ಲೋಕದರ್ಶನ ವರದಿ
ಶಿರಹಟ್ಟಿ 28: ಇತ್ತೀಚೆಗೆ ಶಹರ ಹಾಗೂ ಗ್ರಾಮೀಣ ಭಾಗದಲ್ಲಿ ಧರ್ಮಗಳ ಆಚರಣೆ ಜನರಲ್ಲಿ ಕಡಿಮೆಯಾಗಿ ಭಕ್ತಿ ಭಾವಗಳ ಬಗ್ಗೆ ಗೌರವವೇ ಇಲ್ಲದಂತಾಗಿದ್ದು, ಇಂಥಹ ಸ್ಥಿತಿಯಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಪಾರಂಪರಿಕ ಧಾಮರ್ಿಕ ನಂಬಿಕೆಯನ್ನು ಆಧುನಿಕ ಯುಗದಲ್ಲಿ ಜಾರಿಗೆ ತಂದಿರುವುದರಿಂದ ಯುವ ಪೀಳಿಗೆಗೆ ಧಾಮರ್ಿಕ ಜಾಗೃತಿ ಮೂಡುತ್ತಿದೆ ಎಂದು ತಿಳಿಸಿದರು.
ಅವರು ಮಂಗಳವಾರ ಬೆಳಿಗ್ಗೆ 8-00 ಗಂಟೆಗೆ ಹೊಳಲಮ್ಮದೇವಿ ದೇವಸ್ಥಾನ ಶ್ರೀಮಂತಗಡ/ದೇವಿಹಾಳದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಸಾಮೂಹಿಕ ವರ ಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ವೇದಮೂತರ್ಿ ಗುರುಲಿಂಗಯ್ಯ ಸ್ವಾಮಿಗಳು ಗುರಯ್ಯಹೊಂಬಳಮಠ ದೇವಿಹಾಳ ಇವರು ಧಾಮರ್ಿಕತೆಯ ಜಾಗೃತಿ ಕಾಂತ್ರಿಯನ್ನು ಧರ್ಮಸ್ಥಳ ಯೋಜನೆಯವರು ಮಾಡುತ್ತಿರುವುದು ಸಮಾಜಕ್ಕೆ ಧಾಮರ್ಿಕ ಶಿಕ್ಷಣದ ಕೊಡುಗೆಯಾಗಿದೆ ಎಂದು ತಿಳಿಸುತ್ತಾ,
ಮುಖ್ಯ ಅತಿಥಿಯಾಗಿ ಶಿವಪ್ರಕಾಶ ಮಹಾಜನಶೆಟ್ರ್ ನಿಕಟ ಪೂರ್ವ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಗದಗ ಇವರು ಮಾತನಾಡಿ ವೀರೇಂದ್ರ ಹೆಗ್ಗಡೆಯವರು ಧಾಮರ್ಿಕ ಪರಂಪರೆಯನ್ನು ಯಾವುದೇ ಜಾತಿ, ಬೇಧ ಭಾವನೆ ಇಲ್ಲದೇ ಸಮಾನವಾಗಿ ಸಾರುತ್ತಿರುವುದು, ನಮ್ಮೆಲ್ಲರಲ್ಲಿ ಜಾಗೃತಾ ಭಾವನೆ ಉಂಟು ಮಾಡುತ್ತಿರವುದು ಇಂತಹ ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಭಾವೈಕ್ಯತೆ, ಒಗ್ಗಟ್ಟು, ಹೊಂದಾಣಿಕೆ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯಾದ ಶಿವಣ್ಣ ಎಸ್. ರವರು ಮಾತನಾಡಿ ಶಿರಹಟ್ಟಿ ತಾಲೂಕಿನಲ್ಲಿ 3020 ಸ್ವಸಹಾಯ ಸಂಘಗಳಿದ್ದು ಪ್ರಸ್ತುತ ವರ್ಷ 8 ವಿಭಾಗಗಳಾಗಿ ವಿಂಗಡಿಸಿ 20 ವಲಯ ಮಟ್ಟದಧಾಮರ್ಿಕ ಪೂಜಾಕಾರ್ಯಕ್ರಮ ಮತ್ತುಧಾಮರ್ಿಕ ಸಭೆಯನ್ನು ಮಾಡಲಾಗಿತ್ತು. ಈ ದಿನ ಸರಿಯಾಗಿ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ 458 ವೃತಾಧಾರಿಗಳು ಭಾಗವಹಿಸಿರುತ್ತಾರೆ. ಸಾಮೂಹಿಕ ಧಾಮರ್ಿಕ ಪೂಜೆ ಮಾಡುತ್ತಿರುವುದರಿಂದ ಭಕ್ತಿಯ ಮತ್ತು ಹೊಂದಾಣಿಕೆಯ ಭಾವನೆಗಳ ಬೀಜವನ್ನು ಬಿತ್ತಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕ್ರಪ್ಪ ಯಲ್ಲಪ್ಪ ಬಾಕರ್ಿ ಅಧ್ಯಕ್ಷರು ಗ್ರಾ.ಪಂ.ರಣತೂರು ಇವರು ವಹಿಸಿದ್ದು, ವಿಠೋಬ ಶಿವಪ್ಪ ಕಾಶಣ್ಣನವರ ಶ್ರೀ ಹೊಳಲಮ್ಮ ದೇವಿ ಟ್ರಸ್ಟ್ ಕಮಿಟಿ ಶ್ರೀಮಂತಗಡ/ದೇವಿಹಾಳ ಯಲ್ಲಮ್ಮ ಬಸಪ್ಪ ಚಿಂಚಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರು ರಣತೂರು, ವಲಯದ ಮೇಲ್ವಿಚಾರಕರು, ಊರಿನ ಗಣ್ಯರು ಮತ್ತು 1000 ಕ್ಕೂ ಮಿಕ್ಕಿ ಗ್ರಾಮದ ಸದಸ್ಯರು ಭಾಗವಹಿಸಿದ್ದರು.