ಸಾಲದು.
ಆದ್ದರಿಂದ ವಿಶೇಷವಾಗಿ ರೈತರ ದಿನಾಚರಣೆ ಅಂಗವಾಗಿ ವಿಜಯನಗರ ಜಿಲ್ಲಾ ರೈತರ ಸಮಾವೇಶವನ್ನು ಹಮ್ಮಿಕೊಂಡಿದ್ದು ಇದಕ್ಕೆ ಸಚಿವರುಗಳು ಶಾಸಕರುಗಳು ಎಲ್ಲಾ ನಗರಸಭಾ ಸದಸ್ಯರು ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘ ಸಂಸ್ಥೆಗಳು ಪಕ್ಷಾತೀತವಾಗಿ ಎಲ್ಲಾ ಧರ್ಮಗಳ ಮುಖಂಡರು ಆಗಮಿಸುತ್ತಿದ್ದು ಇದು ಕೇವಲ ರೈತರ ಹಬ್ಬ ಅಲ್ಲ ಇಡೀ ನಾಡಿನ ಹಬ್ಬ ಎಂದು ತಿಳಿದು ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ರೈತ ಸಂಘದ ಮುಖಂಡರುಗಳಾದ ವೆಂಕಟೇಶ್, ಕುಬೇರ, ಬೀನಾ, ರೂಪ, ಲತಾ, ರಾಧಾ, ಮಾಲಾ, ಭಾಗ್ಯ, ರತ್ನಮ್ಮ, ಗಿರಿಜಮ್ಮ, ಲಕ್ಷ್ಮಿ, ಕೃಪ, ಕಮಲಾಪುರ ಬಸಣ್ಣ, ಸೋಮಣ್ಣ, ನೂರಾರು ಮುಖಂಡರುಗಳು ಭಾಗವಹಿಸಿದ್ದರು.