ಧಾರವಾಡ 26: ದೇಶದ ಬಹುಜನರ ಬದುಕಿನ ದೃಷ್ಟಿಯಿಂದ ಸಂವಿಧಾನದ ಆಶಯಗಳನ್ನು ಅರ್ಥೈ ಸಿಕೊಳ್ಳುವದು ಇಂದಿನ ಅವಶ್ಯವಾಗಿದೆ ಎಂದು ಕರ್ನಾ ಟಕ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಎಚ್. ಮೋಹನಕುಮಾರ ಅಭಿಪ್ರಾಯಪಟ್ಟರು.
ಅವರು ಕನರ್ಾಟಕ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರವು ಕವಿವಿಯ ಸುವರ್ಣಮಹೋತ್ಸವದ ಭವನದಲ್ಲಿ ಆಯೋಜಿಸಿದ 'ಸಂವಿಧಾನ ದಿನಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂವಿಧಾನವು ಬಹುಜನರ ಆಶೋತ್ತರಗಳನ್ನು ಅವರ ಬದುಕಿಗಾಗಿ ಯಾವ ರೀತಿಯಾಗಿ ಸ್ಪಂದಿಸಬೇಕು ಎಂಬವದು ಡಾ. ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ನಿರೂಪಣೆ ಇದೆ ಎಂದ ಅವರು ಪ್ರಸ್ತುತ ಸಂವಿಧಾನ ದಿನದ ಆಚರಣೆ ಅಷ್ಟೇ ಮುಖ್ಯವಲ್ಲ ಆದ್ದರಿಂದ ಪ್ರಸ್ತುತವಾಗಿ ಪ್ರತಿಯೊಬ್ಬರು ಸಂವಿಧಾನದ ಆಶಯ ಅರಿಯುವದು ಮತ್ತು ಅದರ ಅಧ್ಯಯನದ ಅವಶ್ಯಕತೆ ಇದೆ ಎಂದರು. ಸಮಾಜದ ಕಟ್ಟ ಕಡೆ ವ್ಯಕ್ತಿಗೆ ಈ ದೇಶದ ಸಂಪನ್ಮೂಲ ತಲುಪಬೇಕಾದ ಅವಶ್ಯಕತೆ ಇದ್ದು ಆ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಸಂವಿಧಾನವನ್ನು ಅದರ ಆಶಯ ಅನುಗುಣವಾಗಿ ಜಾರಿಗೊಳಿಸುವದು ಅವಶ್ಯವಾಗಿದೆ ಎಂದರು.
ಇತ್ತಿಚೀನ ಕೆಲ ಬೆಳವಣಿಗೆಯಿಂದ ದೇಶದಲ್ಲಿ ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಚಟುವಟಿಕೆಗಳು ನಡೆಯುತ್ತಿರುವದು ದುರದೃಷ್ಟಕರ ಎಂದ ಅವರು ಸಂವಿಧಾನವು ರಾಜ್ಯ ಸರಕಾರಗಳಿಗೆ ವಿಶೇಷವಾದ ಹಕ್ಕು ಬಾಧ್ಯತೆಗಳಿಗೆ ನೀಡಿದೆ ಆದರೆ ಕೇಂದ್ರಿಕೃತ ವ್ಯವಸ್ಥೆಯಿಂದ ರಾಜ್ಯ ಸರಕಾರದ ವ್ಯವಸ್ಥೆಯ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ ಎಂದರು. ದೇಶದಲ್ಲಿ ಸಮಾಜಿಕ ಅರ್ಥವ್ಯವಸ್ಥೆಯಿಂದ ಸಂಪನ್ಮೂಲಗಳ ಹಂಚಿಕೆ ಸುಲಭ ಎಂದ ಅವರು ಬಹುಜನರಿಗೆ ಸಮಾಜಿಕ, ಆರ್ಥಿ ಕ, ಮತ್ತು ರಾಜಕೀಯ ಹಕ್ಕುಗಳನ್ನು ನೀಡುವದು ಮತ್ತು ಅವರನ್ನು ಆಡಳಿತದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಮಾಡುವದು ಸಂವಿಧಾನದ ಮುಖ್ಯ ಆಶಯವಾಗಿದೆ ಎಂದರು.
