ಮೂಡಲಗಿ: ಕಾಯಕ ಎಂದರೆ ಬರೀ ಕೆಲಸವಲ್ಲ ಅದು ನಿಜವಾದ ನೆಮ್ಮದಿ

ಲೋಕದರ್ಶನ ವರದಿ

ಮೂಡಲಗಿ 12:  ಕಾಯಕ ಎಂದರೆ ಬರೀ ಕೆಲಸವಲ್ಲ ಅದು ನಿಜವಾದ ನೆಮ್ಮದಿ, ನಿರಂತರವಾದ ಕಾಯಕ ಮಾತ್ರ ಮನುಷ್ಯನನ್ನು ಕಾಪಾಡುತ್ತದೆ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

    ಇಲ್ಲಿಯ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಿಂದ ಹುಣ್ಣಿಮೆಯ ಪ್ರಯುಕ್ತ ಗಾರ್ಡನ್ ಅಭಿವೃದ್ದಿ ಸಂಸ್ಥೆಯೂ ಪತ್ರಕರ್ತ ಸುಭಾಸ ಗೊಡ್ಯಾಗೋಳ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ 29ನೇ ಶಿವಾನುಭವಗೋಷ್ಠಿ ಹಾಗೂ ಗುರು ದತ್ತತ್ರೇಯ ಜಯಂತಿಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ಮನುಷ್ಯನ ಮನಸ್ಸು, ಬುದ್ದಿ, ಧ್ಯಾನ, ಭಕ್ತಿ, ಆತ್ಮದಂತ ಸಂಗತಿಗಳು ಬಾಹ್ಯದಲ್ಲಿ ಕಾಣದಿದ್ದರು ಅಂತರಂಗದಿಂದ ಕಾಣುವಂತೆ ಮಾಡುವ ಕಲೆಗಾರಿಕೆ ಗುರುವಿಗಿದೆ. ಗುರುಭಕ್ತಿಯು ಸರ್ವಕಾಲಿಕ ಶ್ರೇಷ್ಠವಾದದ್ದು, ಅಂತರಂಗವನ್ನು ಶುದ್ಧಿಕರಿಸಿ ಬದುಕನ್ನು ಸುಂದರಗೊಳಿಸುವ ಶಕ್ತಿ ಗುರುವಿಗೆ ಮಾತ್ರ ಇದೆ. ಮಾಧ್ಯಮ ಮಿತ್ರರು ಶಿವಾನುಭವಗೋಷ್ಠಿಯನ್ನು ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಮಾಧ್ಯಮದವರು ಆಧ್ಯಾತ್ಮಿಕದ ಕಡೆಗೆ ಹೆಚ್ಚು ಒಲವೂ ತೋರಿದರೆ ಸಮಾಜವೂ ಆಧ್ಯಾತ್ಮಿಕದ ಕಡೆಗೆ ಗಮನ ಹರಿಸುತ್ತದೆ. ನಮ್ಮ ದೇಶ ಸಾಧು, ಸಂತರು, ಶರಣರು, ಪುಣ್ಯ ಪುರುಷರ ದಾರ್ಶನಿಕರ ಬೀಡು, ಆಧ್ಯಾತ್ಮಿಕ ಮತ್ತು ಯೋಗದ ನೆಲೆಯಾಗಿರುವ ಮತ್ತು ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿರುವ ಭಾರತದ ನೆಲದಲ್ಲಿ ವಾಸಿಸುವವರೆಲ್ಲರು ಪುಣ್ಯವಂತರು ಎಂದು ಹೇಳಿದರು. 

ನಾಗನೂರಿನ  ಮಾತೋಶ್ರಿ ಕಾವ್ಯಾಶ್ರಿ ಅಮ್ಮನವರು ಮಾತನಾಡಿ, ಭಕ್ತಿ ಮಾರ್ಗದಲ್ಲಿ ನಡೆಯುವ ಮನುಷ್ಯ ಜೀವನದಲ್ಲಿ ಮುಕ್ತಿ ಪಡೆಯಬಲ್ಲ, ಶಿವಾನುಭವಗೋಷ್ಠಿಯೂ ಭಕ್ತರಿಗೆ ಧರ್ಮ ಸಂಸ್ಕಾರಗಳನ್ನು  ನೀಡಿ ಧರ್ಮದ ಹಾದಿಯಲ್ಲಿ ಸಾಗುವಂತೆ ಮಾಡುತ್ತದೆ ಎಂದರು.

ಕಂಕಣವಾಡಿಯ ಮಾರುತಿ ಶರಣರು  'ಕಾಯಕವೇ ಕೈಲಾಸ' ವಿಷಯ ಕುರಿತು ಪ್ರವಚನ ನೀಡಿದರು. ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದ ವೇದಮೂತರ್ಿ ಶಿವಪುತ್ರಯ್ಯ ಮಠಪತಿ, ಸದಾಶಿವ ಶೀಲವಂತ ಮಾತನಾಡಿದರು.  ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಭಜನಾ ಕಲಾವಿದರಿಂದ ಭಜನಾ ಹಾಗೂ ದತ್ತ ಜಯಂತಿ ನಿಮಿತ್ಯ ತೊಟ್ಟಿಲೋತ್ಸವ,  ಉಡಿ ತುಂಬುವ ಕಾರ್ಯಕ್ರಮ  ಜರುಗಿತು.

ಕಾರ್ಯಕ್ರಮದಲ್ಲಿ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ನ್ಯಾಯವಾದಿಗಳಾದ ಎಲ್.ವಾಯ್ ಅಡಿಹುಡಿ, ದೇವೆಂದ್ರ ಲಾತೂರ, ಮುತ್ತಪ್ಪ ಈರಪ್ಪನ್ನವರ, ಹಾಲಪ್ಪ ಗೊಡ್ಯಾಗೋಳ, ಚನ್ನಪ್ಪ ಚವರೆ, ಸುಭಾಸ ಗೊಡ್ಯಾಗೋಳ, ಭಗವಂತ ಉಪ್ಪಾರ, ರಮೇಶ ಉಪ್ಪಾರ, ಮಹಾಲಿಂಗ ಗೊಡ್ಯಾಗೋಳ, ಮಂಜು ದಾಸರ, ಶಿವೂ ಮರಡಿ, ಸಿದ್ದವ್ವ ಅಡಿಹುಡಿ, ಮಾಯವ್ವಾ ಗೊಡ್ಯಾಗೋಳ, ಪಾರ್ವತೆವ್ವಾ ಲಾತೂರ, ಸುನೀತ ಚವರೆ, ಸಾವಿತ್ರಿ ಅಟಮಟ್ಟಿ, ಚೇತನಾ ನಾಯರ್, ಮಾಲತಿ ಸಪ್ತಸಾಗರ, ಮಾಲಾ ಬಿಸನಕೊಪ್ಪ, ಸುನಂದ ಲಾತೂರ, ಮಹಾದೇವಿ ಗೊಡ್ಯಾಗೋಳ, ಪೂಣರ್ಿಮ ಗೊಡ್ಯಾಗೋಳ, ಲಕ್ಷ್ಮಿ ಗೊಡ್ಯಾಗೋಳ, ರೇವತಿ ಮರಡಿ  ಸೇರಿದಂತೆ ನೂರಾರು ಭಕ್ತರು ಪಾಲ್ಗೋಂಡಿದ್ದರು. ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ಸ್ವಾಗತಿಸಿದರು, ಗುರು ಗಂಗನ್ನವರ ನಿರೂಪಿಸಿದರು.