ಸರಕಾರದ ಸಹಾಯಕ ಸಾಲಿಸಿಟರ್ ಜನರಲ್ ಆಫ್ ಇಂಡಿಯಾದ ಅರುಣ ಜೋಶಿ ಮಾತನಾಡಿ ಸಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು, ಅಸ್ಪೃಶ್ಯತೆಯಂತಹ ಪಿಡುಗು ಮುಂದಿನ ಜನಾಂಗಕ್ಕೆ ಸಿಗದಂತೆ ನಿವಾರಣೆ ಮಾಡಬೇಕಾದ ಕರ್ತವ್ಯ ಎಲ್ಲರ ಮೇಲೆ ಇದೆ ಎಂದ ಅವರು ಪ್ರಸ್ತುತ ಜನರಿಗೆ ಸಂವಿಧಾನದ ಮಹತ್ವ ಅದರ ಆಶಯವನ್ನು ತಿಳಿಸುವ ಕೆಲಸ ಆಗಬೇಕಾಗಿದೆ ಎಂದರು.
ಕವಿವಿ ಕುಲಸಚಿವ ಪ್ರೊ. ಸಿ.ಬಿ.ಹೊನ್ನು ಸಿದ್ಧಾರ್ಥ ಮಾತನಾಡಿ ಪ್ರಪಂಚದಲ್ಲಿ ಭಾರತದ ಸಂವಿಧಾನವು ಶ್ರೇಷ್ಠ ಸಂವಿಧಾನವಾಗಿದ್ದು, ಭಾರತೀಯ ಸಂವಿಧಾನವು ಸಮಾನತೆ, ಏಕತೆ ಮತ್ತು ವಿವಿಧತೆಯಲ್ಲಿ ಐಕ್ಯತೆಯನ್ನು ಮೂಡಿಸವುಲ್ಲಿ ಪಾತ್ರ ಬಹಳ ವಹಿಸಿದ್ದು, ಎಲ್ಲ ಜನರಿಗೆ ಜಾತ್ಯಾತೀತ ಸಂವಿಧಾನವಾಗಿದೆ ಎಂದ ಅವರು ಇಂದು ಕೆಲವು ಮೂಲಭೂತವಾದಿಗಳಿಂದ ಸಂವಿಧಾನದ ಕುರಿತು ಅಪಪ್ರಚಾರ ಮಾಡುತ್ತಿರುವದು ಖಂಡನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಪ್ರಭಾರ ಕುಲಪತಿ ಪ್ರೊ. ಎ.ಎಸ್ ಶಿರಾಳಶೆಟ್ಟಿ ಮಾತನಾಡಿ. ಸಂವಿಧಾನವು ಎಲ್ಲ ಜನರಿಗೆ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು, ಭಾರತಿಯ ಸಂವಿಧಾನದ ಆಶೋತ್ತರಗಳಿಗೆ ಧಕ್ಕೆ ಬರದಂತೆ ಸಂರಕ್ಷಿಸಬೇಕು ಎಂದರು.
ಕವಿವಿ ಅಂಬೇಡ್ಕರ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಸುಭಾಸಚಂದ್ರ ನಾಟೀಕಾರ, ಕುಲಸಚಿವರಾದ. ಡಾ.ಸಿ.ಬಿ.ಹೊನ್ನು ಸಿದ್ಧಾರ್ಥ, ಡಾ. ಶ್ಯಾಮಲಾ ರತ್ನಾಕರ, ಡಾ. ಶೀಲಾಧರ ಮುಗಳಿ, ಡಾ. ನಿಜಲಿಂಗಪ್ಪ ಮಟ್ಟಿಹಾಳ್, ಡಾ. ರವಿ ಕಾಂಬಳೆ, ಡಾ. ಎಸ್.ಕೆ.ಕಲ್ಲೋಳಕರ್, ಡಾ. ಎಮ್.ವಾಯ್, ಕರಿದುರ್ಗನ್ನವರ, ನಾರಾಯಣ ನಾರಕ್ಕನವರ, ಡಾ. ಸಂಗೀತಾ ಮಾನೆ ಸೇರಿದಂತೆ ಪ್ರಾಧ್ಯಾಪಕರು, ವಿದ್ಯಾಥರ್ಿಗಳು ಇದ್ದರು.
ಫೊಟೋ ಶಿಷರ್ಿಕೆ-3